ಪ್ರಾರ್ಥಿಸಲು ವಿಭಿನ್ನ ವಿಧಾನಗಳಿವೆ. ಮಂತ್ರ ಜಪಿಸುವುದು ಪ್ರಭಾವಶಾಲಿಯೂ ಹೌದು. ಇದು ಮನಸ್ಸನ್ನು ಬೇಗ ನಿಯಂತ್ರಿಸುತ್ತದೆ. ಬೇರೆ ಬೇರೆ ಮಂತ್ರಗಳನ್ನು ಜಪಿಸುವುದರಿಂದ ಬೇರೆ ಬೇರೆ ರೀತಿಯ ಲಾಭಗಳಿವೆ. ಮಂತ್ರ ಜಪಿಸುವಾಗ ಮಾಲೆಯನ್ನು ಹಿಡಿಯುತ್ತಾರೆ. ಬೇರೆ ಬೇರೆ ರೀತಿಯ ಮಾಲೆಗಳನ್ನೂ ಹಿಡಿಯುತ್ತಾರೆ. ಈ ಮಾಲೆಯ ಮಹತ್ವವೇನು? 

ರುದ್ರಾಕ್ಷಿ: ಈ ಮಾಲೆಯನ್ನು ಹಿಡಿದು ಎಲ್ಲಾ ಮಂತ್ರಗಳನ್ನೂ ಸುಲಭವಾಗಿ ಜಪಿಸಬಹುದು. ಇನ್ನು ಶಿವನಿಗೆ ರುದ್ರಾಕ್ಷಿ ಪ್ರಿಯ. ಆದುದರಿಂದ ಮಹಾಮೃತ್ಯುಂಜಯ ಮಂತ್ರ ಜಪಿಸಲು ರುದ್ರಾಕ್ಷಿ ಮಾಲೆ ಬಳಸಲಾಗುತ್ತದೆ. ಜತೆಗೆ ಬೇರೆ ದೇವರ ಮಂತ್ರವನ್ನೂ ಈ ಮಾಲೆ ಬಳಸಿ ಪಠಿಸಬಹುದು. 

ಹಳದಿ: ಹಳದಿ ಬಣ್ಣದ ಮಾಲೆ ಹಿಡಿದು, ಜಪಿಸಿದರೆ ಮನಸ್ಸಿನ ಇಚ್ಛೆ ಪೂರ್ತಿಯಾಗುತ್ತದೆ. ಬೃಹಸ್ಪತಿ ಮತ್ತು ಬಾಗಲಾಮುಖಿ ದೇವಿ ಮಂತ್ರ ಜಪಿಸುವಾಗಲೂ ಈ ಮಾಲೆ ಬಳಸಬೇಕು. ಹಳದಿ ಮಾಲೆಯಿಂದ ವಿದ್ಯೆ, ಸಂತಾನ ಮತ್ತು ಜ್ಞಾನ ಪ್ರಾಪ್ತಿಯಾಗುತ್ತದೆ. 

ಸ್ಫಟಿಕ: ಸ್ಪಟಿಕ ಮಾಲೆಯ ಪ್ರಯೋಗದಿಂದ ಧನ ಪ್ರಾಪ್ತಿಯಾಗುತ್ತದೆ. ಜೊತೆಗೆ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ. ಲಕ್ಷ್ಮಿ ದೇವಿಯನ್ನು ಜಪಿಸಲು ಈ ಮಾಲೆ ಬಳಸಲಾಗುತ್ತದೆ. ಅಧಿಕ ರಕ್ತದೊತ್ತಡ ಇರವವರು ಈ ಮಾಲೆ ಬಳಸಬೇಕು. 

ಚಂದನ: ದುರ್ಗಾ ದೇವಿಯ ಮಂತ್ರ ಜಪಿಸಲು ಕೆಂಪು ಚಂದನ ಹಾಗೂ ಕೃಷ್ಣಾ ಮಂತ್ರ ಜಪಿಸಲು ಬಿಳಿ ಚಂದನ ಬಳಸುತ್ತಾರೆ. 

ತುಳಸಿ : ತುಳಸಿ ಮಾಲೆ ದೇವಿ ಮತ್ತು ಶಿವನ ಮಂತ್ರ ಜಪಿಸಲು ಬಳಕೆಯಾಗುತ್ತದೆ. ತುಳಸಿ ಮಾಲೆ ಧರಿಸಿದರೆ ಜೀವನ ಸುಖಮಯವಾಗುತ್ತದೆ ಎಂಬ ನಂಬಿಕೆ ಇದೆ.