ಕನಸಿನಲ್ಲಿ ಮಂತ್ರವಾದಿ ರೇಪ್ ಮಾಡ್ತಾನೆ, ಮಹಿಳೆ ದೂರು!
ಬಿಹಾರದ ಔರಂಗಾಬಾದ್ನ ಒಂದು ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ಮಂತ್ರವಾದಿಯೊಬ್ಬ ತನ್ನನ್ನು ಕನಸಿನಲ್ಲಿ ಪದೇ ಪದೇ ಅತ್ಯಾಛಾರಗೈಯ್ಯುತ್ತಿದ್ದಾನೆಂದು ಪೊಲೀಸರಿಗೆ ದೂರು ನೀಡಿದ್ದಾಳೆ. ವರ್ಷದ ಆರಂಭದಲ್ಲಿ, ಜನವರಿಯಲ್ಲಿ ತಾನು ಮಗನ ಚಿಕಿತ್ಸೆಗಾಗಿ ಆ ಮಂತ್ರವಾದಿ ಬಳಿ ಹೋಗಿದ್ದೆ ಎಂದೂ ಮಹಿಳೆ ತಿಳಿಸಿದ್ದಾಳೆ.
15 ದಿನದ ಬಳಿಕ ಮಗನ ಸಾವು: ಮ ಸರಿಯಾಗುತ್ತಾನೆಂದು ಹೇಳಿ ಆ ಮಂತ್ರವಾದಿ ತನಗೆ ಮಂತ್ರವೊಂದನ್ನು ನೀಡಿ, ಇದನ್ನು ಅನುಷ್ಠಾನಗೊಳಿಸಲು ಹೇಳಿದ್ದ. ಮಂತ್ರವಾದಿ ಹೇಳಿದಂತೆ ಆ ಮಹಿಳೆ ಮಾಡಿದ್ದಾಳೆ. ಹೀಗಿದ್ದರೂ ಆಕೆಯ ಮಗ ಹದಿನೈದು ದಿನದ ಬಳಿಕ ಮೃತಪಟ್ಟಿದ್ದಾನೆ.
ಮಗನ ಸಾವಿನ ಬಳಿಕ ಮತ್ತೆ ಮಂತ್ರವಾದಿ ಭೇಟಿಯಾಗಿದ್ದ ಮಹಿಳೆ: ಮಗನ ಅಸಹಜ ಸಾವಿನ ಬಳಿಕ ಆ ಮಹಿಳೆ ಮತ್ತೆ ಮಂತ್ರವಾದಿ ಬಳಿ ತೆರಳಿದ್ದಾಳೆ. ಆತ ಮಂದಿರವೊಂದರಲ್ಲಿ ವಾಸಿಸುತ್ತಿದ್ದ. ಈ ವೇಳೆ ಮಹಿಳೆ ತನ್ನ ಮಗ ಮೃತಪಟ್ಟಿರುವುದನ್ನು ಪ್ರಶ್ನಿಸಿದ್ದಾಳೆ.
ಇನ್ನು ಮಂತ್ರವಾದಿಯ ಬಗ್ಗೆ ದೂರು ನೀಡಿರುವ ಮಹಿಳೆ ಈ ಹಿಂದೆ ಆತ ತನ್ನನ್ನು ಅತ್ಯಾಚಾರಗೈಯ್ಯಲು ಯತ್ನಿಸಿದ್ದ ಆಗ ಮಗ ತನ್ನನ್ನು ರಕ್ಷಿಸಿದ್ದ. ಆದರೆ ಇದಾದ ಬಳಿಕ ಆ ಮಂತ್ರವಾದಿ ಪದೇ ಪದೇ ಕನಸಿನಲ್ಲಿ ಬಂದು ಅತ್ಯಾಚಾರ ನಡೆಸುತ್ತಾನೆ ಎಂದಿದ್ದಾರೆ.
ದೂರಿನ ಬಳಿಕ ಪೊಲೀಸ್ ತನಿಖೆ: ಮಹಿಳೆ ಕೊಟ್ಟ ಲಿಖಿತ ದೂರಿನ ಬಳಿಕ ಪೊಲೀಸರು ಮಂತ್ರವಾಧಿಯನ್ನು ಠಾಣೆಗೆ ಕರೆಸಿದ್ದಾರೆ. ವಿಚಾರಣೆಯನ್ನೂ ನಡೆಸಿದ್ದಾರೆ. ಆದರೆ ಸಾಕ್ಷಿ ಇಲ್ಲದ ಕಾರಣ ಬಿಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿದ ಪೊಲೀಸ್ ಅಧಿಕಾರಿ ದೂರು ಕೊಟ್ಟ ಮಹಿಳೆ ಮಾನಸಿಕ ಅಸ್ವಸ್ಥಳಂತೆ ಕಂಡು ಬರುತ್ತಾಳೆ. ಕುಟುಂಮಬಸ್ಥರ ಬಳಿ ವಿಚಾರಿಸಿದಾಗ ಚಿಕಿತ್ಸೆ ನೀಡಲು ಮಾನಸಿಕ ರೋಗಿಗಳ ಸಂಸ್ಥೆಗೆ ಸೇರ್ಪಡೆಗೊಳಿಸಲಾಗಿದೆ ಎಂದಿದ್ದಾರೆ.