ಜೀನ್ಸ್ ಮೇಲಿನ ಸಣ್ಣ ಪಾಕೆಟ್ ಇರೋದು ಯಾಕೆ ಗೊತ್ತಾ?

First Published Mar 24, 2021, 3:36 PM IST

ಜೀನ್ಸ್ನ ಮುಂಭಾಗದಲ್ಲಿರುವ ಸಣ್ಣ, ಆಯತಾಕಾರದ ಪಾಕೆಟ್ ಬಹುಶಃ ಎಲ್ಲರಿಗೂ ಗೊತ್ತಿರಬಹುದು. ಆ ಸಣ್ಣ ಪಾಕೆಟ್ ನೋಡಿ ಯಾಕಪ್ಪಾ ಇದು ಇರೋದು ಅಂತಾನೂ ನಿಮಗೆ ಅನಿಸಿರಬಹುದು ಅಲ್ವಾ? ಈ ಪಾಕೆಟ್ ಕೇವಲ ಮೂರು ಬೆರಳುಗಳ ಅಗಲವಿದೆ. ಪ್ರತಿಯೊಂದೂ ಜೋಡಿ ಜೀನ್ಸ್‌ನಲ್ಲೂ ಈ ರೀತಿಯ ಪಾಕೆಟ್  ಕಾಣುತ್ತೀರಿ, ಆದರೆ ಅದರಲ್ಲಿ ಬೆಕಾದ ಯಾವುದೇ ವಸ್ತುಗಳನ್ನು ಇಡಲು ಸಾಧ್ಯವಿಲ್ಲ. ಆದರೂ ಆ ಪಾಕೆಟ್ ಇಡುವ ಅವಶ್ಯಕತೆ ಏನಿದೆ?