MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಚೆಂಡು ಹೂವನ್ನು ಈ ರೀತಿ ಬಳಸಿದ್ರೆ ನಿಮ್ಮ ಅದೃಷ್ಟವೇ ಬದಲಾಗಬಹುದು!

ಚೆಂಡು ಹೂವನ್ನು ಈ ರೀತಿ ಬಳಸಿದ್ರೆ ನಿಮ್ಮ ಅದೃಷ್ಟವೇ ಬದಲಾಗಬಹುದು!

ನನಗೆ ಅದೃಷ್ಟಾನೆ ಇಲ್ಲ ಎಂದು ನಿಮಗೆ ಪದೇ ಪದೇ ಅನಿಸಿದರೆ, ಅದೃಷ್ಟ ಪರೀಕ್ಷೆಗಾಗಿ ಎಲ್ಲಾ ರೀತಿಯ ಉಪಾಯ ಮಾಡಿ ಸೋತಿದ್ದರೆ,  ಒಮ್ಮೆ ಈ ಪವಾಡಸದೃಶ ಹೂವಿನ ಪರಿಹಾರಗಳನ್ನು ಅಳವಡಿಸಿಕೊಳ್ಳಿ . ನಂತರ ನಿಮ್ಮ ಭಾಗ್ಯದ ಬಾಗಿಲು ಹೇಗೆ ತೆರೆಯುತ್ತೆ ನೀವೆ ನೋಡಿ. 

2 Min read
Suvarna News
Published : Feb 27 2023, 05:06 PM IST
Share this Photo Gallery
  • FB
  • TW
  • Linkdin
  • Whatsapp
16

ಮನೆಯಲ್ಲಿ ಯಾವುದೇ ಹಬ್ಬವಿರಲಿ ಅಥವಾ ಮದುವೆಯ ಸಂದರ್ಭವಾಗಿರಲಿ, ಪೂಜಿಸಲು ಅಥವಾ ಮನೆಯ ಅಲಂಕಾರದ ಕೆಲಸವನ್ನು ಮಾಡಲು ಹೂವುಗಳನ್ನು ತರುತ್ತೇವೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ನಾವು ಸುಲಭವಾಗಿ ಸಿಗುವ ಚೆಂಡು ಹೂವು (marigold). ನಾವು ಚೆಂಡು ಹೂವುಗಳನ್ನು ದೇವರ ಅಲಂಕಾರಕ್ಕೆ ಬಳಸುತ್ತೇವೆ. ಈ ಹೂವಿನ ಮಹತ್ವವನ್ನು ಧರ್ಮಗ್ರಂಥಗಳಲ್ಲಿಯೂ ಉಲ್ಲೇಖಿಸಲಾಗಿದೆ ಗೊತ್ತಾ?. 

26

ಚೆಂಡು ಹೂವು ಗುರು ಮತ್ತು ಬೃಹಸ್ಪತಿಗೆ ತುಂಬಾ ಪ್ರಿಯ. ಅಷ್ಟೇ ಅಲ್ಲ, ಭಗವಾನ್ ವಿಷ್ಣು ಮತ್ತು ಗಣೇಶ ಕೂಡ ಚೆಂಡು ಹೂವನ್ನು ತುಂಬಾ ಇಷ್ಟಪಡುತ್ತಾರೆ. ಈ ಹೂವಿನ ಪರಿಹಾರಗಳ (astro tips) ಬಗ್ಗೆಯೂ ನೀವು ತಿಳಿದಿರಬೇಕು. ಯಾಕಂದ್ರೆ ಇದು ನಿಮ್ಮ ಜೀವನದಲ್ಲಿ ಬರುವ ಸಮಸ್ಯೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅದು ಹೇಗೆ ಅನ್ನೋದನ್ನು ನೋಡೋಣ. 
 

36

ಚೆಂಡು ಹೂವಿನ ರಂಗೋಲಿ 
ನೀವು ನಿಯಮಿತವಾಗಿ ಮನೆಯ ಮುಖ್ಯ ದ್ವಾರದಲ್ಲಿ ಚೆಂಡು ಹೂವಿನ ರಂಗೋಲಿಯನ್ನು ಹಾಕಿದರೆ, ವಿಷ್ಣು ದೇವರು ಅದರಿಂದ ತುಂಬಾ ಸಂತೋಷಪಡುತ್ತಾನೆ. ನಿಮಗೆ ಸಂಪೂರ್ಣ ರಂಗೋಲಿಯನ್ನು ಚೆಂಡು ಹೂವಿನಿಂದ ಮಾಡಲು ಸಾಧ್ಯವಾಗದಿದ್ದರೆ, ಬಣ್ಣಗಳ ರಂಗೋಲಿಯಲ್ಲಿ ನೀವು ಚೆಂಡು ಹೂವನ್ನು ಬಳಸಬೇಕು.  ಶ್ರೀ ವಿಷ್ಣು (God Vishnu) ಚೆಂಡು ಹೂವುಗಳನ್ನು ತುಂಬಾ ಪ್ರೀತಿಸುತ್ತಾನೆ ಮತ್ತು ನೀವು ಈ ಹೂವನ್ನು ರಂಗೋಲಿಯಲ್ಲಿ ಬಳಸಿದರೆ, ಶ್ರೀ ಹರಿ ಖಂಡಿತವಾಗಿಯೂ ನಿಮ್ಮ ಮನೆಗೆ ಬರುತ್ತಾರೆ.  

46

ಚೆಂಡು ಹೂವಿನ ತೋರಣ
ನೀವು ಚೆಂಡು ಹೂವಿನ ತೋರಣವನ್ನು ಮನೆಯ ಮುಖ್ಯ ದ್ವಾರದಲ್ಲಿ ಮತ್ತು ದೇವರ ಕೋಣೆಯಲ್ಲಿ ಹಾಕೋದು ಉತ್ತಮ. ಚೆಂಡು ಹೂವು ಸಹ ಪರಿಮಳಯುಕ್ತವಾಗಿದೆ ಮತ್ತು ಅದನ್ನು ಮನೆಯಲ್ಲಿ ಅಲಂಕರಿಸಿದರೆ ಸುಂದರವಾಗಿ ಕಾಣುತ್ತೆ. ಮನೆಯಲ್ಲಿ ಒಳ್ಳೆಯ ಸಮಾರಂಭ ಅಥವಾ ಪೂಜೆ ಇದ್ದರೆ, ಈ ಹೂವಿನ ತೋರಣ ಹಾಕಿ. ಇದರಿಂದ ಸಕಾರಾತ್ಮಕ ಶಕ್ತಿ (positive power) ಮನೆಯನ್ನು ಪ್ರವೇಶಿಸುತ್ತದೆ. ಇದು ನಿಮ್ಮ ಹಣೆಬರಹವನ್ನು ಬದಲಾಯಿಸುತ್ತೆ. 

56

ಚೆಂಡು ಹೂವುಗಳನ್ನು ಲಾಕರ್ ನಲ್ಲಿರಿಸಿ
ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಕೆಂಪು ಬಟ್ಟೆಯಲ್ಲಿ ಕರ್ಪೂರದೊಂದಿಗೆ ಚೆಂಡು ಹೂವುಗಳನ್ನು ಕಟ್ಟಿ ತಿಜೋರಿಯಲ್ಲಿಡಬೇಕು (keep it in locker). ಇದನ್ನು ಮಾಡುವುದರಿಂದ, ವಿಷ್ಣು ಮತ್ತು ಲಕ್ಷ್ಮಿ ದೇವಿ ಇಬ್ಬರೂ ತುಂಬಾ ಸಂತೋಷವಾಗಿರುತ್ತಾರೆ ಮತ್ತು ಇದು ನಿಮಗೆ ಆರ್ಥಿಕ ಶಕ್ತಿಯನ್ನು ನೀಡುತ್ತದೆ ಮತ್ತು ಹಣವನ್ನು ಸಂಪಾದಿಸಲು ಹೊಸ ಅವಕಾಶ ನೀಡುತ್ತದೆ. 

66

ಈ ಗ್ರಹಗಳಿಗೆ ಹೂವುಗಳನ್ನು ಅರ್ಪಿಸಿ
ಹಳದಿ ಬಣ್ಣವು ಗುರು ಮತ್ತು ಬೃಹಸ್ಪತಿ ಗ್ರಹಗಳೆರಡಕ್ಕೂ ತುಂಬಾ ಪ್ರಿಯವಾಗಿದೆ. ನೀವು ಈ ಎರಡು ಗ್ರಹಗಳಿಗೆ ಚೆಂಡು ಹೂವುಗಳನ್ನು ಅರ್ಪಿಸಿದರೆ, ನಿಮ್ಮ ಜೀವನದಲ್ಲಿ ಎಂದಿಗೂ ಸಮೃದ್ಧಿಯ ಕೊರತೆ ಇರೋದಿಲ್ಲ ಅಥವಾ ನೀವು ಎಂದಿಗೂ ಯಶಸ್ಸನ್ನು ಪಡೆಯೋದರಲ್ಲಿ ವಿಫಲರಾಗೋದಿಲ್ಲ. ಹಾಗಾಗಿ ನೀವು ಎರಡೂ ಗ್ರಹಗಳಿಗೆ ಚೆಂಡು ಹೂವುಗಳನ್ನು ಅರ್ಪಿಸಬೇಕು.  

About the Author

SN
Suvarna News
ರಂಗೋಲಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved