ಸುದ್ದಿಯಾಗುವಂಥ ಉಡುಗೆ ಕರೀನಾ ಮತ್ತೆ ತೊಟ್ಟಿದ್ಯಾಕೆ?

Kareena Kapoor Khan is getting sexier by the day
Highlights

ಕರೀನಾ ಕಪೂರ್ ಖಾನ್ ಬಟ್ಟೆ ಬಗ್ಗೆ ಸಾಮಾಜಿಕ ತಾಣದಲ್ಲಿ ಚರ್ಚೆಗಳು ನಡೆಯುತ್ತಲೆ ಇರುತ್ತವೆ ಸ್ಟುಡಿಯೋ ವೊಂದರ ಬಳಿ ಕರೀನಾ ಕಾಣಿಸಿಕೊಂಡ ಧಿರಿಸು ಇದೀಗ ಸೊಶಿಯಲ್ ಮೀಡಿಯಾದಲ್ಲಿ ಮಾತನಾಡುತ್ತಿದೆ. 

ವೀರ್ ದಿ ವೆಡ್ಡಿಂಗ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಚಿತ್ರದಲ್ಲಿ  ಕಾಣಿಸಿಕೊಂಡಿದ್ದ ಕರೀನಾ ಕಪೂರ್  ಖಾನ್ ಮೆಚ್ಚುಗೆಗೆ ಪಾತ್ರವಾಗಿದ್ದಲ್ಲದೇ ಬೋಲ್ಡ್ ಅಭಿನಯಕ್ಕೆ ಫುಲ್ ಮಾರ್ಕ್ಸ್ ಪಡೆದುಕೊಂಡಿದ್ದರು. ಇದಾದ ಮೆಲೆ ಮೇಲೆ ಗಂಡ ಸೈಫ್ ಅಲಿ ಖಾನ್ ಜತೆ ಒಂದು ತಿಂಗಳು ಲಂಡನ್ ಗೆ ರಜಾ ಮಜಾ ಸವಿಯಲು ತೆರಳಿದ್ದರು. 

ಗಂಡ ಮತ್ತು ಮಗನ ಜತೆ ಲಂಡನ್ ಪ್ರವಾಸ ಮುಗಿಸಿ ಬಂದಿರುವ ಕರೀನಾ ಮತ್ತಷ್ಟು ಹಾಟ್ ಆಗಿದ್ದಾರೆ.  ಮೆಹಬೂಬ ಸ್ಟುಡಿಯೋ ಬಳಿ ಕ್ಲಿಕ್ಕಿಸಿದ ಫೋಟೋ ಕರೀನಾ ಸೌಂದರ್ಯ ವರ್ಣಿಸುತ್ತಿದೆ. ಅಕ್ಷಯ್ ಕುಮಾರ್ ನಾಯಕರಾಗಿ ನಟಿಸುತ್ತಿರುವ ಚಿತ್ರ ಮತ್ತು ಕರನ್ ಜೋಹರ್ ಅವರ ಒಂದು ಚಿತ್ರವೂ ಕರೀನಾ ಬಳಿ ಇದೆ. 

ಕರೀನಾ ಕಪೂರ್ ಶಾರ್ಟ್ ಬಟ್ಟೆ ಧರಿಸಿ ಪಾರ್ಟಿಗೆ ಬಂದಿದ್ದು ಸೋಷಲ್ ಮಿಡಿಯಾಗಳಲ್ಲಿ ಸಾಕಷ್ಟು ಚರ್ಚೆಗೆ ಒಳಪಟ್ಟಿತ್ತು. ಕೆಲವರು ಕರೀನ ಈಗ ಒಂದು ಮಗುವಿನ ತಾಯಿ. ಹಾಗಾಗಿ ಈ ರೀತಿಯ ಬಟ್ಟೆ ತೊಡುವುದು ಎಷ್ಟು ಸೂಕ್ತ ಎಂದು ಪ್ರಶ್ನೆ ಮಾಡಿದ್ದರು.  ‘ತಾಯಿಯಾದ ತಕ್ಷಣಕ್ಕೆ ಇದೇ ರೀತಿಯ ಬಟ್ಟೆ ತೊಡಬೇಕು ಎಂದೇನು ಇಲ್ಲ. ಅದು ನನಗೆ ಇಷ್ಟವೂ ಇಲ್ಲ. ನಮಗೆ ಕಂಫರ್ಟ್ ಅನ್ನಿಸುವ ಬಟ್ಟೆಯನ್ನು ನಾವು ತೊಡಬೇಕು. ಇನ್ನೊಬ್ಬರ ಇಷ್ಟ ಕಷ್ಟ ನಮಗ್ಯಾಕೆ. ನನ್ನ ತಾಯಿ ಈಗಲೂ ಜೀನ್ಸ್ ತೊಡುತ್ತಾರೆ. ಅದು ಅವರ ಇಷ್ಟ. ಮಹಿಳೆಯರಿಗೆ ಬಟ್ಟೆಯ ಬಗ್ಗೆ ಹೆಚ್ಚು ಮೋಹ ಇರುತ್ತೆ. ಮದುವೆಯಾಯಿತು, ಮಕ್ಕಳಾಯಿತು ಎಂದ ಮಾತ್ರಕ್ಕೆ ಆಸೆಗಳೆಲ್ಲವನ್ನೂ ಬಲಿಕೊಡಬೇಕಾಗಿಲ್ಲ’ ಎಂದು ತಿರುಗೇಟು ನೀಡಿದ್ದು ಸುದ್ದಿಯಾಗಿತ್ತು.

 

 

loader