ಗುರುದಾಸ್‌ಪುರ[ಮೇ.18]: ಸ್ವಿಜರ್‌ಲೆಂಡ್‌ನ ಸ್ವಿಸ್‌ ಬ್ಯಾಂಕ್‌ನಲ್ಲಿ ಹಲವು ಭಾರತೀಯ ಉದ್ಯಮಿಗಳು ಹಾಗೂ ರಾಜಕೀಯ ನಾಯಕರು ಕಪ್ಪು ಹಣ ಇಟ್ಟಿದ್ದಾರೆ ಎಂಬ ಆರೋಪಗಳಿರುವಾಗ, ಸ್ವಿಸ್‌ ಬ್ಯಾಂಕ್‌ನಲ್ಲಿ ತಮ್ಮ ಪತ್ನಿ ಹೆಸರಿನಲ್ಲಿ 7 ಕೋಟಿ ರು. ಠೇವಣಿ ಹೊಂದಿದ್ದೇನೆ ಎಂದು ಇಲ್ಲಿನ ಕಾಂಗ್ರೆಸ್‌ ಅಭ್ಯರ್ಥಿ ಸುನೀಲ್‌ ಕುಮಾರ್‌ ಜಾಖಡ್‌ ಅವರು ಘೋಷಣೆ ಮಾಡಿಕೊಂಡಿದ್ದಾರೆ.

ವಿವಿಧ ಬ್ಯಾಂಕ್‌ಗಳಲ್ಲಿ ಒಟ್ಟಾರೆ 1.23 ಕೋಟಿ ರು. ನಗದು ಹೊಂದಿದ್ದೇನೆ. ಅಲ್ಲದೆ, ಸ್ವಿಜರ್‌ಲೆಂಡ್‌ನ ಜೂರಿಚ್‌ನಲ್ಲಿರುವ ಜುರ್ಖರ್‌ ಕಾಂಟೊನಲ್‌ ಬ್ಯಾಂಕ್‌ನಲ್ಲಿ ಪತ್ನಿಯಾದ ಸಿಲ್ವಿಯಾ ಜಾಖಡ್‌ ಹೆಸರಲ್ಲಿ 7.37 ಕೋಟಿ ರು. ಠೇವಣಿ ಇಟ್ಟಿದ್ದೇನೆ ಎಂದು ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಸುನೀಲ್‌ ಜಾಖಡ್‌ ಅವರು ಮಧ್ಯಪ್ರದೇಶದ ಮಾಜಿ ರಾಜ್ಯಪಾಲ ಬಲರಾಮ್‌ ಜಾಖರ್‌ ಅವರ ಪುತ್ರ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.