ಸಮಂತಾ - ರಶ್ಮಿಕಾ : ದಕ್ಷಿಣ ಭಾರತದ ನಟಿಯರ ಸೆಕ್ಸಿ ಆಬ್ಸ್!
ಸಮಂತಾ ಅಕ್ಕಿನೇನಿಯಿಂದ ಹಿಡಿದು ರಶ್ಮಿಕಾ ಮಂದಣ್ಣ ವರೆಗೂ, ದಕ್ಷಿಣ ಭಾರತದ ಚಿತ್ರರಂಗದ ಅದ್ಭುತ ನಟಿಯರನ್ನು ಹೊಂದಿದೆ. ಇವರು ಕೇವಲ ತಮ್ಮ ನಟನೆಗೆ ಪಾತ್ರ ಫೇಮಸ್ ಆಗಿಲ್ಲ. ಜೊತೆಗೆ ಸೌತ್ನ ಈ ನಟಿಯರು ಸೂಪರ್ ಫಿಟ್ ಕೂಡ ಇದ್ದಾರೆ. ಇವರು ತಮ್ಮ ಪರ್ಫೇಕ್ಟ್ ಬಾಡಿ ಮತ್ತು ಸೆಕ್ಸು ಅಬ್ಸ್ನಿಂದ ಬೆರಗುಗೊಳಿಸಿದ್ದಾರೆ.
ಸಮಂತಾ ಅಕ್ಕಿನೇನಿ: ಪ್ರಸ್ತುತ, ಸಮಂತಾ ಐಷಾರಾಮಿ ಫ್ರೆಂಚ್ ಫ್ಯಾಷನ್ ಬ್ರಾಂಡ್ ಲೂಯಿ ವಿಟಾನ್ ಶೂಟ್ನಿಂದಾಗಿ ಸುದ್ದಿಯಾಗಿದ್ದಾರೆ. ಸಮಂತಾ ಲೂಯಿ ವಿಟಾನ್ ಶೂಟಿಂಗ್ನ ಕೆಲವು ಚಿತ್ರಗಳನ್ನು ಹಂಚಿಕೊಂಡರು. ಅವರ ಫೋಟಗಳಿಗೆ ಆಕೆಯ ಅಭಿಮಾನಿಗಳು ಮತ್ತು ಸ್ನೇಹಿತರಿಂದ ಸಕ್ಕತ್ ಪಾಸಿಟಿವ್ ಕಾಮೆಂಟ್ಗಳು ಬರುತ್ತಿವೆ. ಅವರ ಲುಕ್ ಮತ್ತು ಅಬ್ಸ್ ಬಗ್ಗೆ ಎಲ್ಲರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಆಮಿ ಜಾಕ್ಸನ್: ಒಂದು ಮಗುವಿನ ತಾಯಿ ನಟಿ ಆಮಿ ಜಾಕ್ಸನ್ ತಮ್ಮ ಪ್ರತಿ ಇನ್ಸ್ಟಾಗ್ರಾಮ್ ಪೋಸ್ಟ್ನೊಂದಿಗೆ ಫೀಟ್ನೆಸ್ ಮಟ್ಟವನ್ನು ಹೆಚ್ಚಿಸುತ್ತಾರೆ. ಲಾಕ್ಡೌನ್ ಸಮಯದಲ್ಲಿ ಆಮಿ ಯೋಗ ಮತ್ತು ಜಿಮ್ ಮಾಡುವುದನ್ನು ಕಾಣಬಹುದು. ನಿಮ್ಮ ಸ್ವಂತ ಪರ್ಸನಲ್ ಎನರ್ಜಿ ಮತ್ತು ಯೋಗಕ್ಷೇಮವನ್ನು ನೋಡಿಕೊಳ್ಳುವುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ ಎಂದು ನಟಿ ಮನಸ್ಸು ಮತ್ತು ದೇಹವನ್ನು ಫಿಟ್ ಆಗಿರಿಸುವುದರ ಮಹತ್ವದ ಬಗ್ಗೆ ಹೇಳಿದ್ದಾರೆ.
ಕಾಜಲ್ ಅಗರ್ವಾಲ್: ಹೊಸದಾಗಿ ಮದುವೆಯಾದ ಕಾಜಲ್ ಸಿಂಗಾಪುರದ ಮೇಡಂ ಟುಸ್ಸಾಡ್ಸ್ನಲ್ಲಿ ವ್ಯಾಕ್ಸ್ ಸ್ಟಾಚ್ಯೂ ಅನಾವರಣಗೊಳಿಸಿದ ನಂತರ ಸುದ್ದಿಯಾಗಿದ್ದಾರೆ. ಆಕೆಯ ಮುಂಬರುವ ಪ್ರಾಜೆಕ್ಟ್ಗಳೆಂದರೆ ಆಚಾರ್ಯ, ಮೊಸಗಲ್ಲು, ಹೇ ಸಿನಾಮಿಕಾ, ಪ್ಯಾರಿಸ್ ಪ್ಯಾರಿಸ್ ಮತ್ತು ಕಮಲ್ ಹಾಸನ್ ಅವರ ಇಂಡಿಯನ್ 2.
ರಶ್ಮಿಕಾ ಮಂದಣ್ಣ: ನ್ಯಾಷನಲ್ ಕ್ರಶ್ ಎಂದೇ ಫೇಮಸ್ ಆಗಿರುವ ರಶ್ಮಿಕಾ ಮಂದಣ್ಣ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಷನ್ ಮಜ್ನು ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಲಿದ್ದಾರೆ. ನಂತರ ಅಮಿತಾಬ್ ಬಚ್ಚನ್ ಜೊತೆ ಗುಡ್ಬೈನಲ್ಲಿ ಕೆಲಸ ಮಾಡಲಿದ್ದಾರೆ. ರಶ್ಮಿಕಾ ಅವರ ಬೆಸ್ಟ್ ಫ್ರೆಂಡ್ ವಿಜಯ್ ದೇವರಕೊಂಡ ಜೊತೆ ಜಿಮ್ಗೆ ಹೋಗುವುದನ್ನು ನೋಡಿದ್ದೇವೆ.
ನಯನತಾರಾ: ವಾರಗಳ ಹಿಂದೆ, ಅವರು ನಿರ್ದೇಶಕ, ಚೆಲುವೆ ವಿಘ್ನೇಶ್ ಶಿವನ್ ಜೊತೆ ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದರು ಮತ್ತು ಈಗ ಅವರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ನಯನತಾರಾ ಪ್ರಸ್ತುತ ಪುಣೆಯಲ್ಲಿ ಶಾರುಖ್ ಖಾನ್ ಜೊತೆ ಅಟ್ಲಿ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ದಕ್ಷಿಣದ 'ಲೇಡಿ ಸೂಪರ್ಸ್ಟಾರ್' ಎಂದೇ ಫೇಮಸ್ ಆಗಿರುವ ಇವರು ಸೌತ್ನ ಫಿಟೆಸ್ಟ್ ನಟಿಯರಲ್ಲಿ ಒಬ್ಬರು.
ರಕುಲ್ ಪ್ರೀತ್ ಸಿಂಗ್: ರಕುಲ್ ಫ್ಯಾನ್ಸ್ ಮತ್ತು ಫಾಲೋವರ್ಸ್ ಅನ್ನು ತನ್ನ ವರ್ಕ್ಔಟ್ ವೀಡಿಯೋಗಳು ಮತ್ತು ಜಿಮ್ ಫೋಟೋಗಳ ಮೂಲಕ ಪ್ರೇರೇಪಿಸುತ್ತಾರೆ. ರಕುಲ್ ಪ್ರೀತ್ ವಿವಿಧ ಆಸನಗಳನ್ನು ಫರ್ಪೇಕ್ಟ್ ಆಗಿ ಮಾಡುವ ಕಲೆಯನ್ನು ಹೊಂದಿದ್ದಾರೆ. ರಕುಲ್ ಪ್ರತಿದಿನ ಫಿಟ್ನೆಸ್ ಕೌಶಲ್ಯಗಳನ್ನು ಅಭ್ಯಾಸ ಮಾಡುತ್ತಿದ್ದಾರೆ ಮತ್ತು ಆಗಾಗ್ಗೆ ತನ್ನ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಹಂಚಿಕೊಳ್ಳುತ್ತಾರೆ.
ಶೃತಿ ಹಾಸನ್: ಶೃತಿ ಹಾಸನ್ ಭಾರತೀಯ ಚಿತ್ರರಂಗದ ಅತ್ಯಂತ ಮಾಡ್ರನ್ ಮತ್ತು ಬೋಲ್ಡ್ ನಟಿಯರಲ್ಲಿ ಒಬ್ಬರು.ಮಾನಸಿಕ ಮತ್ತು ದೈಹಿಕ ಆರೋಗ್ಯದ ಬಗ್ಗೆ ಮಾತನಾಡುವ ಇವರು ಸಂದರ್ಶನವೊಂದರಲ್ಲಿ, 'ನಾನು ಫಿಟ್ ಆಗಿರಲು ಓಡುತ್ತೇನೆ, ಆದರೆ ಇದು ನನ್ನ ಮಾನಸಿಕ ಆರೋಗ್ಯ ವ್ಯಾಯಾಮದ ಒಂದು ಭಾಗವಾಗಿದೆ. ನಾನು ಆತಂಕದಿಂದ ಬಳಲುತ್ತಿದ್ದೇನೆ ಮತ್ತು ನಿಯಮಿತವಾದ ವ್ಯಾಯಾಮವು ಅದನ್ನು ನಿಯಂತ್ರಣದಲ್ಲಿಡುತ್ತದೆ' ಎಂದು ಹೇಳಿದ್ದಾರೆ.