ಪ್ರತಿದಿನ ತಪ್ಪದೆ ಸನ್ ಬಾತ್ ಮಾಡಿದ್ರೆ ಸೋಂಕು, ಕಾಮಾಲೆ ಎಲ್ಲವೂ ದೂರ

First Published Feb 26, 2021, 3:09 PM IST

ಸೂರ್ಯನ ಕಿರಣಗಳಿಂದ ತಪ್ಪಿಸಿಕೊಳ್ಳಲು ನಾವು ಯಾವಾಗಲೂ ಒಂದಲ್ಲ ಒಂದು ವಿಧಾನಗಳನ್ನು ಬಳಸುತ್ತೇವೆ.  ಮುಖವನ್ನು ದುಪಟ್ಟಾಗಳಿಂದ ಕಟ್ಟುವುದು, ಕೆಲವೊಮ್ಮೆ ದುಬಾರಿ ಸನ್ ಸ್ಕ್ರೀನ್ ಬಳಸುವುದು ಹೀಗೆ ಬೇರೆ ಬೇರೆ ರೀತಿಯಲ್ಲಿ ಸೂರ್ಯನಿಂದ ರಕ್ಷಣೆ ಪಡೆಯಲು ಪ್ರಯತ್ನಿಸುತ್ತಾರೆ.  ಆದರೆ ಸೂರ್ಯನ ಬೆಳಕು ನಮ್ಮ ದೇಹಕ್ಕೆ ಬಹಳ ಮುಖ್ಯ. ಸೂರ್ಯನ ಕಿರಣಗಳು ಕೇವಲ ಹೊರ ಚರ್ಮಮಾತ್ರವಲ್ಲ ದೇಹದ ಒಳಭಾಗಗಳಿಗೂ ಪ್ರಭಾವ ಬೀರುತ್ತವೆ.  ದೇಹಕ್ಕೆ ವಿಟಮಿನ್ ಡಿ ಅಗತ್ಯವಿದೆ, ಸೂರ್ಯನ ಬೆಳಕು ವಿಟಾಮಿನ್ ಡಿಯ ಉತ್ತಮ ಮೂಲವಾಗಿದೆ. ವಾರದಲ್ಲಿ ಮೂರು ದಿನ ಬೆಳಗ್ಗೆ 20-30 ನಿಮಿಷ ಸೂರ್ಯಸ್ನಾನ ಮಾಡಿದರೆ ದೇಹ ಹಲವು ರೋಗಗಳಿಂದ ದೂರವಿರಿಸುತ್ತದೆ. ಸೂರ್ಯನಿಂದ ನಮಗೆ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ...