ಮಗಳನ್ನು ಸರಿಯಾಗಿ ಬೆಳೆಸೋಕ್ಕೆ ಆಗಲ್ವಾ? ಖುಷ್ಬೂ ಪುತ್ರಿಯ ಹಾಟ್ ಅವತಾರಕ್ಕೆ ನೆಟ್ಟಿಗರ ತರಾಟೆ
ಖುಷ್ಬೂ ಸುಂದರ್ ಪುತ್ರಿ ಆವಂತಿಕಾ ಶೇರ್ ಮಾಡಿರುವ ಬೋಲ್ಡ್ ಫೋಟೋಗೆ ನೆಟ್ಟಿಗರು ಕೆಟ್ಟದಾಗಿ ಕಾಮೆಂಟ್ ಮಾಡಿ ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಟಿ ಖುಷ್ಬೂ ಸುಂದರ್ ಸದ್ಯ ಸಿನಿಮಾರಂಗಕ್ಕಿಂತ ಹೆಚ್ಚಾಗಿ ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ. ಆದರೀಗ ಖುಷ್ಬೂ ಪುತ್ರಿ ಸುದ್ದಿಯಲ್ಲಿದ್ದಾರೆ. ಖುಷ್ಬೂ ಅವರಿಗೆ ಇಬ್ಬರೂ ಹೆಣ್ಣು ಮಕ್ಕಳು. ಆವಂತಿಕಾ ಮತ್ತು ಆನಂದಿತಾ ಎಂದು ಮಕ್ಕಳಿಗೆ ಹೆಸರಿಟ್ಟಿದ್ದಾರೆ.
ಖುಷ್ಬೂ ಅವರ ಮೊದಲ ಮಗಳು ಆವಂತಿಕಾ ಈಗ ಸುದ್ದಿಯಲ್ಲಿದ್ದಾರೆ. ಸಿನಿಮಾರಂಗದಿಂದ ದೂರ ಇದ್ದರೂ ಆವಂತಿಕಾ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಹಾಟ್ ಅವತಾರ.
ಖುಷ್ಬೂ ಪುತ್ರಿ ಆವಂತಿಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಆವಂತಿಕಾ ಸಿನಿಮಾರಂಗಕ್ಕೆ ಎಂಟ್ರಿ ಕೊಡುವ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ. ಆದರೆ ಸಿಕ್ಕಾಪಟ್ಟೆ ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸದ್ಯ ಹಂಚಿಕೊಂಡಿರುವ ಫೋಟೋ ನೋಡಿ ಅಭಿಮಾನಿಗಳು ಕ್ಲಾಸ್ ತೆಗೆದುಕೊಂಡಿದ್ದಾರೆ.
'ಮಗಳಿಗೆ ಮೊದಲು ಸರಿಯಾಗಿ ಬಟ್ಟೆ ಹಾಕಲು ಹೇಳಿ' ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ, 'ಮಗಳನ್ನು ಸರಿಯಾಗಿ ಬೆಳೆಸೋಕ್ಕೆ ಆಗಲ್ವಾ' ಎಂದು ಕೇಳಿದ್ದಾರೆ. 'ಒಳ ಉಡುಪು ಇಲ್ಲದೆ ಬಟ್ಟೆ ಶೇರ್ ಮಾಡಿದ್ದಾರೆ' ಎಂದು ಹೇಳಿದ್ದಾರೆ.
ಆವಂತಿಕಾ ಹಾಟ್ ಬಟ್ಟೆ ಜೊತೆಗೆ ಹೇರ್ ಸ್ಟೈಲ್ ಕೂಡ ವಿಚಿತ್ರವಾಗಿದೆ. ಕೂದಲಿಗೆ ಹಸಿರು ಬಣ್ಣ ಹಾಕಿಸಿಕೊಂಡಿದ್ದಾರೆ. ವಿಚಿತ್ರ ಅವತಾರ ನೋಡಿ ನೆಟ್ಟಿಗರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಮಗಳು ನಿಮ್ಮ ಘನತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಹೇಳಿದ್ದಾರೆ.
ಮಗಳ ಬಗ್ಗೆ ನೆಟ್ಟಿಗರು ಕಾಮೆಂಟ್ಗಳಿಗೆ ಖುಷ್ಬೂ ಪ್ರತಿಕ್ರಿಯೆ ನೀಡುತ್ತಾರಾ ಕಾದುನೋಡಬೇಕಿದೆ. ಇನ್ನೂ ಆವಂತಿಕಾ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಾರಾ ಎನ್ನುವುದು ಕೂಡ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.