ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿದ್ದ ಎಆರ್ ರೆಹಮಾನ್, ತಮ್ಮ ಪತ್ನಿಗೆ ಹಿಂದಿಯಲ್ಲಲ್ಲ ತಮಿಳಿನಲ್ಲಿ ಮಾತನಾಡು ಎಂದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಚೆನ್ನೈ (ಏ.27): ಹಿರಿಯ ಸಂಗೀತ ಸಂಯೋಜಕ ಮತ್ತು ಗಾಯಕ ಎಆರ್ ರೆಹಮಾನ್ ಇತ್ತೀಚೆಗೆ ತಮ್ಮ ಪತ್ನಿಯೊಂದಿಗೆ ಪ್ರಶಸ್ತಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ಪ್ರಶಸ್ತಿ ಕಾರ್ಯಕ್ರಮದಲ್ಲಿ ರೆಹಮಾನ್ ಮತ್ತು ಅವರ ಪತ್ನಿ ಸಾಯಿರಾ ಅವರನ್ನೂ ವೇದಿಕೆಯ ಮೇಲೆ ಆಹ್ವಾನಿಸಲಾಗಿತ್ತು. ಈ ವೇಳೆ ಕಾರ್ಯಕ್ರಮದ ನಿರೂಪಕ ಸೈರಾಗೆ ರೆಹಮಾನ್ ಅವರ ಗಾಯನದ ಬಗ್ಗೆ ಏನಾದರೂ ಮಾತನಾಡುವಂತೆ ಹೇಳಿದರು. ಈ ಹಂತದಲ್ಲಿ ಮಾಡು ಆಡಲು ಆರಂಭಿಸಿದ ಸೈರಾ ಹಿಂದಿಯಲ್ಲಿ ಮಾತನಾಡಲು ಆರಂಭ ಮಾಡಿದ್ದರು. ಈ ಹಂತದಲ್ಲಿ ಸೈರಾ ಮಾತಿಗೆ ಅಡ್ಡಿಪಡಿಸಿದ ಎಎಆರ್ ರೆಹಮಾನ್, ಇಲ್ಲಿ ಹಿಂದಿಯಲ್ಲಲ್ಲ, ತಮಿಳಿನಲ್ಲಿ ಮಾತನಾಡು ಎಂದು ಹೇಳಿದರು. ಈ ವೇಳೆ ಮಾತನಾಡಿದ ಸೈರಾ, ನನಗೆ ತಮಿಳು ಅಷ್ಟಾಗಿ ಬರೋದಿಲ್ಲ. ನಾನೇನಾದರೂ ಮಾತನಾಡುವ ಸಮಯದಲ್ಲಿ ತಪ್ಪಾದರೆ ಕ್ಷಮೆಯಾಚಿಸುತ್ತೇನೆ ಎಂದು ಪ್ರೇಕ್ಷಕರಿಗೆ ತಿಳಿಸಿದ್ದಾಋಏ. ಈ ವಿಡಿಯೋವೀಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ.
ನನಗೆ ತಮಿಳು ಬರೋದಿಲ್ಲ ಎಂದ ಸೈರಾ: ಪ್ರಶಸ್ತಿ ವೇದಿಕೆಯಲ್ಲಿ ತಮಿಳಿನಲ್ಲಿ ಮಾತನಾಡುವ ಎಂದು ರೆಹಮಾನ್, ಸೈರಾಗೆ ಹೇಳಿದ ಬೆನ್ನಲ್ಲಿಯೇ ಅವರು ಕಣ್ಣು ಮುಚ್ಚಿಕೊಂಡರು. 'ಓಹ್ ದೇವರೆ, ಪ್ಲೀಸ್ ಕ್ಷಮಿಸಿ. ನನಗೆ ತಮಿಳು ಅಷ್ಟಾಗಿ ಮಾತನಾಡಲು ಬರೋದಿಲ್ಲ. ನಾನು ಇವರ (ರೆಹಮಾನ್) ದನಿಯ ಮೇಲೆ ಪ್ರೀತಿಗೆ ಬಿದ್ದಿದ್ದೆ. ಅದಕ್ಕೆ ಬಹಳ ಖುಷಿ ಇದೆ. ಇವರ ದನಿಯೇ ನನ್ನ ಫೇವರಿಟ್ ಎಂದು ಹೇಳಿದರು. ಸೈರಾ ಮಾತನಾಡುವ ಮುನ್ನ ತಮಿಳಿನಲ್ಲಿ ಮಾತನಾಡಿದ ರೆಹಮಾನ್, ನಾನು ಎಂದೂ ನನ್ನ ಸಂದರ್ಶನವನ್ನು ಮತ್ತೊಮ್ಮೆ ನೋಡೋದಿಲ್ಲ. ಆದರೆ, ಸೈರಾ ಪ್ರತಿ ಬಾರಿಯೂ ಇದನ್ನು ವೀಕ್ಷಿಸುತ್ತಾಳೆ. ಬಹುಶಃ ಆಕೆ ನನ್ನ ದನಿಯನ್ನ ಬಹಳ ಪ್ರೀತಿಸುತ್ತಾಳೆ ಎಂದು ಕಾಣುತ್ತದೆ ಎಂದು ಹೇಳಿದ್ದಾರೆ. ಎಆರ್ ರೆಹಮಾನ್ ಹಾಗೂ ಸೈರಾ ಬಾನು 1995ರಲ್ಲಿ ವಿವಾಹವಾಗಿದ್ದರು. ಇವರಿಬ್ಬರಿಗೆ ಖತೀಜಾ, ರಹೀಮಾ ಮತ್ತು ಅಮೀನ್ ಹೆಸರಿನ ಮೂವರು ಮಕ್ಕಳಿದ್ದಾರೆ.
ಎಆರ್‌ರೆಹಮಾನ್ ಯಾವತ್ತಿಗೂ ತಮಿಳು ಕುರಿತಾಗಿ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. 2021 ರಲ್ಲಿ ತಮ್ಮ 99 ಸಾಂಗ್ಸ್ ಚಿತ್ರದ ಟ್ರೈಲರ್ ಮತ್ತು ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕಾಗಿ ಚೆನ್ನೈಗೆ ಹೋಗಿದ್ದರು. ಅವರೊಂದಿಗೆ ಚಿತ್ರದ ನಟ ಇಹಾನ್ ಭಟ್ ಕೂಡ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ, ಆಂಕರ್ ಇಬ್ಬರನ್ನೂ ಹಿಂದಿಯಲ್ಲಿ ಸ್ವಾಗತಿಸಿದಾಗ, ರೆಹಮಾನ್ ಆಂಕರ್‌ನತ್ತ ನೋಡಿ 'ಹಿಂದಿ!' ಎಂದು ಹೇಳುತ್ತಲೇ ವೇದಿಕೆಯಿಂದ ಕೆಳಗಿಳಿದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದಾಗ, ರೆಹಮಾನ್ ಸಾಕಷ್ಟು ಟ್ರೋಲ್ ಎದುರಿಸಬೇಕಾಯಿತು. ಬಳಿಕ ಸ್ಪಷ್ಟನೆ ನೀಡಿದ ಅವರು, ಆ ವೇದಿಕೆಯಲ್ಲಿ ಅಂದು ತಮಿಳು ಹಾಡು ಅನಾವರಣವಾಗುತ್ತಿತ್ತು ಎಂಧು ಸ್ಪಷ್ಟನೆ ನೀಡಿದ್ದರು. ಅಲ್ಲಿದ್ದ ಪ್ರೇಕ್ಷಕರೂ ತಮಿಳಿನವರೇ ಆಗಿದ್ದರಿಂದ ಆ್ಯಂಕರ್‌ಗೆ ಹಿಂದಿಯ ಬದಲು ತಮಿಳಿನಲ್ಲಿ ಮಾತನಾಡುವಂತೆ ಕೇಳಿಕೊಂಡೆ ಎಂದಿದ್ದರು.
ಆಸ್ಕರ್ ಗೆದ್ದ ಬಳಿಕ 'ಜೈ ಹೋ..' ಗಾಯಕರನ್ನು ಮರೆತಿದ್ದೆ; AR ರೆಹಮಾನ್
ಅಮಿತ್ ಶಾಗೂ ತಿರುಗೇಟು ನೀಡಿದ್ದ ರೆಹಮಾನ್: ಕಳೆದ ವರ್ಷ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ರೆಹಮಾನ್ ಉತ್ತರ ನೀಡಿದ್ದರು. ವಾಸ್ತವವಾಗಿ, ಅಮಿತ್ ಶಾ ತಮ್ಮ ಭಾಷಣಗಳಲ್ಲಿ ಒಂದು ಭಾಷೆ-ಒಂದು ರಾಷ್ಟ್ರದ ಬಗ್ಗೆ ಪದೇ ಪದೇ ಮಾತನಾಡುತ್ತಾರೆ. ದಕ್ಷಿಣಕ್ಕೆ ಸಂಬಂಧಿಸಿದ ಚಲನಚಿತ್ರ ತಾರೆಯರು ಹಲವಾರು ಸಂದರ್ಭಗಳಲ್ಲಿ ಅವರನ್ನು ಟೀಕಿಸಿದ್ದಾರೆ. ಕಳೆದ ವರ್ಷ, ಅಮಿತ್ ಶಾ ಹೇಳಿಕೆಗೆ ಉತ್ತರ ನೀಡುವಾಗ ರೆಹಮಾನ್ ಇಂಗ್ಲಿಷ್ ಭಾಷೆಯ ಮಹತ್ವದ ಬಗ್ಗೆ ಮಾತನಾಡಿದ್ದರು.
ತೆರಿಗೆ ವಂಚನೆ ಕೇಸ್: ಎ.ಆರ್. ರೆಹಮಾನ್‌ಗೆ- ಹೈಕೋರ್ಟ್ನಿಂದ ಬಿಗ್ ಶಾಕ್!
ಇಂಗ್ಲಿಷ್ ಜಾಗತಿಕ ಭಾಷೆಯಾಗಿದೆ ಮತ್ತು ಇದು ಅಡೆತಡೆಗಳನ್ನು ಮುರಿಯಲು ಸಹಾಯ ಮಾಡುತ್ತದೆ ಎಂದು ರೆಹಮಾನ್ ಹೇಳಿದರು. ತಮಿಳುನಾಡಿನಲ್ಲಿರುವಾಗ ತಮಿಳು ಒಂದು ಭಾಷೆಯಲ್ಲ, ಆದರೆ ಅವರ ಗುರುತು ಮತ್ತು ಅಸ್ತಿತ್ವ ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.
