ತೂಕ ಇಳಿಸಿಕೊಂಡ ಅರ್ಜುನ್ ಕಪೂರ್ ತಂಗಿಯ ಸ್ವಿಮ್ಸೂಟ್ ಫೋಟೋ ವೈರಲ್
ಬಾಲಿವುಡ್ ನಟ ಅರ್ಜುನ್ ಕಪೂರ್ (Arjun Kapoor) ತಂಗಿ ಅಂಶುಲಾಕಪೂರ್ (Anshula Kapoor) ಮೊದಲ ಬಾರಿಗೆ ಬಿಕಿನಿ ಧರಿಸಿರುವ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ, ಅವರು ಸುದೀರ್ಘ ಬರಹದೊಂದಿಗೆ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ ಮತ್ತು ಇಷ್ಟು ವರ್ಷಗಳಿಂದ ಬಿಕಿನಿ (Bikini) ಧರಿಸಲು ಏಕೆ ಹೆದರುತ್ತಿದ್ದರು ಎಂದು ಹೇಳಿದ್ದಾರೆ. ಅರ್ಜುನ್ ಕಪೂರ್ ಸಹೋದರಿ ಅಂಶುಲಾ ದೇಹ ರೂಪಾಂತರದ (Body Transformation) ನಂತರ ಬಿಕಿನಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಅರ್ಜುನ್ ಕಪೂರ್ ಸಹೋದರಿ ಅಂಶುಲಾ ಕಪೂರ್ ಮೊದಲ ಬಾರಿಗೆ ಬಿಕಿನಿಯಲ್ಲಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅವರು ಫೋಟೋವನ್ನು ಪೋಸ್ಟ್ ಮಾಡಿದ್ದಾರದರೂ ಅವರ ಮುಖವನ್ನು ಬೇರೆ ಕಡೆ ತಿರುಗಿಸಿದ್ದಾರೆ. ಇದರೊಂದಿಗೆ, ಅವರು ತಮ್ಮ ದೇಹದ ಆಕಾರದ ಬಗ್ಗೆ ಸುದೀರ್ಘ ಪೋಸ್ಟ್ ಅನ್ನು ಸಹ ಹಂಚಿಕೊಂಡಿದ್ದಾರೆ. ಹಂಚಿಕೊಂಡ ಫೋಟೋದಲ್ಲಿ, ಅವರು ನೀಲಿ ಟು ಪೀಸ್ ಬಿಕಿನಿಯನ್ನು ಧರಿಸಿ ಈಜುಕೊಳದ ಪಕ್ಕದಲ್ಲಿ ತನ್ನ ಕಾಲುಗಳನ್ನು ನೀರಿನಲ್ಲಿ ಇಟ್ಟುಕೊಂಡು ಕುಳಿತಿದ್ದಾರೆ .
ಫೋಟೋವನ್ನು ಹಂಚಿಕೊಂಡ ಅವರು, ಈಜುಡುಗೆ ಧರಿಸುವ ಬಗ್ಗೆ ನನಗೆ ವಿಶ್ವಾಸವಿರಲಿಲ್ಲ ಎಂದು ಬರೆದಿದ್ದಾರೆ. ಅವರ ಪೋಸ್ಟ್ಗೆ ಅಭಿಮಾನಿಗಳ ಜೊತೆಗೆ ಸೆಲೆಬ್ರಿಟಿಗಳು ಸಹ ಕಮೆಂಟ್ ಮಾಡುತ್ತಿದ್ದಾರೆ.
ಅಂಶುಲಾ ಬಾಡಿ ಶೇಮಿಂಗ್ಗೆ (Body Shaming) ಹಲವು ಬಾರಿ ಬಲಿಯಾಗಿದ್ದಾರೆ. ಅದೇ ಸಮಯದಲ್ಲಿ, ಇತ್ತೀಚೆಗೆ ಅವರ ಟ್ರಾನ್ಫರ್ಮೇಷನ್ ನೋಡಿ, ಜನರು ಆಶ್ಚರ್ಯಚಕಿತರಾದರು. ಬಿಕಿನಿ ಫೋಟೋ ಶೇರ್ ಮಾಡುವ ಮೂಲಕ ಅಂಶುಲಾ ಈ ವಿಷಯ ಬರೆದಿದ್ದಾರೆ.
ಅಂಶುಲಾ ಕಪೂರ್ ಸಾಮಾಜಿಕ ಮಾಧ್ಯಮದಲ್ಲಿ (Social Media) ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಆಗಾಗ್ಗೆ ಅವರ ಫೋಟೋಗಳು ಮತ್ತು ಅವರ ವೈಯಕ್ತಿಕ ಜೀವನಕ್ಕೆ (Personal Life) ಸಂಬಂಧಿಸಿದ ವಿಷಯಗಳನ್ನು ಹಂಚಿಕೊಳ್ಳುತ್ತಾರೆ.
'3 ತಿಂಗಳ ಹಿಂದೆ ನಾನು @priyamganeriwal ಅವರೊಂದಿಗೆ ಸ್ವಿಮ್ಸೂಟ್ಗಳ ಬಗ್ಗೆ ಮಾತನಾಡಿದ್ದು ನೆನಪಿದೆ ಮತ್ತು ನಾನು ಎಂದಿಗೂ ಬಿಕಿನಿಯನ್ನು ಧರಿಸುವುದಿಲ್ಲ ಎಂದು ಹೇಳಿದ್ದೆ. ನನಗೆ ಬಿಕಿನಿ ತೊಡುವ ವಿಶ್ವಾಸವಿರಲಿಲ್ಲ' ಎಂದು ಮೊದಲ ಬಾರಿಗೆ ತನ್ನ ಬಿಕಿನಿ ಫೋಟೋವನ್ನು ಹಂಚಿಕೊಂಡ ಅಂಶುಲಾ ಬರೆದಿದ್ದಾರೆ.
'ನಾನು ಏಕೆ ಹಿಂಜರಿಯುತ್ತಿದ್ದೆ? ಏಕೆಂದರೆ ಕೆಲವು ಬಟ್ಟೆಗಳನ್ನು ಧರಿಸಲು ನನಗೆ ವಿಶೇಷವಾದ ದೇಹ ಪ್ರಕಾರ ಬೇಕು ಎಂದು ಭಾವಿಸುತ್ತೇನೆ. ಈ ಮನಸ್ಥಿತಿಯನ್ನು ಬದಲಾಯಿಸಲು ನಾನು ಕಲಿಯುತ್ತಿದ್ದೇನೆ. ನಾನು ಬಿಕಿನಿ ಖರೀದಿಸಿದ್ದಕ್ಕೆ ನನಗೆ ಖುಷಿಯಾಗಿದೆ. ಈ ರಜೆ ನನ್ನ ನೆಚ್ಚಿನ ದಿನಗಳಲ್ಲಿ ಒಂದಾಗಿದೆ. ನಾನು ಆತ್ಮವಿಶ್ವಾಸವನ್ನು ಅನುಭವಿಸುತ್ತಿದ್ದೇನೆ. ಈ ಬಿಕಿನಿಯನ್ನು ಮತ್ತೆ ಧರಿಸಲು ನಾನು ನಿಜವಾಗಿಯೂ ಕಾತುರಳಾಗಿದ್ದೇನೆ, ಎಂದು ಅನ್ಶುಲಾ ಹೇಳಿ ಕೊಂಡಿದ್ದಾರೆ.
ಅರ್ಜುನ್ ಕಪೂರ್ ಸಹೋದರಿ ಸಿನಿಮಾದಿಂದ ದೂರ. ತಮ್ಮ ಕುಟುಂಬದ ಇತರ ಸದಸ್ಯರಂತೆ ನಟನಾ ಕ್ಷೇತ್ರವನ್ನು ಆಯ್ದು ಕೊಳ್ಳದೇ ಆದರಿಂದ ದೂರ ಉಳಿದಿದ್ದಾರೆ. ಅನ್ಶುಲಾ ಮೊದಲಿನಿಂದಲೂ ಓದಿನಲ್ಲಿ ಚುರುಕು. ಅವರು ಗೂಗಲ್ (Google) ಮತ್ತು ಹೃತಿಕ್ ರೋಷನ್ ಅವರ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ.
ಪ್ರಚಾರದಿಂದ ದೂರವಿದ್ದರೂ, ಕುಟುಂಬದ ಕಾರ್ಯಕ್ರಮಗಳಲ್ಲಿ ತನ್ನ ಸಹೋದರಿಯರೊಂದಿಗೆ ಎಂಜಾಯ್ ಮಾಡುವುದನ್ನು ಕಾಣಬಹುದು. ಅದೇ ಸಮಯದಲ್ಲಿ, ಅವರು ತನ್ನ ಸಹೋದರ ಅರ್ಜುನ್ ಕಪೂರ್ ಜೊತೆ ವಿಶೇಷ ಬಾಂಧವ್ಯವನ್ನು (Special Bonding) ಹಂಚಿಕೊಳ್ಳುತ್ತಾರೆ.