ಈ ಮುಸ್ಲಿಂ ಭಕ್ತನೆಂದರೆ ಪುರಿ ಜಗನ್ನಾಥನಿಗೆ ಅನನ್ಯ ಪ್ರೀತಿ, ಭೇಟಿಗಾಗಿ ರಥವನ್ನೇ ನಿಲ್ಲಿಸಿದ ಕಥೆ ನೀವೂ ಕೇಳಿ!
ಭಗವಾನ್ ಜಗನ್ನಾಥನ ರಥಯಾತ್ರೆ ಜುಲೈ 7 ರಿಂದ ಪ್ರಾರಂಭವಾಗಿದೆ. ಭಗವಂತನು ತನ್ನ ರಥ ನಂದಿಘೋಷದ ಮೇಲೆ ಸವಾರಿ ಮಾಡಿ ಗುಂಡಿಚಾ ದೇವಾಲಯಕ್ಕೆ ಹೊರಟಿದ್ದಾನೆ. ಈ ರಥಯಾತ್ರೆಯಲ್ಲಿ ಅನೇಕ ವಿಶಿಷ್ಟ ಹಂತಗಳಿವೆ. ಮುಸ್ಲಿಂ ಭಕ್ತರನ್ನು ಸಹ ಜಗನ್ನಾಥ ಭೇಟಿಯಾಗ್ತಾನೆ ಈ ವಿಶೇಷತೆ ಬಗ್ಗೆ ತಿಳಿಯಿರಿ.
ಭಗವಾನ್ ಜಗನ್ನಾಥನ ರಥಯಾತ್ರೆ (Puri Jagannath) ಈಗಾಗಲೇ ಆರಂಭವಾಗಿದೆ. ಭಗವಂತನು ಜಗನ್ನಾಥಪುರಿ ದೇವಾಲಯದಿಂದ ಚಿಕ್ಕಮ್ಮನ ಮನೆಗೆ ಗರುಡ ಧ್ವಜ ರಥ ಎಂದೂ ಕರೆಯಲ್ಪಡುವ ನಂದಿಘೋಷ ರಥದಲ್ಲಿ ಕುಳಿತು ಗುಂಡಿಚಾ ದೇವಸ್ಥಾನಕ್ಕೆ ಹೋಗುತ್ತಾನೆ. ಭಗವಾನ್ ಜಗನ್ನಾಥನ ಚಿಕ್ಕಮ್ಮನ ಮನೆಯಲ್ಲಿ 7 ದಿನಗಳ ಕಾಲ ತಂಗಿದ ನಂತರ, ಅವರು ತಮ್ಮ ದೇವಾಲಯ ಜಗನ್ನಾಥಪುರಿಗೆ ಮರಳಲಿದ್ದಾರೆ.
ಈ ಏಳು ದಿನಗಳ ಅದ್ಭುತ ಪ್ರಯಾಣದಲ್ಲಿ ಅನೇಕ ಅದ್ಭುತ ಮತ್ತು ವಿಶಿಷ್ಟ ದೃಶ್ಯಗಳಿವೆ. ಭಕ್ತರು ತಮ್ಮ ಭಗವಂತನ ರಥವನ್ನು ಎಳೆಯಲು ಉತ್ಸುಕರಾಗಿದ್ದಾರೆ. ಭಗವಾನ್ ಜಗನ್ನಾಥನ ರಥವನ್ನು ಎಳೆಯುವ ಯಾವುದೇ ಭಕ್ತನು ಮತ್ತೆ ಹುಟ್ಟಿ ಬರೋದಿಲ್ಲ. ಅವರಿಗೆ ಮೋಕ್ಷ ಪ್ರಾಪ್ತಿಯಾಗುತ್ತೆ ಎನ್ನುವ ನಂಬಿಕೆ ಇದೆ. ಹಾಗಾಗಿ ಈ ರಥ ಯಾತೆಯಲ್ಲಿ ದೇಶದ ಮೂಲೆ ಮೂಲೆಯಿಂದ ಕೋಟ್ಯಂತರ ಜನ ಬಂದು ಭಾಗಿಯಾಗುತ್ತಾರೆ.
ಜಗನ್ನಾಥ ರಥಯಾತ್ರೆ ಬಗ್ಗೆ ನೀವು ತಿಳಿದುಕೊಳ್ಳಬೇಕಾದ್ದಿದೆ
ಪ್ರತಿ ವರ್ಷ ಲಕ್ಷಾಂತರ ಭಕ್ತರು ದೇಶ ವಿದೇಶದಿಂದ ಜಗನ್ನಾಥ ಪುರಿಗೆ ಆಗಮಿಸುತ್ತಾರೆ. ಜಗನಾಥನಿಗೆ ತನ್ನ ಭಕ್ತರಲ್ಲಿ ಯಾರಿಗೂ ತಾರತಮ್ಯ ಮಾಡದೇ ಎಲ್ಲರಿಗೂ ದರ್ಶನ ನೀಡುತ್ತಾನೆ. ಈ ಜಗನ್ನಾಥ ಪುರಿ ರಥಯಾತ್ರೆಯಲ್ಲಿ ಅದ್ಭುತ ಮತ್ತು ವಿಶಿಷ್ಟ ದೃಶ್ಯವನ್ನು ದೇವಾಲಯದಿಂದ ಸುಮಾರು 200 ಮೀಟರ್ ನಡೆದ ನಂತರ ನೀವು ನೋಡಬಹುದು. ದೇವಾಲಯದಿಂದ ಸುಮಾರು 200 ಮೀಟರ್ ದೂರದಲ್ಲಿ ಭಗವಂತನ ರಥ ಸ್ವಲ್ಪ ಸಮಯ ನಿಲ್ಲುತ್ತೆ, ಆಮೇಲೆ ರಥ ಮುಂದಕ್ಕೆ ಚಲಿಸುತ್ತೆ. ಈ ರೀತಿ ಭಗವಂತನ ರಥ ನಿಲ್ಲೋದಕ್ಕೂ ಒಂದು ಮಹತ್ವವಿದೆ.
ಜಗನ್ನಾಥ ರಥಯಾತ್ರೆ ಮತ್ತು ಸಾಲ್ಪೆಗ್ ಕಾ ಮಜರ್ ದಂತಕಥೆ
ಭಗವಾನ್ ಜಗನ್ನಾಥನ ದೇವಸ್ಥಾನದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಭಗವಾನ್ ಜಗನ್ನಾಥನ ಭಕ್ತನಾದ ಸಲ್ಬೆಗ್ ಕಾ ಮಜರ್ (Salbeg ki Mazar) ಎಂದು ಕರೆಯಲ್ಪಡುವ ಸಮಾಧಿ ಇದೆ. ಈ ಸಮಾಧಿ ಬಳಿ ಭಗವಾನ್ ಜಗನ್ನಾಥನ ರಥ ನಿಲ್ಲಿಸುವುದು ಮೊಘಲ್ ಕಾಲದಿಂದಲೂ ನಡೆಯುತ್ತಿದೆ.
ಲಾಲ್ ಬೇಗ್ ಎಂದೂ ಕರೆಯಲ್ಪಡುವ ಜಹಾಂಗೀರ್ ಕುಲಿ ಖಾನ್ ಜಹಾಂಗೀರನ ಕಾಲದಲ್ಲಿ ಬಂಗಾಳದ ಸುಬೇದಾರ್ ಆಗಿದ್ದರು. ಸಾಲ್ಬೆಗ್ ಅವರ ತಾಯಿ ಹಿಂದೂ ಬ್ರಾಹ್ಮಣ ಮಹಿಳೆಯಾಗಿದ್ದು, ಅವರು ಭಗವಾನ್ ಜಗನ್ನಾಥನ ಭಕ್ತರಾಗಿದ್ದರು. ಲಾಲ್ ಬೇಗ್ ಈ ಹಿಂದೂ ಹುಡುಗಿಯನ್ನು ವಿವಾಹವಾದರು. ಇವರಿಬ್ಬರಿಗೆ ಹುಟ್ಟಿದ ಮಗುವೇ ಸಾಲ್ಬೇಗ್ (Salbeg).
ಸಾಲ್ಬೇಗ್ಜಗನ್ನಾಥ ಭಕ್ತನಾದ ಕಥೆ
ಸಾಲ್ಬೆಗ್ ತನ್ನ ತಾಯಿಯ ಭಕ್ತಿಯಿಂದ ಪ್ರಭಾವಿತರಾದರು ಮತ್ತು ಅವರು ಸಹ ಭಗವಾನ್ ಜಗನ್ನಾಥನ ಭಕ್ತರಾದರು. ಆದರೆ ಧಾರ್ಮಿಕ ಕಾರಣಗಳಿಂದಾಗಿ, ಅವರಿಗೆ ಭಗವಾನ್ ಜಗನ್ನಾಥನನ್ನು ನೋಡಲು ಸಾಧ್ಯವಾಗಲಿಲ್ಲ ಮತ್ತು ರಥಯಾತ್ರೆಯಲ್ಲಿ ಸೇರಲು ಸಾಧ್ಯವಾಗಲಿಲ್ಲ. ಅವರು ದೇವಾಲಯದಿಂದ ಸ್ವಲ್ಪ ದೂರದಲ್ಲಿ ತಮ್ಮದೇ ಆದ ಗುಡಿಸಲನ್ನು ನಿರ್ಮಿಸಿದ್ದರು. ತಮ್ಮ ಕೊನೆಗಾಲದಲ್ಲಿ ಸಾಲ್ಬೇಗ್ ಈ ಭಕ್ತನಿಗೆ ಒಮ್ಮೆ ದರ್ಶನ ನೀಡಬೇಕೆಂದು ಜಗನ್ನಾಥನಲ್ಲಿ ಪ್ರಾರ್ಥಿಸಿದನು. ಭಕ್ತನ ಕರೆ ಭಗವಂತನ ಹೃದಯ ತಲುಪಿತು. ಅಂದಿನಿಂದ ಸಾಲ್ಬೇಗ್ ಸಮಾಧಿ ಬಳಿ ನಿಲ್ಲುತ್ತೆ ರಥ.
ಸಾಲ್ಬೆಗ್ನ ಮನೆಯ ಬಳಿ ನಿಂತ ರಥ
ಭಗವಂತನ ರಥ ಗುಂಡಿಚಾ ದೇವಾಲಯಕ್ಕೆ ಹೊರಟಾಗ, 200 ಮೀಟರ್ ನಡೆದ ನಂತರ ಜನರು ತಳ್ಳುತ್ತಲೇ ಇದ್ದರು ಸಹ ರಥವು ಚಲಿಸಲೇ ಇಲ್ಲವಂತೆ. ಅವರು ಎಷ್ಟೇ ಪ್ರಯತ್ನಿಸಿದರೂ ರಥ ಮುಂದೆ ಹೋಗಲೇ ಇಲ್ಲ. ಸ್ವಲ್ಪ ಸಮಯದ ಬಳಿಕ ರಥ ಚಲಿಸಿತಂತೆ. ಆವಾಗ ತಿಳಿದು ಬಂದದ್ದು ಏನಂದ್ರೆ, ಆ ಸಮಯದಲ್ಲಿ ದೇವರು ರಥದಿಂದ ಇಳಿದು ಭಕ್ತ ಸಾಲ್ಬೇಗ್ ನನ್ನು ನೋಡಲು ಹೋಗಿದ್ದರಂತೆ. ಸ್ವಲ್ಪ ಸಮಯದ ವಿರಾಮದ ನಂತರ, ರಥ ಎಳೆದಾಗ ಅದು ಮತ್ತೆ ಸುಲಭವಾಗಿ ಚಲಿಸಲು ಪ್ರಾರಂಭಿಸಿತು.
ದೇವರು ತನ್ನ ಭಕ್ತನಿಗೆ ದರ್ಶನ ನೀಡಲು ಹೋಗಿದ್ದಾನೆ ಎಂದು ಜನರು ಅರ್ಥಮಾಡಿಕೊಂಡರು. ವರ್ಷಗಳ ನಂತರ ಸಾಲ್ಬೆಗ್ ಅದೇ ಗುಡಿಸಲಿನಲ್ಲಿ ನಿಧನರಾದರು. ಇದರ ನಂತರ, ಅವನ ಸಮಾಧಿಯನ್ನು ಅಲ್ಲಿ ನಿರ್ಮಿಸಲಾಯಿತು. ಆದರೆ ಇಂದಿಗೂ, ಮೊಘಲ್ ಕಾಲದ ಆ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ ಮತ್ತು ಪ್ರತಿವರ್ಷ ರಥಯಾತ್ರೆಯ ಸಮಯದಲ್ಲಿ, ರಥವನ್ನು ಸಾಲ್ಬೇಗ್ ಸಮಾಧಿಯ ಬಳಿ ಸ್ವಲ್ಪ ಸಮಯದವರೆಗೆ ನಿಲ್ಲಿಸಲಾಗುತ್ತದೆ ಎನ್ನುವ ಪ್ರತೀತಿ ಇದೆ.