ತೂಕ ಇಳಿಸೋದಲ್ಲ, ಹೆಚ್ಚಿಸ್ಬೇಕು ಅನ್ನೋರು ಇದನ್ನು ಮಿಸ್ ಮಾಡದೆ ಓದಿ

First Published Jan 27, 2021, 10:19 AM IST

ಆಧುನಿಕ ಯುಗದಲ್ಲಿ ಕೆಲವರು ಸ್ಥೂಲಕಾಯದಿಂದ ಬಳಲುತ್ತಿದ್ದು, ಕೆಲವರು ಹೆಚ್ಚು ಸಣ್ಣಗಿನ ದೇಹದಿಂದ ಬೇಸರ ಪಟ್ಟುಕೊಳ್ಳುತ್ತಾರೆ. ಈ ಎರಡೂ ಸಮಸ್ಯೆಯು ಕಳಪೆ ಆಹಾರ ಮತ್ತು ಅಸಮರ್ಪಕ ಆಹಾರ ಕ್ರಮದಿಂದ ಉಂಟಾಗುತ್ತದೆ. ಇದರ ಜೊತೆಗೆ, ಇದು ಒಂದು ವಂಶವಾಹಿ ಕಾಯಿಲೆಯಾಗಿದ್ದು, ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಯುತ್ತಾ ಹೋಗುತ್ತದೆ. ಒಮ್ಮೆ ತೂಕ ಹೆಚ್ಚಾದರೆ, ಬೆಳೆಯುತ್ತಿರುವ ತೂಕವನ್ನು ನಿಯಂತ್ರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಹಾಗೆಯೇ ತೂಕ ಹೆಚ್ಚು ಮಾಡುವುದು ಸಹ ಸುಲಭದ ಕೆಲಸ ಅಲ್ಲ.