Asianet Suvarna News Asianet Suvarna News

Diwali Bhai Dhooj ಬಿದಿಗಿದೆ ಯಮರಾಜನ ವರದಾನ..

ಹಿಂದೂ ಧರ್ಮದಲ್ಲಿ ಆಚರಿಸುವ ಹಬ್ಬಗಳು ಅನೇಕ. ಆಯಾ ಪ್ರದೇಶಕ್ಕೆ ತಕ್ಕಂತೆ ಶಾಸ್ತ್ರ ಸಂಪ್ರದಾಯಗಳು ವಿಭಿನ್ನವಾಗಿರುತ್ತವೆ. ದೀಪಾವಳಿ ಹಬ್ಬವನ್ನು ಎಲ್ಲೆಡೆ ಆಚರಿಸುತ್ತಾರೆ. ದೀಪಾವಳಿಯ ಮಾರನೇ ದಿನ ಆಚರಿಸುವ ಸಹೋದರಿಯರು – ಸಹೋದರನಿಗಾಗಿ ಆಚರಿಸುವ ಭಾಯ್ ದೂಜ್ ಅಥವಾ ಬಿದಿಗೆ ಹಬ್ಬದ ವಿಶೇಷತೆಯನ್ನು ತಿಳಿಯೋಣ...

Celebrating Bhai dhooj festival at deepavali has yamarajas blesings
Author
Bangalore, First Published Nov 8, 2021, 3:24 PM IST

ದೀಪಾವಳಿ (Deepavali) ಸಡಗರದ ಹಬ್ಬ. ಹಿಂದೂ ಧರ್ಮದಲ್ಲಿ ಆಚರಿಸುವ (Celebration ) ಅನೇಕ ಹಬ್ಬಗಳಲ್ಲಿ (Festival) ದೀಪಾವಳಿಯು ದೊಡ್ಡ ಹಬ್ಬವಾಗಿದೆ. ನರಕಾಸುರನನ್ನು (Naraka sura) ವಧಿಸಿದ ದಿನವನ್ನೇ ದೀಪಾವಳಿಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ಗೋವುಗಳನ್ನು (Cow) ಪೂಜಿಸುವ ಮೂಲಕ ಗೋವರ್ಧನ ಪೂಜೆಯನ್ನು ಮಾಡಲಾಗುತ್ತದೆ. ದೀಪಾವಳಿಯ ಮಾರನೇ ದಿನವೇ, ಅಂದರೆ ಪಾಡ್ಯದಂದು ದೀಪಾವಳಿಯನ್ನು ಆಚರಿಸಿದರೆ ಬಿದಿಗೆಯಂದು ಯಮ ದ್ವಿತೀಯ  ಅಥವಾ ಭಾಯಿ ದೂಜ್ (Bhai dhooj) ಆಚರಿಸಲಾಗುತ್ತದೆ. 

ಈ ಆಚರಣೆಯು ಉತ್ತರ ಭಾರತದ ಕಡೆ ಹೆಚ್ಚು ಪ್ರಚಲಿತದಲ್ಲಿದ್ದು, ಕರ್ನಾಟಕದಲ್ಲಿ (Karnataka) ಬಿದಿಗೆ (Bidige habba) ಹಬ್ಬ ಅಥವಾ ಯಮ ದ್ವಿತೀಯ (Yama dwitiya) ಎಂಬ ಹೆಸರಿನಲ್ಲಿ ಇದನ್ನು ಆಚರಿಸುವ ರೂಢಿಯನ್ನು ಇಟ್ಟುಕೊಂಡಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಆಚರಿಸುವ ಭ್ರಾತೃ ವಿಧಿ, ಯಮ ದ್ವಿತೀಯ, ಬಿದಿಗೆ ಹಬ್ಬ  ಅಥವಾ ಭಾಯಿ ದೂಜ್ ಎಂಬೆಲ್ಲಾ ಹೆಸರಿನಿಂದ ಕರೆಯುವ ಈ ಹಬ್ಬವು ಸಹೋದರಿಯರು (Sister)  ಸಹೋದರನಿಗಾಗಿ (Brother) ಆಚರಿಸುತ್ತಾರೆ. ಈ ಹಬ್ಬವನ್ನು ಕಾರ್ತಿಕ  ಮಾಸದ ಶುಕ್ಲಪಕ್ಷದ  ಪಕ್ಷದ ಮೊದಲ ದಿನದಂದು ಆಚರಿಸುತ್ತಾರೆ. ಸಹೋದರಿಯರು ಈ ದಿನ ಸಹೋದರನ ದೀರ್ಘಾಯುಷ್ಯಕ್ಕಾಗಿ (Long life) ಮಾಡುವ ಹಬ್ಬ ಇದಾಗಿದೆ. ಈ ದಿನ ಸಹೋದರಿ ಸಹೋದರನ  ಹಣೆಗೆ (Forehead) ತಿಲಕವಿಟ್ಟು(Tika) ದೀರ್ಘಾಯುಷ್ಯ ಸಿಗಲೆಂದು ಪ್ರಾರ್ಥಿಸುತ್ತಾರೆ (Prayer). ಸಹೋದರ ಸಹೋದರಿಗೆ ಉಡುಗೊರೆಗಳನ್ನು (Gift) ನೀಡುತ್ತಾನೆ. 

ತುಳು ಜನಪದದ ವಿಶಿಷ್ಟ ದೀಪಾವಳಿ

ಪುರಾಣದಲ್ಲಿದೆ ಬಿದಿಗೆ ಹಬ್ಬದ ಮಹತ್ವ
ಪುರಾಣಗಳ (Purana) ಪ್ರಕಾರ ಈ ದಿನ ಯಮರಾಜನು (Yama) ತನ್ನ ತಂಗಿ ಯಮುನೆಯು (Yamune) ಬಹಳಷ್ಟು ಬಾರಿ ಕರೆದರೂ ಆಕೆಯ ಮನೆಗೆ ಹೋಗಿರುವುದಿಲ್ಲ. ಬಿದಿಗೆಯ ದಿನ  ತಂಗಿ ಯಮುನೆಯ ಮನೆಗೆ  ತೆರಳುತ್ತಾನೆ. ಆ ದಿನ ಆಕೆಯು ಸಹೋದರನಿಗೆ ತಿಲಕವಿಟ್ಟು, ಆತನಿಗೆ ಒಳ್ಳೆಯದಾಗಲಿ ದೀರ್ಘಾಯಸ್ಸು ಸಿಗಲಿ ಎಂದು ಪ್ರಾರ್ಥಿಸುತ್ತಾಳೆ.  ಅದಕ್ಕೆ ಸಹೋದರ ಯಮ ತಂಗಿಯ ಬಳಿ ವರದಾನವನ್ನು (Boon) ಕೇಳಿಕೊಳ್ಳಲು ಹೇಳುತ್ತಾನೆ. ಆಗ ಆಕೆಯು ಪ್ರತೀ ವರ್ಷ ಇದೇ ದಿನದಂದು ತಮ್ಮ ಮನೆಗೆ (House) ಬರಬೇಕು ಅಷ್ಟೇ ಅಲ್ಲದೆ ಈ ದಿನ ಯಾವ ಸಹೋದರಿ ತನ್ನ ಸಹೋದರನಿಗೆ ತಿಲಕವನ್ನು ಇಡುತ್ತಾಳೋ ಆತನ ಸಹೋದರ ಯಮರಾಜನ ಭಯವಿರದಂತೆ (Scare) ಕಾಪಾಡ(Rescue) ಬೇಕು. ಇದನ್ನೇ ವರದಾನವಾಗಿ ನೀಡುವಂತೆ ಕೇಳಿಕೊಳ್ಳುತ್ತಾಳೆ. ಇದನ್ನು ಕೇಳಿದ ಯಮ ಸಂತಸದಿಂದ (Happy) ಹರಸುತ್ತಾನೆ ಮತ್ತು ಆಗಲಿ ಎಂದು ಆಶೀರ್ವದಿಸುತ್ತಾನೆ (Bless). ಹಾಗಾಗಿ ಅಂದಿನಿಂದ ಭ್ರಾತೃ ವಿಧಿ ಅಥವಾ ಭಾಯಿ ಧುಜ್ ಆಚರಣೆ (Ritual)  ಆರಂಭವಾಯಿತು. ಉತ್ತರ ಭಾರತದ ಕಡೆ ಹೆಚ್ಚು ಪ್ರಸಿದ್ದಿಯಲ್ಲಿರುವ (Famous) ಈ ಆಚರಣೆಗೆ ಭಾಯಿ ದೂಜ್ ಎನ್ನುತ್ತಾರೆ. ಕರ್ನಾಟಕದಲ್ಲಿ (Karnataka) ಭ್ರಾತೃ  ವಿಧಿ, ಬಿದಿಗೆ ಹಬ್ಬ ಅಥವಾ ಯಮ ದ್ವಿತೀಯವೆಂದು ಕರೆಯುತ್ತಾರೆ.  

ಈ ದಿನ ಸಹೋದರ ಸಹೋದರಿಯರು ಯಮುನಾ (Yamuna) ನದಿಯಲ್ಲಿ (River) ಸ್ನಾನ (Bath) ಮಾಡಿದರೆ ಅತ್ಯಂತ ಶುಭವೆಂದು (Auspicious) ಹೇಳಲಾಗುತ್ತದೆ. ಬಿದಿಗೆಯಂದು ಸಹೋದರಿಯು ಸಹೋದರನ ಆಯಸ್ಸು (Long live) ವೃದ್ಧಿಸಲೆಂದು  ಯಮನಿಗೆ ಪೂಜೆ ಸಲ್ಲಿಸಿ, ಮನೆಯ ಹೊರಗಡೆ ದೀಪ (Light) ಬೆಳಗಿಸುವ ರೂಢಿ ಇದೆ.

ಇದನ್ನು ಓದಿ: ದೀಪಾವಳಿಯಲ್ಲಿ ಜೇಡಿಮಣ್ಣಿನ ಈ ವಸ್ತುಗಳನ್ನು ಮನೆಗೆ ತನ್ನಿ, ಅದೃಷ್ಟವಂತರಾಗಿ...!

ಪುರಾಣದ ಚಿರಂಜೀವಿಗಳನ್ನು ಸ್ಮರಿಸುವ ಚಿರಂಜೀವಿ ಮಂತ್ರ -

ಅಶ್ವತ್ಥಾಮೋ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣಃ | ಕೃಪಃ ಪರಶುರಾಮಶ್ಚ  ಸಪ್ತೈತೇ ಚಿರಜೀವಿನಃ ||

ಇದು ಚಿರಂಜೀವಿ ಮಂತ್ರವಾಗಿದ್ದು, ಈ ಮಂತ್ರವನ್ನು ಜಪಿಸಿ ಯಮನಿಗೆ ಪೂಜೆ ಸಲ್ಲಿಸಬೇಕೆಂದು ಹೇಳಲಾಗುತ್ತದೆ.
ಸಹೋದರಿಯರು ಈ ದಿನ ಚಿರಂಜೀವಿ ಮಂತ್ರವನ್ನು (Chant) ಹೇಳಿ ಯಮರಾಜನನ್ನು ಪೂಜಿಸಿ ಸಹೋದರನಿಗೆ ತಿಲಕವನ್ನು ಇಡುವ ಸಂಪ್ರದಾಯವಿದೆ (Ritual).

Follow Us:
Download App:
  • android
  • ios