ಇಳಿದ ಚಿನ್ನದ ದರ, ಗ್ರಾಹಕರಿಗೆ ಸಂತಸ: ಇಲ್ಲಿದೆ ನೋಡಿ ಇಂದಿನ ರೇಟ್!
ಏರಿಳಿತವಾಡುತ್ತಿದ್ದ ಚಿನ್ನದ ದರ ಇಳಿಕೆ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಫೆಬ್ರವರಿ 24 ಗೋಲ್ಡ್ ರೇಟ್
ಲಾಕ್‌ಡೌನ್ ಮಧ್ಯೆ ಏರಿಕೆಯಾಗಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದ ಚಿನ್ನದ ದರ, ಕಳೆದ ಕೆಲ ದಿನಗಳಿಂದ ಇಳಿಕೆಯ ಹಾದಿ ಹಿಡಿದಿದೆ.
ಹಾವೇಣಿ ಆಟವಾಡುತ್ತಿದ್ದ ಚಿನ್ನದ ದರ ಬಜೆಟ್ ಮಂಡನೆ ಬಳಿಕ ಮತ್ತೆ ಕುಸಿದಿದೆ.
ಅಲ್ಲದೇ ಕಳೆದ ಎಂಟು ತಿಂಗಳಲ್ಲೇ ಕನಿಷ್ಟ ದರ ತಲುಪಿದೆ.
ಆದರೀಗ ಕಳೆದೆರಡು ದಿನಗಳಿಂದ ಚಿನ್ನದ ದರ ಏರಿಕೆಯಾಗಿದ್ದು ಗ್ರಾಹಕರನ್ನು ಅಸಮಾಧಾನಗೊಳಿಸಿತ್ತು.
ಆದರೀಗ ಮತ್ತೆ ಚಿನ್ನದ ದರ ಇಳಿಕೆಯಾಗಿದೆ.
ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 100 ರೂ. ಇಳಿಕೆಯಾಗಿ ದರ 43,750 ರೂಪಾಯಿ ಆಗಿದೆ.
ಇನ್ನು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 110ರೂ. ಇಳಿಕೆಯಾಗಿ 47,730ರೂಪಾಯಿ ಆಗಿದೆ.
ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ 70,010ರೂ ಆಗಿದೆ.
ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ