45ರ ಹರೆಯದಲ್ಲೂ ಸಖತ್ ಹಾಟ್ ಈ ಸೀರಿಯಲ್ ನಟಿ, ನಿಮ್ಗೆ ವಯಸ್ಸೇ ಆಗಲ್ವಾ ಅಂತಿದ್ದಾರೆ ಫ್ಯಾನ್ಸ್!
12ನೇ ವಯಸ್ಸಿನಲ್ಲಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದಾಕೆ. 18ಕ್ಕೆ ಮದುವೆಯಾಗಿ 2 ಬಾರಿ ಡಿವೋರ್ಸ್ ಸಹ ಆಗಿತ್ತು. ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೆ ತನ್ನ 45ರ ಹರೆಯದಲ್ಲೂ ಈಕೆ ಇನ್ನೂ ಸಖತ್ ಸ್ಟೈಲಿಶ್ ಮತ್ತು ಹಾಟ್..ನೆಟ್ಟಿಗರು ಮೇಡಂ ನಿಮ್ಗೆ ವಯಸ್ಸಾಗೋದೆ ಇಲ್ವಾ ಅಂತ ಕೇಳ್ತಿದ್ದಾರೆ
ಭಾರತೀಯ ಕಿರುತೆರೆಯಲ್ಲಿ ಅತಿ ಹೆಚ್ಚು ಹೆಸರು ಮಾಡಿರುವ ನಟಿಯರಲ್ಲಿ ಒಬ್ಬರು ಶ್ವೇತಾ ತಿವಾರಿ. 43 ವರ್ಷದ ಶ್ವೇತಾ ತಿವಾರಿ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ತಮ್ಮ ಸ್ಟೈಲಿಶ್ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ತಮ್ಮ ಅದ್ಭುತ ಆಕ್ಟಿಂಗ್ ಮತ್ತು ಸೌಂದರ್ಯದಿಂದ ನಟಿ ಸಾಕಷ್ಟು ಫ್ಯಾನ್ ಫಾಲೋವಿಂಗ್ ಹೊಂದಿದ್ದಾರೆ.
43ರ ಹರೆಯದಲ್ಲೂ ಫಿಟ್ನೆಸ್ ವಿಚಾರದಲ್ಲಿ ಇಂದಿನ ಯುವ ನಟಿಯರಿಗೆ ಪೈಪೋಟಿ ನೀಡುವಂತಿದ್ದಾರೆ ಶ್ವೇತಾ ತಿವಾರಿ. ಇಬ್ಬರು ಮಕ್ಕಳ ತಾಯಿಯಾದ್ರೂ, ಈ ನಟಿಯ ಸೌಂದರ್ಯ ಒಂಚೂರು ಕಡಿಮೆಯಾಗಿಲ್ಲ. 18ರ ವಯಸ್ಸಿನಲ್ಲಿ ಮದುವೆಯಾದ ಈ ನಟಿ ಎರಡು ಬಾರಿ ವಿಚ್ಚೇದನ ಪಡೆದುಕೊಂಡಿದ್ದಾರೆ. ಆದರೂ ಈಗಲೂ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಾರೆ.
ಏಕ್ತಾ ಕಪೂರ್ ಅವರ ಸೀರಿಯಲ್ ಕಸೋಟಿ ಜಿಂದಗಿ ಕೇ ಯ 'ಪ್ರೇರಣಾ ಶರ್ಮಾ' ಪಾತ್ರದಿಂದ ಅವರನ್ನು ಇನ್ನೂ ಫ್ಯಾನ್ಸ್ ನೆನಪಿಸಿಕೊಳ್ಳುತ್ತಾರೆ. ಹಿಂದಿ ದೂರದರ್ಶನದಲ್ಲಿ ಅವರ ಯಶಸ್ಸು ಭೋಜ್ಪುರಿ ಸಿನಿಮಾದಲ್ಲಿಯೂ ಹೆಸರು ಮಾಡಲು ಸಹಾಯ ಮಾಡಿತು.
ಶ್ವೇತಾ ತಿವಾರಿ ಕೇವಲ ಸೀರಿಯಲ್ ಮಾತ್ರವಲ್ಲ ಮೂವಿ, ವೆಬ್ಸಿರೀಸ್ಗಳಲ್ಲೂ ನಟಿಸುತ್ತಾರೆ. ವರದಿಗಳ ಪ್ರಕಾರ, ಶ್ವೇತಾ ತಿವಾರಿ, ದೂರದರ್ಶನ ಕಾರ್ಯಕ್ರಮದ ಒಂದು ಸಂಚಿಕೆಗೆ ಸುಮಾರು 3 ಲಕ್ಷ ರೂ. ಚಾರ್ಜ್ ಮಾಡುತ್ತಾರೆ. ಬ್ರಾಂಡ್ ಎಡಾರ್ಸ್ಮೆಂಟ್ಗಳು, ಈವೆಂಟ್ಗಳಲ್ಲೂ ಭಾಗಿಯಾಗುತ್ತಾರೆ.
ಶ್ವೇತಾ ತಿವಾರಿ ಕೇವಲ 12 ನೇ ವಯಸ್ಸಿನಲ್ಲಿ ಚಲನಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಬಾಲಿವುಡ್ ಮತ್ತು ಧಾರಾವಾಹಿಗಳತ್ತ ಮುಖ ಮಾಡುವ ಮೊದಲು, ಶ್ವೇತಾ ತಿವಾರಿ ಭೋಜ್ಪುರಿ ಚಿತ್ರರಂಗದಲ್ಲಿ ಉತ್ತಮ ಹೆಸರು ಮಾಡಿದ್ದರು.
ಶ್ವೇತಾ ತಿವಾರಿ ಮತ್ತು ರಾಜಾ ಚೌಧರಿ ಸ್ವಲ್ಪ ಸಮಯದವರೆಗೆ ಸಂಬಂಧದಲ್ಲಿದ್ದರು. ಆದರೆ ತಿವಾರಿ ಕುಟುಂಬವು ರಾಜಾ ಚೌಧರಿ ಅವರೊಂದಿಗಿನ ಸಂಬಂಧವನ್ನು ಬಲವಾಗಿ ವಿರೋಧಿಸಿತ್ತು. ಆದರೆ ನಟಿ ನಿರ್ದೇಶಕರನ್ನು ತುಂಬಾ ಪ್ರೀತಿಸುತ್ತಿದ್ದರು. ಕುಟುಂಬದ ಇಚ್ಛೆಗೆ ವಿರುದ್ಧವಾಗಿ ರಾಜಾರನ್ನು ವಿವಾಹವಾದರು.
9 ವರ್ಷಗಳ ಕಾಲ ಸಂತೋಷದ ದಾಂಪತ್ಯ ಜೀವನ ನಡೆಸಿದ ನಂತರ, 2007 ರಲ್ಲಿ, ಶ್ವೇತಾ ತಿವಾರಿ ಮತ್ತು ರಾಜಾ ಚೌಧರಿ ವಿಚ್ಛೇದನ ಪಡೆಕೊಂಡರು.
ನಂತರ, ಶ್ವೇತಾ ತಿವಾರಿ ತನ್ನ ಮಗಳು ಪಾಲಕ್ ತಿವಾರಿಯನ್ನು ತಾನೇ ಪಡೆದು ಬೆಳೆಸಿದರು. ಈಗ ಮಗಳಿಗೆ 22 ವರ್ಷವಾಗಿದೆ.
ಆ ನಂತರ ಶ್ವೇತಾ ತಿವಾರಿ ಮತ್ತು ನಟ ಅಭಿನವ್ ಕೊಹ್ಲಿ ಮೂರು ವರ್ಷಗಳ ಡೇಟಿಂಗ್ ನಂತರ 13 ಜುಲೈ 2013 ರಂದು ವಿವಾಹವಾದರು. 27 ನವೆಂಬರ್ 2016 ರಂದು, ತಿವಾರಿ ತಮ್ಮ ಮಗ ರಿಯಾನ್ಸ್ ಕೊಹ್ಲಿಗೆ ಜನ್ಮ ನೀಡಿದರು. 2019 ರಲ್ಲಿ ಅಭಿನವ್ ಕೊಹ್ಲಿಗೆ ವಿಚ್ಛೇದನ ನೀಡಿದರು. ಮತ್ತೆ ಈಗ ನಟಿ ಒಂಟಿ ಜೀವನವನ್ನು ನಡೆಸುತ್ತಿದ್ದಾರೆ.