ಯಾದಗಿರಿಯಲ್ಲಿ ರಕ್ಷಾಬಂಧನ ಹಬ್ಬದ ಸಂಭ್ರಮ..!

ರಕ್ಷಾ ಬಂಧನ ಇವೆರಡು ಪದಗಳು ಸೇರಿದ್ರೆ ಅದಕ್ಕೆ ಅರ್ಥ ಬರ್ತದೆ. ರಕ್ಷಾ ಅಂದ್ರೆ ಹಾಗೂ ಬಂಧನ ಅಂದ್ರೆ ಸಂಬಂಧ. ಕೇವಲ ಒಡಹುಟ್ಟಿದವರು ಮಾತ್ರ ಸಹೋದರರು ಹಾಗೂ ಸಹೋದರಿಯರು ಅಲ್ಲ. ಒಬ್ಬ ಹೆಣ್ಣು ಸಂಕಷ್ಟದಲ್ಲಿದ್ದಾಗ ಆಕೆಯನ್ನು ರಕ್ಷಿಸುವವನೇ ರಕ್ಷೆಯ ಧೋತಕ. ಹಾಗಾಗಿ ಸಮಾಜದಲ್ಲಿ ಸಹೋದತೆ, ಪ್ರೀತಿ ಹಾಗೂ ಭಾವ ಮೂಡಲು ಈ ರೀತಿಯ ಹಬ್ಬಗಳ ಆಚರಣೆಗಳು ಪ್ರಮುಖವಾಗಿವೆ.

Raksha Bandhan Festival Celebrated in Yadgir grg

ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಯಾದಗಿರಿ

ಯಾದಗಿರಿ(ಆ.31): ಅಣ್ಣ-ತಂಗಿಯರ ಬಾಂಧವ್ಯವನ್ನು ಗಟ್ಟಿಗೊಳಿಸುವ ಹಬ್ಬ ಅಂದ್ರೆ ಅದು ರಕ್ಷಾಬಂಧನ. ತಂಗಿಯರನ್ನು ರಕ್ಷಣೆ ಮಾಡುವವನೇ ಅಣ್ಣ ಎಂಬ ಪ್ರತೀತಿ ಇದೆ. ಈ ರಕ್ಷಾಬಂಧನ ಹಬ್ಬವನ್ನು ಯಾದಗಿರಿಯ ಶಾಲಾ ಮಕ್ಕಳು ವಿಶೇಷ ಹಾಗೂ ವಿಭಿನ್ನವಾಗಿ ಆಚರಣೆ ಮಾಡಿದ್ದಾರೆ. ಶಾಲೆಯ ವಿದ್ಯಾರ್ಥಿಯರು ತಾವು ಕೈಯ್ಯಾರ ತಯಾರಿಸಿದ ರಾಖಿಯನ್ನ ತಮ್ಮ ಅಣ್ಣ-ತಮ್ಮಂದಿರ ಕೈಗೆ ಕಟ್ಟುವ ಮೂಲಕ ಸಹೋದರತ್ವ ಮೆರೆದಿದ್ದಾರೆ. ಹಾಗಾದ್ರೆ ಆ ಶಾಲೆಯ ಮಕ್ಕಳ ರಕ್ಷಾ ಬಂಧನ ಹಬ್ಬದ ಸಂಭ್ರಮ-ಸಡಗರ ಹೇಗಿತ್ತು ಅಂತೀರಾ ಈ ಸ್ಟೋರಿ ನೋಡಿ.

ತಾವೇ ಕೈಯ್ಯಾರ ತಯಾರಿಸಿ ಸಹಪಾಠಿಗಳಿಗೆ ರಾಖಿ ಕಟ್ಟಿದ ವಿದ್ಯಾರ್ಥಿನಿಯರು

ದೇಶದ್ಯಾದ್ಯಂತ ರಕ್ಷಾಬಂಧನ ಹಬ್ಬವನ್ನು ಬಹಳ ಸಂಭ್ರಮ-ಸಡಗರದಿಂದ ಆಚರಣೆ ಮಾಡಲಾಗ್ತಿದೆ. ಹಲವು ಸಹೋದರಿಯರು ಮಾರುಕಟ್ಟೆ ಅಥವಾ ಅಂಗಡಿಗಳಿಗೆ ಹೋಗಿ ಬಣ್ಣ ಬಣ್ಣದ ರಾಖಿಯನ್ನ ತೆಗೆದುಕೊಂಡು ಬಂದು ಸಹೋದರರಿಗೆ ರಾಖಿ ಕಟ್ತಾರೆ. ಆದ್ರೆ ಯಾದಗಿರಿಯ ನವನಂದಿ ಆಂಗ್ಲ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಮಾತ್ರ ಎಲ್ಲರಿಗಿಂತ ಡಿಫರೆಂಟ್ ಹಾಗೂ ಸ್ಪೇಷಲ್ ಆಗಿ ರಕ್ಷಾಬಂಧನ ಆಚರಣೆ ಮಾಡಿದ್ದಾರೆ. ಯಾದಗಿರಿಯ ನವನಂದಿ ಶಾಲೆಯ ವಿದ್ಯಾರ್ಥಿನಿಯರು ತಮ್ಮ ಕೈಯಾರ ನೂಲಿನ ದಾರ, ಮಣಿಗಳು ಹಾಗೂ ಇತರೆ ವಸ್ತುಗಳನ್ನು ಬಳಸಿ ಬಣ್ಣ ಬಣ್ಣದ ರಾಖಿ ತಯಾರು ಮಾಡಿದ್ದಾರೆ. 

Raksha Bandhan 2023: ನಮ್ಮನ್ನು ರಕ್ಷಿಸುವ ಸ್ತ್ರೀಶಕ್ತಿಯ ಉತ್ಸವ, ಶ್ರೀ ಶ್ರೀ ರವಿಶಂಕರ್‌

ಅದೇ ತಾವೇ ತಯಾರು ಮಾಡಿದ ರಾಖಿಗಳನ್ನ ತಮ್ಮ ಸಹಪಾಠಿಗಳು ಹಾಗೂ ವಿದ್ಯಾರ್ಥಿಗಳಿಗೆ ಕಟ್ಟುವ ಮೂಲಕ ಸಹೋದರತೆಯ ಭಾವವನ್ನು ಸಾರುತ್ತಿದ್ದಾರೆ. ಜೊತೆಗೆ ಪುಟಾಣಿ ಹೆಣ್ಣು ಮಕ್ಕಳು, ಬಾಲಕರು ಸಹೋದರತೆಗೆ ಸಂಬಂಧಿಸಿದ ಸಾಂಗ್ ಗಳಿಗೆ ಹೆಜ್ಜೆ ಹಾಕುವ ಮೂಲಕ ವಿಶಿಷ್ಟತೆಯಿಂದ ರಕ್ಷಾಬಂಧನ ಆಚರಿಸಿದ್ದಾರೆ. ಅಂದ್ರೆ ಇವತ್ತಿನ ರಕ್ಷಾಬಂಧನ ಹಬ್ಬವು ನವನಂದಿ ಶಾಲೆಯ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳಲ್ಲಿ ಸುಮಧುರ ಕ್ಷಣವಾಗಿ ಮಾರ್ಪಟ್ಟಿತ್ತು. ಯಾಕಂದ್ರೆ ನವನಂದಿ ಶಾಲೆಯ ವಿದ್ಯಾರ್ಥಿನಿಯರು ಮಾರುಕಟ್ಟೆಗೆ ಹೋಗಿ ದುಂದುವೆಚ್ಚ ಖರ್ಚು ಮಾಡದೇ ತಮ್ಮ ಕಲಿಕೆಯ ಮೂಲಕ ಹಬ್ಬದಲ್ಲೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿರುವ ವಿಶೇಷ ಹಾಗೂ ವಿಭಿನ್ನ.
ರಕ್ಷಾಬಂಧನ ಅಂದ್ರೆ ರಕ್ಷೆಯ ಧೋತಕ ಅಂತ ಕರೆಯುತ್ತಾರೆ. ಈ ಧೋತಕನೇ ಅಣ್ಣ ಆಗಿರ್ತಾನೆ. ಪ್ರತಿ ಕ್ಷಣದಲ್ಲೂ ತಂಗಿ ಅಥವಾ ಸಹೋದರಿಯರನ್ನು ರಕ್ಷಸಿಸುವವನೇ ಅಣ್ಣ ಹಾಗೂ ಸಹೋದರರು. ಈ ರಕ್ಷಾಬಂಧನವು ತನ್ನದೆಯಾದ ಹಿನ್ನೆಲೆಯನ್ನು ಹೊಂದಿದೆ. ರಕ್ಷಾಬಂಧನದ ಮೂಲವೇ ಮಹಾಭಾರತ. ರಕ್ಷಾ ಬಂಧನ ಹಾಗೂ ಮಹಾಭಾರಕ್ಕೆ ಅವಿನಾಭಾವ ಸಂಬಂಧವಿದೆ. ಮಹಾಭಾರತದಲ್ಲಿ ಭಗವಾನ್ ಶ್ರೀಕೃಷ್ಣ ಹಾಗೂ ಪಂಚ ಪಾಂಡವರ ಪತ್ನಿ ದ್ರೌಪದಿ ಸೋದರತೆಯ ಸಂಬಂಧದ ಪ್ರತೀಕ ಎಂದು ಹೇಳಲಾಗ್ತದೆ. 

ಶಿಶುಪಾಲನ ನೂರು ತಪ್ಪುಗಳನ್ನ ಕ್ಷಮಿಸಿದ ಶ್ರೀಕೃಷ್ಣನು ಶಿಶುಪಾಲನನ್ನು ವಧಿಸಲು ತನ್ನ ಶ್ರೀಚಕ್ರವನ್ನು ಕಳುಹಿಸುತ್ತಾನೆ. ಶ್ರೀಚಕ್ರ ಕೈಯಿಂದ ಹೋಗುವ ವೇಳೆ ಶ್ರೀಕೃಷ್ಣನ ಬೆರಳಿಗೆ ಗಾಯವಾಗಿ ರಕ್ತ ಸೊರುತ್ತಿರುತ್ತದೆ. ಇದನ್ನು ಕಂಡ ಪಾಂಡವರ ಪತ್ನಿ ದ್ರೌಪದಿ ಆ ಕ್ಷಣದಲ್ಲಿಯೇ ತಾನು ತೊಟ್ಟ ಸೀರೆಯ ಸೆರಗನ್ನು ಹರಿದು ಶ್ರೀಕೃಷ್ಣ ಬೆರಳಿಗೆ ಕಟ್ಟಿ, ಹರಿದು ಹೋಗ್ತಿದ್ದ ರಕ್ತವನ್ನು ತಡೆಯುತ್ತಾಳೆ. ಶ್ರೀಕೃಷ್ಣ ಪರಮಾತ್ಮ ಇದನ್ನು ಕಂಡು ದ್ರೌಪದಿಗೆ ನಿನಗೆ ಏನು ಬೇಕು ಕೇಳು, ಕೇಳಿ ಪಡೆದಿಕೋ ಅಂತ ಹೇಳ್ತಾನೆ. ಆಗ ಒಂದು‌ ಮಾತು ಹೇಳ್ತಾಳೆ, ನನ್ನ ಇರುವವರೆಗೂ ಒಳ್ಳೆಯ ಸಹೋದರಿಯಾಗಿತ್ತೇನೆ ಅಂತ ಹೇಳ್ತಾಳೆ. ದ್ರೌಪದಿಯ ಮಾತು ಕೇಳಿದ ಶ್ರೀಕೃಷ್ಣ ನಾನು ಸಹ ಒಬ್ಬ ಒಳ್ಳೆಯ ಸಹೋದರನಾಗಿ ಇರ್ತೆನೆ. ನಿನ್ನ ಕಷ್ಟದ ಸಂದರ್ಭದಲ್ಲೂ ನಿನ್ನನ್ನೂ ರಕ್ಷಿಸುತ್ತೇನೆ ಅಂತ ಹೇಳ್ತಾನೆ. ಅದರಂತೆ ದ್ರೌಪದಿಯ ಮಾನ ಹೋಗುವ ಸಂದರ್ಭವಾದ ವಸ್ತ್ರಾಪಹರಣ ಸಮಯದಲ್ಲಿ ಸಹೋದರನಾಗಿ ನಿಂತ ಶ್ರೀಕೃಷ್ಣನು ದ್ರೌಪದಿಗೆ ಅಕ್ಷಯ ಸೀರೆಯನ್ನು ಕೊಟ್ಟು ಆಕೆಯನ್ನು ರಕ್ಷಿಸುತ್ತಾನೆ. ಅಂದಿನಿಂದ ಇಂದಿನವರೆಗೂ ಉತ್ತರ ಭಾರತದಲ್ಲಿ ವಿಶೇಷವಾಗಿ ರಕ್ಷಾಬಂಧನವನ್ನು ಹಬ್ಬವಾಗಿ ಆಚರಿಸಲಾಗುತ್ತೆ. 

Raksha Bandhan 2023: ಭದ್ರಕಾಲದ ಕರಿನೆರಳಿನಲ್ಲಿ ರಕ್ಷಾಬಂಧನ; ಯಾವಾಗ ರಾಖಿ ಕಟ್ಟಿದರೆ ಉತ್ತಮ..?

ಅದರಂತೆ ನವನಂದಿ ಶಾಲೆಯ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಸಹೋದರತೆಯ ಭಾಂದವ್ಯವನ್ನು ಸಾರುವ ಉದ್ದೇಶದಿಂದ ಶಾಲೆಯಲ್ಲಿ ಮಕ್ಕಳ ನಡುವೆ ಮತ್ತಷ್ಟು ಸಂಬಂಧಗಳನ್ನು ಗಟ್ಟಿಗೊಳಿಸುವ ಕಾರ್ಯ ಮಾಡಲಾಗ್ತಿದೆ ಅಂತಾರೆ ಶಿಕ್ಷಕಿಯರು.

ರಕ್ಷಾ ಬಂಧನ ಇವೆರಡು ಪದಗಳು ಸೇರಿದ್ರೆ ಅದಕ್ಕೆ ಅರ್ಥ ಬರ್ತದೆ. ರಕ್ಷಾ ಅಂದ್ರೆ ಹಾಗೂ ಬಂಧನ ಅಂದ್ರೆ ಸಂಬಂಧ. ಕೇವಲ ಒಡಹುಟ್ಟಿದವರು ಮಾತ್ರ ಸಹೋದರರು ಹಾಗೂ ಸಹೋದರಿಯರು ಅಲ್ಲ. ಒಬ್ಬ ಹೆಣ್ಣು ಸಂಕಷ್ಟದಲ್ಲಿದ್ದಾಗ ಆಕೆಯನ್ನು ರಕ್ಷಿಸುವವನೇ ರಕ್ಷೆಯ ಧೋತಕ. ಹಾಗಾಗಿ ಸಮಾಜದಲ್ಲಿ ಸಹೋದತೆ, ಪ್ರೀತಿ ಹಾಗೂ ಭಾವ ಮೂಡಲು ಈ ರೀತಿಯ ಹಬ್ಬಗಳ ಆಚರಣೆಗಳು ಪ್ರಮುಖವಾಗಿವೆ.

Latest Videos
Follow Us:
Download App:
  • android
  • ios