MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Sports
  • Cricket
  • ICC T20 World Cup ಟೂರ್ನಿಗೆ ಬಲಿಷ್ಠ ಭಾರತ ತಂಡವನ್ನು ಹೆಸರಿಸಿದ ಇರ್ಫಾನ್ ಪಠಾಣ್..!

ICC T20 World Cup ಟೂರ್ನಿಗೆ ಬಲಿಷ್ಠ ಭಾರತ ತಂಡವನ್ನು ಹೆಸರಿಸಿದ ಇರ್ಫಾನ್ ಪಠಾಣ್..!

ಬೆಂಗಳೂರು: ಚೊಚ್ಚಲ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಚಾಂಪಿಯನ್ ತಂಡದ ಸದಸ್ಯ ಇರ್ಫಾನ್‌ ಪಠಾಣ್ (Irfan Pathan) ಮುಂಬರುವ ಚುಟುಕು ವಿಶ್ವಕಪ್ ಸಮರಕ್ಕೆ ಬಲಿಷ್ಠ ಭಾರತ ಕ್ರಿಕೆಟ್‌ ತಂಡವನ್ನು ಪ್ರಕಟಿಸಿದ್ದು, ಶಿಖರ್ ಧವನ್, ರಿಷಭ್ ಪಂತ್ (Rishabh Pant) ಹಾಗೂ ಇಶಾನ್ ಕಿಶನ್ (Ishan Kishan), ಮೊಹಮ್ಮದ್ ಶಮಿ ಅವರಂತಹ ಸ್ಟಾರ್ ಆಟಗಾರರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿಲ್ಲ. ಇರ್ಫಾನ್ ಪಠಾಣ್ ಆಯ್ಕೆ ಮಾಡಿದ ಟೀಂ ಇಂಡಿಯಾ (Team India) ಆಡುವ ಹನ್ನೊಂದರ ಹೇಗಿರಲಿದೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

2 Min read
Naveen Kodase
Published : Jun 21 2022, 12:55 PM IST
Share this Photo Gallery
  • FB
  • TW
  • Linkdin
  • Whatsapp
111
**EDS: FILE PHOTO** Ahmedabad: In this Tuesday, Feb. 8, 2022, file photo KL Rahul prepares to bat during a training session ahead of the second ODI cricket match between India and West Indies, in Ahmedabad. Rahul has been ruled out of the five match T20 cricket series against South Africa due to an injury and Rishabh Pant has been named the captain. (PTI Photo/Manvender Vashist)(PTI06_08_2022_000264B)

**EDS: FILE PHOTO** Ahmedabad: In this Tuesday, Feb. 8, 2022, file photo KL Rahul prepares to bat during a training session ahead of the second ODI cricket match between India and West Indies, in Ahmedabad. Rahul has been ruled out of the five-match T20 cricket series against South Africa due to an injury and Rishabh Pant has been named the captain. (PTI Photo/Manvender Vashist)(PTI06_08_2022_000264B)

1. ಕೆ ಎಲ್ ರಾಹುಲ್:
ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್, ಇತ್ತೀಚಿನ ವರ್ಷಗಳಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದ್ದು, ಐಪಿಎಲ್ ಟೂರ್ನಿಯಲ್ಲೂ ಸ್ಪೋಟಕ ಆರಂಭಿಕರಾಗಿ ಗಮನ ಸೆಳೆದಿದ್ದಾರೆ. ಹೀಗಾಗಿ ಸಹಜ ಆಯ್ಕೆಯಂತೆ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.

211

2. ರೋಹಿತ್ ಶರ್ಮಾ:
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ ಆಕ್ರಮಣಕಾರಿ ರಣತಂತ್ರಗಳ ಮೂಲಕ ಎದುರಾಳಿ ತಂಡವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇನ್ನು ಬ್ಯಾಟಿಂಗ್ ಮೂಲಕವೂ ತಂಡಕ್ಕೆ ಉತ್ತಮ ಆರಂಭ ಒದಗಿಸುವ ಸಾಮರ್ಥ್ಯ ಹೊಂದಿದ್ದಾರೆ.
 

311

3. ವಿರಾಟ್ ಕೊಹ್ಲಿ
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕೊಂಚ ಫಾರ್ಮ್ ಸಮಸ್ಯೆಯನ್ನು ಎದುರಿಸುತ್ತಿದ್ದರೂ ಯಾವುದೇ ಕ್ಷಣದಲ್ಲಿ ಬೇಕಾದರೂ ಸಿಡಿಯುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಕಿಂಗ್ ಕೊಹ್ಲಿ ಸಿಡಿದರೇ ಎದುರಾಳಿ ತಂಡದ ಬೌಲರ್‌ಗಳು ತತ್ತರಿಸಿ ಹೋಗೋದು ಗ್ಯಾರಂಟಿ.

411

4. ಸೂರ್ಯಕುಮಾರ್ ಯಾದವ್:
ಭಾರತದ ಮಿಸ್ಟರ್ 360 ಖ್ಯಾತಿಯ ಬ್ಯಾಟರ್‌ ಸೂರ್ಯಕುಮಾರ್ ಯಾದವ್ ತಮ್ಮ ಕಲಾತ್ಮಕ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿದ್ದು, ಗಾಯದ ಬಳಿಕ ಸಂಪೂರ್ಣ ಚೇತರಿಸಿಕೊಂಡಿದ್ದು, ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ.

511
Rajkot: Indian batsman Dinesh Karthik celebrates after scoring a half century during the 4th T20 cricket match between India and South Africa, at Saurashtra Cricket Association Stadium, in Rajkot, Friday, June 17, 2022. (PTI Photo/Kunal Patil)(PTI06_17_2022_000258B)

Rajkot: Indian batsman Dinesh Karthik celebrates after scoring a half century during the 4th T20 cricket match between India and South Africa, at Saurashtra Cricket Association Stadium, in Rajkot, Friday, June 17, 2022. (PTI Photo/Kunal Patil)(PTI06_17_2022_000258B)

5. ದಿನೇಶ್ ಕಾರ್ತಿಕ್‌
ರಿಷಭ್ ಪಂತ್‌ಗಿಂತ ಒಳ್ಳೆಯ ಫಾರ್ಮ್‌ನಲ್ಲಿರುವ ದಿನೇಶ್‌ ಕಾರ್ತಿಕ್‌ ಅವರಿಗೆ ಇರ್ಫಾನ್ ಪಠಾಣ್ ತಂಡದೊಳಗೆ ಮಣೆ ಹಾಕಿದ್ದಾರೆ. ಐಪಿಎಲ್ ಹಾಗೂ ಇತ್ತೀಚೆಗಷ್ಟೇ ಮುಕ್ತಾಯವಾದ ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ಮ್ಯಾಚ್ ಫಿನಿಶರ್ ಆಗಿ ಗಮನ ಸೆಳೆದಿರುವ ದಿನೇಶ್ ಕಾರ್ತಿಕ್‌ಗೆ ಪಠಾಣ್ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ನೀಡಿದ್ದಾರೆ.

611
Image credit: PTI

Image credit: PTI

6. ಹಾರ್ದಿಕ್ ಪಾಂಡ್ಯ: ಟೀಂ ಇಂಡಿಯಾ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯ ಕೂಡಾ ಐಪಿಎಲ್ ಹಾಗೂ ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಮಿಂಚುತ್ತಿದ್ದಾರೆ. ಪಾಂಡ್ಯ ಮ್ಯಾಚ್ ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ.

711

7. ರವೀಂದ್ರ ಜಡೇಜಾ:
ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಕೂಡಾ ಗಾಯದಿಂದ ಚೇತರಿಸಿಕೊಂಡಿದ್ದು, ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂಲಕ ತಂಡಕ್ಕೆ ಆಸರೆಯಾಗಲು ಎದುರು ನೋಡುತ್ತಿದ್ದಾರೆ.

811
Rajkot: Indian bowler Harshal Patel celebrates the wicket of South African batsman David Miller, during the 4th T20 cricket match between India and South Africa, at Saurashtra Cricket Association Stadium, in Rajkot, Friday, June 17, 2022. (PTI Photo/Kunal Patil)(PTI06_17_2022_000278B)

Rajkot: Indian bowler Harshal Patel celebrates the wicket of South African batsman David Miller, during the 4th T20 cricket match between India and South Africa, at Saurashtra Cricket Association Stadium, in Rajkot, Friday, June 17, 2022. (PTI Photo/Kunal Patil)(PTI06_17_2022_000278B)

8. ಹರ್ಷಲ್ ಪಟೇಲ್‌: 
ಟೀಂ ಇಂಡಿಯಾ ಡೆತ್ ಓವರ್ ಸ್ಪೆಷಲಿಸ್ಟ್‌ ಆಗಿ ಗುರುತಿಸಿಕೊಂಡಿರುವ ಹರ್ಷಲ್ ಪಟೇಲ್ ಮೊನಚಾದ ಬೌಲಿಂಗ್ ಮೂಲಕ ಗಮನ ಸೆಳೆದಿದ್ದು, ಪಠಾಣ್ ತಮ್ಮ ಕನಸಿನ ತಂಡದಲ್ಲಿ ಹರ್ಷಲ್ ಪಟೇಲ್‌ಗೆ ಸ್ಥಾನ ನೀಡಿದ್ದಾರೆ.

911

9. ಭುವನೇಶ್ವರ್ ಕುಮಾರ್:
ಸ್ವಿಂಗ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್ ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಸರಣಿಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದಾರು. ಶಮಿ ಹಿಂದಿಕ್ಕಿ ಪಠಾಣ್, ಭುವಿಗೆ ತಂಡದಲ್ಲಿ ಸ್ಥಾನ ನೀಡಿದ್ದಾರೆ

1011
Image credit: PTI

Image credit: PTI

10. ಯುಜುವೇಂದ್ರ ಚಹಲ್‌
ಟೀಂ ಇಂಡಿಯಾ ಅನುಭವಿ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್, ಇತ್ತೀಚೆಗಷ್ಟೇ ಮುಕ್ತಾಯವಾದ ಐಪಿಎಲ್ ಟೂರ್ನಿಯಲ್ಲಿ ಗರಿಷ್ಟ ವಿಕೆಟ್ ಕಬಳಿಸುವ ಮೂಲಕ ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದರು. ಚಹಲ್ ಟೀಂ ಇಂಡಿಯಾದ ಪ್ರಮುಖ ಸ್ಪಿನ್ ಅಸ್ತ್ರ ಎನಿಸಿಕೊಂಡಿದ್ದಾರೆ.

1111

11. ಜಸ್ಪ್ರೀತ್ ಬುಮ್ರಾ
ಟೀಂ ಇಂಡಿಯಾ ಮಾರಕ ವೇಗಿ ಬುಮ್ರಾ, ಯಾವುದೇ ಮೈದಾನದಲ್ಲಾದರೂ ಸರಿ ಕರಾರುವಕ್ಕಾದ ದಾಳಿ ನಡೆಸುವ ಮೂಲಕ ವಿಕೆಟ್ ಕಬಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಯಾರ್ಕರ್‌ ಹಾಗೂ ಬೌನ್ಸರ್‌ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಂಗೆಡಿಸುವ ಕ್ಷಮತೆ ಬುಮ್ರಾಗಿದೆ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಐಸಿಸಿ ಟಿ20 ವಿಶ್ವಕಪ್
ಟೀಮ್ ಇಂಡಿಯಾ
ರೋಹಿತ್ ಶರ್ಮಾ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved