ಗರ್ಭಾವಸ್ಥೆಯಲ್ಲಿ ಉಗುರು ಬಿಡೋದು ಎಷ್ಟು ಸೇಫ್?
ಇತ್ತೀಚಿನ ದಿನಗಳಲ್ಲಿ, ನೈಲ್ ಎಕ್ಸ್’ಟೆಂಷನ್ ಟ್ರೆಂಡ್ ಸಾಕಷ್ಟು ಹೆಚ್ಚಾಗಿದೆ. ಮದುವೆ ಮಾತ್ರವಲ್ಲ, ಹುಡುಗಿಯರು ಪ್ರತಿದಿನ ಸಹ ನೈಲ್ ಎಕ್ಸ್’ಟೆಂಷನ್ ಮಾಡಲು ಪ್ರಾರಂಭಿಸಿದ್ದಾರೆ.ಗರ್ಭಿಣಿ ಮಹಿಳೆಯರು ಸಹ ನೇಲ್ ಎಕ್ಸ್’ಟೆಂಷನ್ ಮಾಡಿಸ್ಕೊಳ್ತಿದ್ದಾರೆ. ಆದರೆ ಗರ್ಭಿಣಿಯರು ನೈಲ್ ಎಕ್ಸ್’ಟೆಂಷನ್ ಮಾಡೋ ಮೊದಲು ಇದು ಅವರಿಗೆ ಸುರಕ್ಷಿತವೇ ಎಂದು ತಿಳಿದಿರಬೇಕು. ನೀವು ಗರ್ಭಿಣಿಯಾಗಿದ್ದರೆ ಮತ್ತು ನೈಲ್ ಎಸ್ಟೆಂಷನ್ ತುಂಬಾ ಇಷ್ಟಪಡುತ್ತಿದ್ದರೆ, ಗರ್ಭಾವಸ್ಥೆಯಲ್ಲಿ ನೈಲ್ ಎಸ್ಟೆಂಷನ್ ಮಾಡಿಸೋದು ಎಷ್ಟು ಸುರಕ್ಷಿತ ಎಂದು ಇಲ್ಲಿ ತಿಳಿಯಿರಿ ಯಾಕಂದ್ರೆ ಗರ್ಭಧಾರಣೆಯ ನಂತರ,ಇದರಿಂದ ತೊಂದರೆಯುಂಟಾಗಬಹುದು.
ಗರ್ಭಾವಸ್ಥೆಯಲ್ಲಿ(Pregnant) ನೈಲ್ ಎಕ್ಸ್’ಟೆಂಷನ್ ಮಾಡಬಹುದೇ?
ಗರ್ಭಾವಸ್ಥೆಯಲ್ಲಿ ನೈಲ್ ಎಕ್ಸ್’ಟೆಂಷನ್ ಮಾಡಿಸಬಹುದು ಆದರೆ ಕೋಣೆಯು ಸಂಪೂರ್ಣವಾಗಿ ಗಾಳಿಯಾಡಬೇಕು ಎಂಬುದನ್ನು ನೆನಪಿನಲ್ಲಿಡಿ. ಸಲೂನ್ ಗಳಲ್ಲಿ ಸ್ಟ್ರಾಂಗ್ ಕೆಮಿಕಲ್ಸ್ ಬಳಸಬಹುದು ಮತ್ತು ಅವುಗಳ ಪರಿಮಳದಿಂದ ನಿಮಗೆ ವಾಕರಿಕೆ ಬರಬಹುದು. ಆದುದರಿಂದ ಎಚ್ಚರದಿಂದಿರಿ.
ನೈಲ್ ಎಕ್ಸ್’ಟೆಂಷನ್ ಅಥವಾ ಇನ್ನಾವುದನ್ನೂ ಮಾಡಿಸಲು ಸಲೂನ್ (Saloon)ಹೋಗೋ ಮೊದಲು, ಅಲ್ಲಿ ಯಾವ ವೆಂಟಿಲೇಷನ್ ಸೌಲಭ್ಯವಿದೆ ಎಂದು ಪರಿಶೀಲಿಸಿ. ಹಾಗೇ ಗರ್ಭಧಾರಣೆಯ ಬಗ್ಗೆ ನಿಮ್ಮ ಮ್ಯಾನಿಕರಿಸ್ಟ್ ಗೆ ಹೇಳಬೇಕು, ಇದರಿಂದ ಅವರು ಬಳಸುವ ಉತ್ಪನ್ನಗಳ ಬಗ್ಗೆ ಅವರು ಜಾಗರೂಕರಾಗಿರುತ್ತಾರೆ.
ಗರ್ಭಿಣಿಯರಿಗೆ ಹೆಚ್ಚು ಅಪಾಯವಿದೆ
ಸಲೂನ್ ಗಳಲ್ಲಿ ಕೆಲಸ ಮಾಡುವ ಗರ್ಭಿಣಿಯರಲ್ಲಿ ನೈಲ್ ಎಕ್ಸ್’ಟೆಂಷನ್ (Nail extension)ಮಾಡಿಸೋ ಮಹಿಳೆಯರಿಗಿಂತ ಹೆಚ್ಚು ಕೆಮಿಕಲ್ಸ್ ಗೆ ದೇಹವನ್ನು ಸೇರುವ ಸಮಸ್ಯೆ ಇರಬಹುದು. ನಿರಂತರ ಸಂಪರ್ಕವು ಮಗುವಿನ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ನೀವು ಸಲೂನ್ ನಲ್ಲಿ ಕೆಲಸ ಮಾಡುತ್ತಿದ್ದರೆ, ಗರ್ಭಾವಸ್ಥೆಯಲ್ಲಿ ರೆಸ್ಟ್ ತೆಗೆದುಕೊಳ್ಳಬಹುದು ಅಥವಾ ಕೆಲಸದ ಸ್ಥಳದಲ್ಲಿ ನಿಮಗೆ ಸರಿಯಾದ ವ್ಯವಸ್ಥೆಇದೆಯೇ? ಎಂದು ಖಚಿತಪಡಿಸಿಕೊಳ್ಳಬಹುದು. ಹಾಗೆ ಅಪಾಯವನ್ನು ಸಾಧ್ಯವಾದಷ್ಟು ಕಡಿಮೆ ಮಾಡಲು ಮಾಸ್ಕ್ ಮತ್ತು ಗ್ಲೋವ್ಸ್ ಬಳಸಿ.
ಸೇಫ್ಟಿ ಅಳವಡಿಸಿಕೊಳ್ಳಿ
ಸಲೂನ್ ನಲ್ಲಿ ಹೊಗೆ ಮತ್ತು ರಾಸಾಯನಿಕಗಳಿಗೆ ಒಡ್ಡಿಕೊಳ್ಳೋದನ್ನು ಕಡಿಮೆ ಮಾಡಲು ಅಕ್ರಿಲಿಕ್ ನೇಲ್ಸ್ ಹಾಕುವಾಗ ಮಾಸ್ಕ್ ಧರಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ತಲೆತಿರುಗುವಿಕೆ ಅಥವಾ ವಾಕರಿಕೆ ಅನುಭವಿಸುತ್ತಿದ್ದರೆ, ಸಲೂನಿಂದ ತಕ್ಷಣವೇ ಹೊರಬನ್ನಿ ಮತ್ತು ಸ್ವಲ್ಪ ಫ್ರೆಶ್ ಏರ್(Fresh air) ತೊಗೊಳ್ಳಿ. ಇದನ್ನೆಲ್ಲಾ ಅವಾಯ್ಡ್ ಮಾಡಲು ಸಾಧ್ಯವಾದಷ್ಟು ಸಲೂನ್ ಗೆ ಹೋಗೋದನ್ನ ತಪ್ಪಿಸಿ, ಕೆಮಿಕಲ್ಸ್ಗೆ ಪದೇ ಪದೇ ಒಡ್ಡಿಕೊಳ್ಳೋದು ನಿಮಗೆ ಮತ್ತು ಮಗುವಿಗೆ ಹಾನಿಕಾರಕವಾಗಬಹುದು.
It has the ability to cure skin problems around the affected area.
ಅಡ್ಡಪರಿಣಾಮ
ಅಕ್ರಿಲಿಕ್ ನೇಲ್ಸ್ (Acrylic nails) ನೈಸರ್ಗಿಕ ಉಗುರುಗಳನ್ನು ಹಾನಿಗೊಳಿಸಬಹುದು ಏಕೆಂದರೆ ಅಕ್ರಿಲಿಕ್ ನೊಂದಿಗೆ ಉಗುರು ಬೆಳೆಯಲು ಕಷ್ಟವಾಗುತ್ತೆ. ಹಾನಿಗೊಳಗಾದ ಉಗುರು ಬ್ಯಾಕ್ಟೀರಿಯಾ ಮತ್ತು ಫಂಗಸ್ ಗೆ ಕಾರಣವಾಗಬಹುದು. ಉಗುರುಗಳಿಗೆ ಬಳಸುವ ಉಪಕರಣಗಳು ಹಾನಿಗೊಳಗಾಗಿದ್ದರೆ ಅಥವಾ ಹಳೆಯದಾಗಿದ್ದರೆ, ಉಗುರುಗಳ ಕ್ಯುಟಿಕಲ್ಗಳಲ್ಲಿ ತುರಿಕೆ ಅಥವಾ ಊತ ಕಾಣಿಸಿಕೊಳ್ಳಬಹುದು.
ಇತರ ಹಾನಿ
ನೇಲ್ ಎಕ್ಸ್’ಟೆಂಷನ್ ಮಾಡಿಸೋದು ಸಾಮಾನ್ಯವಾಗಿ ನೋವನ್ನು ಉಂಟುಮಾಡಬಹುದು, ಉಗುರಿನ ಪ್ಲೇಟ್ ವಿಭಿನ್ನವಾಗಿರಬಹುದು. ಆದ್ದರಿಂದ, ಉಗುರುಗಳು ದಪ್ಪ ಮತ್ತು ಆರೋಗ್ಯಕರವಾಗಿದ್ದಾಗ ಮಾತ್ರ ನೀವು ಅಕ್ರಿಲಿಕ್ ಯೂಸ್ ಮಾಡಬೇಕು. ಉಗುರುಗಳನ್ನು ಸರಿಯಾಗಿ ಕೇರ್(Care) ಮಾಡದಿದ್ದರೆ ಅಕ್ರಿಲಿಕ್ ಉಗುರುಗಳನ್ನು ದುರ್ಬಲಗೊಳಿಸಬಹುದು.
ಈ ವಿಷಯಗಳನ್ನು ನೆನಪಿನಲ್ಲಿಡಿ
ಯಾವುದೇ ಉಗುರು ಅಥವಾ ಚರ್ಮದ ಕಾಯಿಲೆ, ಕಡಿತ, ಗೀರು ಅಥವಾ ತೆರೆದ ಗಾಯಗಳನ್ನು ಹೊಂದಿದ್ದರೆ ಅಕ್ರಿಲಿಕ್ ನೇಲ್ಸ್ ಪ್ರಾಡಕ್ಟ್ ಉತ್ಪನ್ನ ಬಳಸೋದನ್ನು ತಪ್ಪಿಸಿ. ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಬಳಸುವ ಉತ್ತಮ ಸಲೂನ್ ಸೆಲೆಕ್ಟ್ ಮಾಡಿ. ಸಲೂನ್ ನಲ್ಲಿ ಸಲಕರಣೆಗಳನ್ನು ಸ್ವಚ್ಛಗೊಳಿಸುವ ಮತ್ತು ಸ್ಟೆರಿಲೈಜ್(Sterilize) ಮಾಡುವ ಪ್ರಕ್ರಿಯೆಯನ್ನು ಚೆಕ್ ಮಾಡಿ .