ಸ್ಟೈಲಿಶ್ ಲುಕ್‌ಗೆ ಮಾತ್ರವಲ್ಲ, ಹೀಗೂ ಬಳಕೆ ಮಾಡಬಹುದು ನೇಲ್ ಪಾಲಿಶ್
ನೇಲ್ ಪಾಲಿಶ್ ನಿಮ್ಮ ಮುಂದಿಟ್ಟು ನಿಮ್ಮ ಉಗುರುಗಳ ಮೇಲೆ ಸುಂದರವಾದ ಬಣ್ಣವನ್ನು ಹಚ್ಚುವುದರ ಬಗ್ಗೆ ನೀವು ಯೋಚಿಸಬಹುದು. ಆದರೆ ನಿಮ್ಮ ಉಗುರು ಬಣ್ಣವನ್ನು ನೀವು ಅನೇಕ ವಿಧಗಳಲ್ಲಿ ಬಳಸಬಹುದು. ಉಗುರು ಬಣ್ಣ ಅಥವಾ ನೈಲ್ ಪಾಲಿಶ್ ನಿಂದ ನೀವು ಏನೆಲ್ಲಾ ಮಾಡಬಹುದೆಂದು ನಿಮಗೆ ತಿಳಿದಿಲ್ಲ. ಅಂತಹ ಕೆಲವೊಂದು ವಿಷಯಗಳು ಇಲ್ಲಿವೆ.
ಹಳೆಯ ಆಭರಣಗಳಿಗೆ ಮೆರುಗು : ನೀವು ಧರಿಸುವ ಆಭರಣ ಹಳೆಯದಾಗಿದ್ದು, ಔಟ್ ಒಫ್ ಫ್ಯಾಷನ್ ಆಗಿದ್ದರೆ, ಅದಕ್ಕೆ ನಿಮ್ಮ ನೇಲ್ ಪಾಲಿಶ್ ಹಚ್ಚಿ. ಇದರಿಂದ ಹಳೆಯ ಆಭರಣಕ್ಕೆ ಹೊಸ ಲುಕ್ ಬರುತ್ತದೆ ಜೊತೆಗೆ ಹೊಳೆಯುತ್ತದೆ. ಇದರಿಂದ ನಿಮ್ಮ ಲುಕ್ ಕೂಡ ಚೆನ್ನಾಗಿ ಕಾಣಿಸುತ್ತದೆ.
ಎನ್'ವೆಲಪ್ ಸೀಲ್ ಮಾಡಲು : ಎನ್'ವೆಲಪ್ ಹಿಂಭಾಗದಲ್ಲಿ ಗಮ್ ಅಥವಾ ನೆಕ್ಕುವುದನ್ನು ತಪ್ಪಿಸಿ. ಏನು ಇರದೇ ಇದ್ದಾರೆ ಸ್ವಲ್ಪ ಕಲರ್ ಲೆಸ್ ನೈಲ್ ಪೋಲಿಷ್ ತೆಗೆದುಕೊಂಡು ಕವರ್ ಮೇಲೆ ಹಚ್ಚಿ ಅದನ್ನು ಮುಚ್ಚಿ.
ಸೂಜಿಗೆ ದಾರ ಪೋಣಿಸಲು : ಸೂಜಿ ಮತ್ತು ದಾರ ಇವೆರಡನ್ನೂ ಜೊತೆ ಸೇರಿಸುವುದೇ ಕಷ್ಟವಾದ ಕೆಲಸ. ಸೂಜಿಯೊಳಗೆ ದಾರ ಸುಲಭವಾಗಿ ಸೇರಬೇಕೆಂದರೆ ನೀವು ದಾರದ ತುದಿಗೆ ಸ್ವಲ್ಪ ನೈಲ್ ಪೋಲಿಷ್ ಹಚ್ಚಿ ನಂತರ ಅದನ್ನು ಸೂಜಿಯ ತೂತಿನ ಒಳಗೆ ಹಾಕಿ, ಆವಾಗ ಅದು ಬೇಗನೆ ಒಳ ಸೇರುತ್ತದೆ. ಕಷ್ಟಪಡಬೇಕಾಗಿಲ್ಲ.
ಕಾರ್ ಗೀರುಗಳನ್ನು ಕವರ್ ಮಾಡಲು : ಅಪಘಾತಗಳು ಸಂಭವಿಸುತ್ತವೆ. ಸಣ್ಣ ಪುಟ್ಟ ಅಪಘಾತಗಳು ಸಂಭವಿಸಿದಾಗ ಕಾರಿನಲ್ಲಿ ಗೀರುಗಳಾಗುತ್ತವೆ. ನಿಮ್ಮ ಕಾರಿನಲ್ಲೂ ಹೀಗೆ ಗೀರುಗಳಾಗಿದ್ದರೆ ಅದರ ಮೇಲೆ ನೈಲ್ ಪೋಲಿಷ್ ಹಚ್ಚಿ, ಕಾರಿನ ಬಣ್ಣದ ನೆಲ್ ಪೋಲಿಷ್ ಹಚ್ಚಿ. ಇದು ನಿಮ್ಮ ಕಾರಿಗೆ ಉತ್ತಮವಾದ ಲುಕ್ ನೀಡುತ್ತದೆ. ಜೊತೆಗೆ ಗೀರಿನ ಗುರುತುಗಳು ಸಹ ಕಾಣುವುದಿಲ್ಲ.
ಆಕ್ಸೆಸರೀಸ್ ಗೆ ಹೊಸ ಲುಕ್ ನೀಡಿ : ನಿಮ್ಮ ಹೇರ್ ಬ್ಯಾಂಡ್ಗಳು, ಪಿನ್ಗಳು, ಉಂಗುರಗಳು ಅಥವಾ ಬಳೆಗಳಾಗಿರಲಿ, ನೀವು ಅವುಗಳ ಬಣ್ಣವನ್ನು ಬದಲಾಯಿಸಬಹುದು ಮತ್ತು ಉಗುರು ಬಣ್ಣವನ್ನು ಬಳಸಿ ಅವುಗಳನ್ನು ನಿಮ್ಮ ಸ್ವಂತ ಶೈಲಿಯಲ್ಲಿ ಅಲಂಕರಿಸಬಹುದು.
ಲೇಸ್ ಮತ್ತು ಹಗ್ಗವನ್ನು ಬಿಚ್ಚದಂತೆ ನೋಡಿಕೊಳ್ಳಲು : ನಿಮ್ಮ ಲೇಸ್ಗಳ ಅಥವಾ ಹಗ್ಗದ ತುದಿಗಳನ್ನು ಬಿಚ್ಚುವುದನ್ನು ತಡೆಯಲು ನೀವು ಅದನ್ನು ಸುಡಬಹುದು. ಇಲ್ಲವಾದರೆ ನೈಲ್ ಪೋಲಿಷ್ ಹಚ್ಚಬಹುದು. ಇದರಿಂದ ಹಗ್ಗ ಬೇಗನೆ ಬಿಚ್ಚಿಕೊಳ್ಳುವುದಿಲ್ಲ.
ಬೆಲ್ಟ್ ಬಕಲ್ : ಹೊಸ ಅಥವಾ ಕೇವಲ ಹೊಳೆಯುವ ಬೆಲ್ಟ್ ಬಕಲ್ ಬೇಕಾದರೆ ಅದಕ್ಕೆ ನೈಲ್ ಪೋಲಿಷ್ ಹಚ್ಚಿ. ಇದರಿಂದ ಬಕಲ್ ಬೇಗನೆ ರಸ್ಟ್ ಹಿಡಿಯುವುದಿಲ್ಲ. ಜೊತೆಗೆ ಯಾವಾಗಲೂ ಹೊಳೆಯುತ್ತದೆ.