ಮುಂಬೈ (ಏ. 14)  ಕೊರೋನಾ ಸಂಕಷ್ಟದ ಸಂದರ್ಭ ಕಾರ್ಮಿಕರ ನೆರವಿಗೆ ನಿಂತಿದ್ದ  ಬಾಲಿವುಡ್ ನಟ ಸೋನು ಸೂದ್  ಈ ಬಾರಿ ವಿದ್ಯಾರ್ಥಿಗಳಿಗೆ ಅಭಿನಂದನೆ ಹೇಳಿದ್ದಾರೆ. ಅದಕ್ಕೆ ಕಾರಣವೂ ಇದೆ.

ಕೊರೋನಾ ಸಂದರ್ಭದಲ್ಲಿ ಪರೀಕ್ಷೆ ಬೇಡ ಎಂದಿರುವ ಸರ್ಕಾರ ಸಿಬಿಎಸ್‌ಇಯಿಂದ ಹಿಂದೆ ಸರಿದಿದೆ. ಕ್ಲಾಸ್ ಟೆನ್ ಪರೀಕ್ಷೆ ರದ್ದು ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳನ್ನು ಕೊರೋನಾ ಹಾಟ್ ಸ್ಪಾಟ್ ಮಾಡಬೇಡಿ ಎಂದು ಸೋನು ಟ್ವೀಟ್ ಮಾಡಿದ್ದರು.

ವೆಲ್ ಡನ್ ಮೋದಿಜಿ ಎಂದ ಕಾಂಗ್ರೆಸ್

ಪರೀಕ್ಷೆಯಲ್ಲಿ ಪಾಸ್ ಅಥವಾ ಫೇಲ್ ಮುಖ್ಯವಲ್ಲ.. ಎಲ್ಲದಕ್ಕಿಂತ ಮುಖ್ಯ ನಮ್ಮ ಜೀವನ ಎಂದು  ಹೇಳಿದ್ದರು.  ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಎಲ್ಲರ ಬೆಂಬಲ ಬೇಕಿದೆ ಎಂದು ಕೇಳಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೋನಾ ಮಿತಿ ಮೀರಿದ್ದು ಸರ್ಕಾರ ಕೈಚೆಲ್ಲಿ ಕುಳಿತುಕೊಳ್ಳಬೇಕಾದ ಸ್ಥಿತಿ ನಿರ್ಮಾಣ ಆಗಿದೆ. 

ಮುಂಬೈನಲ್ಲಿದ್ದ ಕಾರ್ಮಿಕರು ಲಾಕ್ ಡೌನ್ ಸಂದರ್ಭ ಊರಿಗೆ ತೆರಳಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾಗ ಸೋನು ಸೂದ್ ನೆರವಿಗೆ ನಿಂತಿದ್ದರು. ಬಸ್ ಮಾಡಿಸಿ,  ರೈಲ್ವೆ ಟಿಕೆಟ್ ಮಾಡಿಸಿ ಕಳಿಸಿಕೊಟ್ಟಿದ್ದರು.