Asianet Suvarna News Asianet Suvarna News

ಕೊರೋನಾ ಸಂದರ್ಭದಲ್ಲಿ ಶಾಲಾ, ಕಾಲೇಜು ತೆರೆಯಬಾರದು: ವಾಟಾಳ್ ನಾಗರಾಜ್

ಸರ್ಕಾರ ಶಿಕ್ಷಕರ ಬೇಡಿಕೆಗಳನ್ನ ನಿರ್ಲಕ್ಷಿಸುತ್ತ ಬಂದಿದೆ| ನನ್ನ ಕೊನೆಯ ರಕ್ತದ ಹನಿ ಇರುವವರೆಗೂ ಶಿಕ್ಷಕರ ಪರವಾಗಿ ಹೋರಾಟ ಮಾಡುತ್ತೇನೆ| ಶಿಕ್ಷಕರು, ಮಕ್ಕಳು, ಕೊರೋನಾದಿಂದ ಸಾವನ್ನಪ್ಪಿದರೆ ರಾಜ್ಯ ಸರ್ಕಾರ ಒಂದು ಕೋಟಿ ರೂ. ಕೊಡಬೇಕು:ವಾಟಾಳ್‌ ನಾಗರಾಜ್‌| 

Vatal Nagaraj Slams On State Government grg
Author
Bengaluru, First Published Oct 25, 2020, 1:44 PM IST

ಬೀದರ್(ಅ.25): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಭೀಕರ ಪ್ರವಾಹದಿಂದ ಉತ್ತರ ಕರ್ನಾಟಕ ನಲುಗಿ ಹೋಗಿದೆ. ಹೀಗಾಗಿ ನೆರೆ ಸಂತ್ರಸ್ತರ ಸಮಸ್ಯೆಗಳನ್ನ ಆಲಿಸಲು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಬರಬೇಕು. ನೆರೆಪೀಡಿತ ಪ್ರದೇಶಕ್ಕೆ ಭೇಟಿ ಕೊಡಬೇಕು ಎಂದು ಈಶಾನ್ಯ ಪದವಿಧರ ಕ್ಷೇತ್ರದ ಅಭ್ಯರ್ಥಿಯಾಗಿ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ. 

ಇಂದು(ಭಾನುವಾರ) ನಗರದ ಅಂಬೇಡ್ಕರ್ ವೃತ್ತದಲ್ಲಿ ಶಿಕ್ಷಕರ ಹಲವು ಬೇಡಿಕೆಗಳಿಗೆ ಬೆಂಬಲಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಸರ್ಕಾರ ಶಿಕ್ಷಕರ ಬೇಡಿಕೆಗಳನ್ನ ನಿರ್ಲಕ್ಷಿಸುತ್ತ ಬಂದಿದೆ. ನನ್ನ ಕೊನೆಯ ರಕ್ತದ ಹನಿ ಇರುವವರೆಗೂ ಶಿಕ್ಷಕರ ಪರವಾಗಿ ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ. 

ಎಲ್ಲ ವಿದ್ಯಾರ್ಥಿಗಳನ್ನ ಪಾಸ್‌ ಮಾಡಿದ್ರೆ ಪ್ರಳಯ ಆಗಲ್ಲ: ಸಿದ್ದರಾಮಯ್ಯ

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಾಟಾಳ್ ನಾಗರಾಜ್ ಅವರು, ಮಹಾಮಾರಿ ಕೊರೋನಾ ಸಂದರ್ಭದಲ್ಲಿ ಶಾಲಾ, ಕಾಲೇಜುಗಳನ್ನ ತೆರೆಯಬಾರದು. ಶಿಕ್ಷಕರು, ಮಕ್ಕಳು, ಕೊರೋನಾದಿಂದ ಸಾವನ್ನಪ್ಪಿದರೆ ರಾಜ್ಯ ಸರ್ಕಾರ ಒಂದು ಕೋಟಿ ರೂ. ಕೊಡಬೇಕು ಎಂದು ಆಗ್ರಹಿಸಿದ್ದಾರೆ. 
 

Follow Us:
Download App:
  • android
  • ios