ಮತ್ತಷ್ಟು ಮುಗ್ಗರಿಸಿದ ಚಿನ್ನದ ದರ, ಕೊಳ್ಳೋರಿಗೆ ಸಂತಸ!
ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಫೆಬ್ರವರಿ 05ಗೋಲ್ಡ್ ರೇಟ್
ಕೊರೋನಾ ಕಾಲದಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದ ಚಿನ್ನದ ದರ, ಗ್ರಾಹಕರನ್ನು ಭಾರೀ ಚಿಂತೆಗೀಡು ಮಾಡಿತ್ತು.
ನೋಡ ನೋಡುತ್ತಿದ್ದಂತೆಯೇ ಏರಿಕೆಯಾಗಿದ್ದ ಚಿನ್ನದ ದರ ಇಳಿಯುವ ಲಕ್ಷಣಗಳೇ ತೋರಿರಲಿಲ್ಲ.
ಇದಾದ ಬಳಿಕ ಕೊಂಚ ಇಳಿಮುಖವಾಗಿದ್ದರೂ ಚಿನ್ನದ ದರ ಹಾವೇಣಿ ಆಟ ಮುಂದುವರೆಸಿತ್ತು.
ಇದು ಗ್ರಾಹರನ್ನು ಮತ್ತಷ್ಟು ಗೊಂದಲಕ್ಕೆ ದೂಡಿತ್ತು.
ಮದುವೆ ಮೊದಲಾದ ಶುಭ ಕಾರ್ಯಗಳನ್ನಿಟ್ಟುಕೊಂಡವರಿಗೆ ಏರಿಕೆಯಾಗುತ್ತಿದ್ದ ಚಿನ್ನದ ದರ ಕಂಗಾಲಾಗಿಸಿತ್ತು.
ಆದರೀಗ ಕೊರೋನಾ ಅಬ್ಬರ ಕಡಿಮೆಯಾಗುತ್ತಿದ್ದಂತೆಯೇ ಇತ್ತ ಚಿನ್ನದ ದರವೂ ಇಳಿಯುತ್ತಿದೆ.
ಇದಕ್ಕೆ ತಕ್ಕಂತೆ ಸೋಮವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದ ಬಜೆಟ್ ಎಫೆಕ್ಟ್ ಕೂಡಾ ಪೂರಕವಾಗಿ ಪರಿಣಮಿಸಿದೆ.
ಸದ್ಯ ಸತತ ಐದನೇ ದಿನ ಚಿನ್ನದ ದರ ಇಳಿಕೆಯಾಗಿರುವುದು ಗ್ರಾಹಕರನ್ನು ಮತ್ತಷ್ಟು ಖುಷಿಪಡಿಸಿದೆ.
ಇಂದು ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ 600 ರೂ. ಇಳಿಕೆಯಾಗಿ ದರ 43,750ರೂಪಾಯಿ ಆಗಿದೆ.
ಇನ್ನು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 650ರೂ. ಇಳಿಕೆಯಾಗಿ 47,730 ರೂಪಾಯಿ ಆಗಿದೆ.
ಇನ್ನು ಇತ್ತ ಬೆಳ್ಳಿ ದರ ಮಾತ್ರ ಒಂದು ಕೆ. ಜಿ. ಬೆಳ್ಳಿ ದರ, 4,200 ರೂ. ಇಳಿಕೆಯಾಗಿ 68,000ರೂ ಆಗಿದೆ.
ಹೀಗಿದ್ದರೂ ತಜ್ಞರು ಮಾತ್ರ ಕೊರೋನಾ ಆತಂಕ ಇನ್ನೂ ನಿವಾರಣೆಯಾಗಿಲ್ಲ, ಹೀಗಾಗಿ ಚಿನ್ನದ ದರ ಏರಿಕೆ ಆಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ