ಕೋಲ್ಕತಾ ವೈದ್ಯೆಯ ಮೇಲೆ ನಡೆದ ಬರ್ಬರ ಕೃತ್ಯದ ಹಿನ್ನೆಲೆಯಲ್ಲಿ, ಅಪರಾಧಿಗಳ ರಕ್ಷಣೆಗೆ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ, ದುರ್ಗಾ ಪೂಜೆಯಲ್ಲಿಯೂ ಅದೇ ಥೀಮ್ ಇಡಲಾಗಿದೆ. ಇದರ ವಿಡಿಯೋ ವೈರಲ್ ಆಗಿದೆ.
ಇಂದು ಮಹಾಲಯ ಅಮವಾಸ್ಯೆ. ದಸರಾ ಹಬ್ಬಕ್ಕೆ ನಾಂದಿ ಹಾಡುವ ದಿನವಿದು. ದಸರಾ ಎಂದರೆ ದುರ್ಗಾ ಪೂಜೆ. ಇದು ಹತ್ತು ದಿನಗಳ ಕಾರ್ಯಕ್ರಮವಾಗಿದೆ. ಈ ದಿನದಂದು ಹಿಂದೂಗಳು ತಮ್ಮ ಸತ್ತ ಪೂರ್ವಜರಿಗೆ ನೀರು ಮತ್ತು ಆಹಾರವನ್ನು ನೀಡುವ ಮೂಲಕ ತರ್ಪಣವನ್ನು ಮಾಡುತ್ತಾರೆ. ಈ ದಿನವು ಕೈಲಾಸದಲ್ಲಿರುವ ತನ್ನ ಪೌರಾಣಿಕ ವೈವಾಹಿಕ ಮನೆಯಿಂದ ದುರ್ಗೆಯ ಆಗಮನವನ್ನು ಸೂಚಿಸುತ್ತದೆ. ದುರ್ಗಾಪೂಜೆ ಎಂದರೆ ಮೊದಲಿಗೆ ನೆನಪಾಗುವುದೇ ಕೋಲ್ಕತಾ. ಗಣೇಶನ ಹಬ್ಬಕ್ಕೆ ಮಹಾರಾಷ್ಟ್ರ ಖ್ಯಾತಿ ಪಡೆದಂತೆ ದುರ್ಗಾಪೂಜೆಗೆ ಪಶ್ಚಿಮ ಬಂಗಾಳ ಖ್ಯಾತಿ ಪಡೆದಿದೆ. ಆದರೆ ಇದೀಗ ಕೋಲ್ಕತಾದಲ್ಲಿ ಶೋಕದ ವಾತಾವರಣ. ಅದಕ್ಕೆ ಕಾರಣ, ಹೆಚ್ಚುತ್ತಿರುವ ಅನಾಚಾರ, ಅತ್ಯಾಚಾರಗಳು. ಆದ್ದರಿಂದ ಈ ಬಾರಿಯ ದಸರಾ ಉತ್ಸವಕ್ಕೂ ಅದನ್ನೇ ಬಿಂಬಿಸಲಾಗಿದೆ!
ಕೋಲ್ಕತಾದ ಆರ್.ಕರ್ ಕಾಲೇಜಿನ ವೈದ್ಯೆಯ ಮೇಲೆ ನಡೆದ ಬರ್ಬರ ಅತ್ಯಾಚಾರ ಎಲ್ಲರಿಗೂ ತಿಳಿದದ್ದೇ. ಪಶ್ಚಿಮ ಬಂಗಾಳ ಸರ್ಕಾರ ಅಪರಾಧಿಗಳನ್ನು ರಕ್ಷಿಸುವಲ್ಲಿ ತೊಡಗಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಈ ಭಯಾನಕ ಭೀಭತ್ಸ್ಯ ಕೃತ್ಯದ ಹಿಂದೆ ಯಾರ ಕೈವಾಡ ಇದೆ ಎಂದು ತಿಳಿದಿದ್ದರೂ, ಸಂಪೂರ್ಣ ಸಾಕ್ಷ್ಯ ನಾಶಪಡಿಸುವಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಅತ್ಯಾಚಾರ-ಕೊಲೆ ನಡೆದ ಸ್ಥಳದಲ್ಲಿನ ಸಂಪೂರ್ಣ ಸಾಕ್ಷ್ಯ ನಾಶಮಾಡಲಾಗಿದೆ. ಘಟನೆಯ ಬಗ್ಗೆ ಎಫ್ಐಆರ್ ದಾಖಲು ಮಾಡುವಲ್ಲಿಯೂ ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ ಎಂಬೆಲ್ಲಾ ಆರೋಪಗಳ ನಡುವೆ, ಅಪರಾಧಿಗಳಿಗೆ ಶಿಕ್ಷೆಯಾಗುವವರೆಗೂ ಬಿಡಲ್ಲ ಎಂದು ವೈದ್ಯರು ಮುಷ್ಕರ ನಡೆಸುತ್ತಲೇ ಇದ್ದಾರೆ.
ಯಾರ ವಿರೋಧಕ್ಕೂ ಕ್ಯಾರೇ ಅನ್ನದೇ ಮಂಗಳಮುಖಿಯನ್ನು ಮದ್ವೆಯಾದ ವ್ಯಕ್ತಿ: ಲವ್ ಸ್ಟೋರಿಯೇ ಕುತೂಹಲ
ಇದೀಗ ದುರ್ಗಾ ಪೂಜೆಯನ್ನೂ ಅದೇ ಥೀಮ್ನಲ್ಲಿಯೇ ಆಚರಿಸಲಾಗುತ್ತಿದೆ. ಇದರ ವಿಡಿಯೋ ವೈರಲ್ ಆಗಿದೆ. ವೈದ್ಯೆಯ ಮೇಲೆ ನಡೆದ ಕ್ರೂರ ಅತ್ಯಾಚಾರ ಮತ್ತು ಹತ್ಯೆಯ ಘೋಷವಾಕ್ಯವನ್ನೇ ಬಳಸಲಾಗಿದೆ. ಪಾಪಿಗಳ ಘೋರ ಕೃತ್ಯಕ್ಕೆ ಬಲಿಯಾದ ವೈದ್ಯೆಯ ಪರವಾಗಿ ತಾವು ಇರುವುದಾಗಿ ತೋರಿಸಲು ಇದೀಗ ಹೊಸ ಮಾರ್ಗದೊಂದಿಗೆ ಬಂದಿದ್ದಾರೆ ಕೋಲ್ಕತಾ ವೈದ್ಯರು. ದೇವಿಯು ತನ್ನ ಅಂಗೈಯಿಂದ ಮುಖವನ್ನು ಮುಚ್ಚಿಕೊಂಡಿದ್ದಾಳೆ. ದುರ್ಗಾ ಪೂಜೆಯ ಮಂಟಪದಲ್ಲಿರುವ ಕೆಲವು ದೃಶ್ಯಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಮಹಿಳೆಯರು ಸುರಕ್ಷಿತವಾಗಿಲ್ಲ ಎಂದು ದುರ್ಗಾ ನಾಚಿಕೆಪಡುತ್ತಾಳೆ ಎಂದು ಇದು ಬಿಂಬಿಸುತ್ತಿದೆ. ಪ್ರತಿ ಹತ್ತು ಕೈಗಳಲ್ಲಿ ಆಯುಧವನ್ನು ಹಿಡಿದಿರುವ ಸಾಮಾನ್ಯ ದುರ್ಗಾ ಮೂರ್ತಿಗಳ ಬದಲಿಗೆ, ಇಲ್ಲಿ ಅವಳ ಕೈಗಳೆಲ್ಲವೂ ಸಹಾಯಕ್ಕಾಗಿ ಚಾಚಿ ಖಾಲಿಯಾಗಿವೆ. ಇದಕ್ಕೆ ಲಜ್ಜಾ (ನಾಚಿಕೆ) ಎಂದು ಹೆಸರು ಇಡಲಾಗಿದೆ. ಆದರೆ ಇದರ ಬಗ್ಗೆ ಪರ-ವಿರೋಧ ನಿಲುವು ವ್ಯಕ್ತವಾಗುತ್ತಿದೆ. ಕಣ್ಣ ಮುಂದೆಯೇ ಸತ್ಯವಿದ್ದರೂ ಪ್ರಭಾವಿಗಳು ಹೇಗೆ ತಮ್ಮ ಪ್ರಭಾವ ಬಳಸಿಕೊಳ್ಳುತ್ತಿದ್ದಾರೆ, ಪಶ್ಚಿಮ ಬಂಗಾಳದ ಸರ್ಕಾರ ಹೇಗೆ ಪಾಪಿಗಳ ರಕ್ಷಣೆ ಮಾಡುತ್ತಿದೆ, ಎಲ್ಲವೂ ಗೊತ್ತಿದ್ದರೂ ಅದನ್ನು ನೋಡಲು ಸಾಧ್ಯವಾಗದ ಸಾಮಾನ್ಯ ಹೆಣ್ಣು ಹೇಗೆ ತನ್ನ ಮುಖ ಮುಚ್ಚಿಕೊಂಡಿದ್ದಾಳೆ ಎನ್ನುವುದರ ಸಂಕೇತ ಇದಾಗಿದೆ ಎಂದು ಹಲವರು ವಿಶ್ಲೇಷಿಸುತ್ತಿದ್ದಾರೆ.
ಆದರೆ, ದೇವಿಯ ಮೂರ್ತಿಯನ್ನು ಈ ರೀತಿ ಬಳಸಿಕೊಳ್ಳುವುದು ಅಷ್ಟು ಸೂಕ್ತವಲ್ಲ ಎನ್ನುವ ಮಾತೂ ಕೇಳಿಬರುತ್ತಿದೆ. ಈ ಬಗ್ಗೆ ಮಾತನಾಡಿರುವ ಪೂಜಾ ಸಮಿತಿಯ ಕಾರ್ಯದರ್ಶಿ, ಇದು ಮಹಿಳೆಗೆ ಆಗಿರುವ ಲಜ್ಜಾ ಅಂದರೆ ಅವಮಾನದ ಪ್ರತೀಕವಾಗಿದೆ. ಪಶ್ಚಿಮ ಬಂಗಾಳದಲ್ಲಿ ಅತ್ಯಾಚಾರ, ಮಾನಭಂಗ ಮತ್ತು ಕೊಲೆ ಘಟನೆಗಳು ಹೆಚ್ಚುತ್ತಲೇ ಇದ್ದರೂ, ಸರ್ಕಾರ ಅಪರಾಧಿಗಳನ್ನು ಸಂರಕ್ಷಿಸುವಲ್ಲಿ ನಿಂತಿದೆ. ಇದರಿಂದ ದುರ್ಗಾ ದೇವಿಯೂ ಏನೂ ಮಾಡಲಾಗದೇ ನಾಚಿಕೆಪಡುತ್ತಿದ್ದಾಳೆ. ಆದ್ದರಿಂದ ಅವಳು ಕಣ್ಣು ಮುಚ್ಚಿದ್ದಾಳೆ ಎಂದಿದ್ದಾರೆ. "ನಾವು ರಾಜ್ಯ ಸರ್ಕಾರದ ಲೋಪದೋಷಗಳನ್ನು ತೋರಿಸಲು ಬಯಸುತ್ತೇವೆ, ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಹಾಗೂ ಭ್ರಷ್ಟಾಚಾರಗಳನ್ನು ನಾವು ತೋರಿಸಿದ್ದೇವೆ" ಎಂದು ಅವರು ಹೇಳಿದರು.
ಗೆಳತಿಗೆ ಮತಾಂತರ ಮಾಡಿ ಮದ್ವೆಯಾದ ಬಿಗ್‌ಬಾಸ್ ಸ್ಪರ್ಧಿ? ಮಾಸ್ಕ್ ಹಿಂದಿನ ಗುಟ್ಟು ಬಿಚ್ಚಿಟ್ಟ ಅದ್ನಾನ್ ತಂಗಿ..
