32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ : ಸೈಕಲ್ ಜಾಥ
32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಹಿನ್ನೆಲೆಯಲ್ಲಿ,ದೇವರಚಿಕ್ಕನಹಳ್ಳಿಯ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ಇಂದು ಸೈಕಲ್ ಜಾಥ ಹಮ್ಮಿಕೊಳ್ಳಲಾಗಿತ್ತು,ಈ ಮೂಲಕ ಪ್ರತಿಯೊಬ್ಬರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಕಿವಿ ಮಾತು ಹೇಳಲಾಯಿತು.

ರಸ್ತೆ ಸುರಕ್ಷತಾ ಭಿತ್ತಿ ಪತ್ರ ಹಿಡಿದು ಈ ಜಾಥದಲ್ಲಿ ನೂರಾರು ಶಾಲಾ ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು.
ಈ ಕಾರ್ಯಕ್ರಮವನ್ನು ಪ್ರಾದೇಶಿಕ ಸಾರಿಗೆ ಆಯುಕ್ತ ಶಿವಕುಮಾರ್ ಚಾಲನೆ ನೀಡಿದ್ದು,ಬೊಮ್ಮನಹಳ್ಳಿ ಶಾಸಕ ಅತೀಶ್ ರೆಡ್ಡಿ ಉಪಸ್ಥಿತರಿದ್ದರು.
ಬೆಳಗ್ಗೆ 7.30 ಕ್ಕೆ ಆರಂಭವಾದ ಈ ಸೈಕಲ್ ಜಾಥದಲ್ಲಿ ಶಾಲಾಮಕ್ಕಳು ಡ್ರೈವಿಂಗ್ ಶಾಲೆಯ ಸದಸ್ಯರು,ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಕಚೇರಿಯ ಆವಾರಣದಿಂದ ಪ್ರಾರಂಭವಾದ ಈ ಜಾಥಾ ಸಾಯಿಬಾಬ ದೇವಸ್ಥಾನದಿಂದ ಮುಂದೆ ಸಾಗಿ ಮೀನಾಕ್ಷಿ ಮಾಲ್ ನಿಂದ ಬನ್ನೇರುಘಟ್ಟ ಮಾರ್ಗವಾಗಿ ಬಂದು ಐಐಎಂ ಆರ್ಚ್ ನಿಂದ ಕಚೇರಿ ಆವರಣಕ್ಕೆ ಹಿಂದಿರುಗಿ ಜಾಥ ಕೊನೆಗೊಂಡಿತು.
ಈ ಜಾಥದಲ್ಲಿ 200 ರಿಂದ 250 ಜನ ಶಾಲಾ ಮಕ್ಕಳು ಸೈಕಲ್ ಹತ್ತಿ ಜಾಥಗೆ ಸೈ ಎಂದರು.
32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ