ವಾರಾಂತ್ಯಕ್ಕೆ ಚಿನ್ನದ ದರದಲ್ಲಿ ದಾಖಲೆಯ ಕುಸಿತ, ಬೆಳ್ಳಿಯೂ ಅಗ್ಗ!
ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಫೆಬ್ರವರಿ 13ಗೋಲ್ಡ್ ರೇಟ್
ಕೇಂದ್ರ ಬಜೆಟ್ ಮಂಡನೆ ಬಳಿಕ ಏಕಾಏಕಿ ಕುಸಿದಿದ್ದ ಚಿನ್ನದ ದರ ಮತ್ತೆ ಹಾವೇಣಿ ಆಟ ಆರಂಭಿಸಿತ್ತು.
ಚಿನ್ನ ದರ ಕುಸಿಯುತ್ತಿದೆ ಎಂದು ಖರೀದಿಸಲು ಮುಂದಾದವರಿಗೆ ಇದು ಆತಂಕ ಸೃಷ್ಟಿಸಿತ್ತು.
ಆದರೀಗ ಕಳೆದ ಎರಡು ದಿನಗಳಿಂದ ಚಿನ್ನ ಹಾಗೂ ಬೆಳ್ಳಿ ದರ ಕುಸಿಯುತ್ತಿದ್ದು, ಗ್ರಾಹರನ್ನು ಕೊಂಚ ನಿರಾಳರನ್ನಾಗಿಸಿದೆ.
ಹೌದು ವಾರಾಂತ್ಯದಲ್ಲಿ ಚಿನ್ನದ ದರ ಕುಸಿತದಿಂದ ಗ್ರಾಹಕರು ಖರೀದಿಸಲು ಸಜ್ಜಾಗಿದ್ದಾರೆ.
ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 300 ರೂ. ಇಳಿಕೆಯಾಗಿ ದರ 44,250 ರೂಪಾಯಿ ಆಗಿದೆ.
ಇನ್ನು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 310ರೂ. ಇಳಿಕೆಯಾಗಿ 48,290ರೂಪಾಯಿ ಆಗಿದೆ.
ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ 69,200ರೂ ಆಗಿದೆ.
ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ