ಕಾಲೇಜಿಗೆ ಕಾಲಿಡುವ ಮುನ್ನ

Tips For PU Fresher Students
Highlights

ಇದೀಗ ಮೇ ತಿಂಗಳು. ಹತ್ತನೇ ತರಗತಿಯನ್ನು ಮುಗಿಸಿ, ಶಾಲಾ-ಜೀವನಕ್ಕೆ ತಿಲಾಂಜಲಿ ಹಾಡಿ, ಕಾಲೇಜಿಗೆ ಹೋಗಲು ಶುರು ಮಾಡಿರುವವರು ಕೆಲವು ಹಾಗೂ ಕಾಲೇಜು ಶುರುವಾಗುವುದನ್ನು ಕಾಯುತ್ತಿರುವವರು ಕೆಲವು, ನಾನು ಆ ಪೈಕಿಯಲ್ಲಿ ಒಬ್ಬ. ಇತ್ತೀಚಿಗೆ ಸಿ.ಬಿ.ಎಸ್.ಇ ಫಲಿತಾಂಶ ಕೂಡ ಪ್ರಕಟಗೊಂಡಿದೆ. ಇಷ್ಟು ದಿವಸ ರಿಸಲ್ಟ್ ಬಗ್ಗೆ ತಲೆಕೆಡಿಸಿಕೊಂಡಿದ್ದ ವಿದ್ಯಾರ್ಥಿಗಳು ಈಗ ಕಾಲೇಜಿನ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದಾದರೂ ಅವರ ಮನಸ್ಸಿನಲ್ಲಿ ಚೂರಾದರೂ ನರ್ವಸ್ ಆಗಿಯೇ ಆಗಿರುತ್ತಾರೆ.

ಬೆಂಗಳೂರು[ಜೂ.15]: ಈ ಮೇ ತಿಂಗಳು ಬಂತೆಂದರೆ ಎಲ್ಲೆಡೆ ಕಾಲೇಜು ಸೇರುವ, ಸೇರಿಸುವ ಸಂಭ್ರಮ. ಆತಂಕ ಕೂಡ ಇಲ್ಲದಿಲ್ಲ. ಊರಿನ ಹತ್ತಿರದಲ್ಲೇ ಇದ್ದ ಸ್ಕೂಲನ್ನು ಬಿಟ್ಟು ಈಗ ಮೈಲಿಗಳಾಚೆಯ ಕಾಲೇಜಿಗೆ ಮಕ್ಕಳನ್ನು ಕಳುಹಿಸುವುದು ಪೋಷಕರಲ್ಲಿ ಆತಂಕಕ್ಕೆ ಕಾರಣವಾದರೆ, ಕಾಲೇಜು ಹೇಗಿರುತ್ತದೋ, ಅಲ್ಲಿನ ಸಿಲಬಸ್ ಹೇಗೋ ಏನೋ ಅನ್ನುವುದು ವಿದ್ಯಾರ್ಥಿಗಳಲ್ಲಿನ ಆತಂಕಕ್ಕೆ ಕಾರಣವಾಗಿರುತ್ತದೆ. ಒಟ್ಟಿನಲ್ಲಿ ಸಂಭ್ರಮ ಹಾಗೂ ಆತಂಕ ಎರಡೂ ಒಟ್ಟೊಟ್ಟಿಗೆ ಎದುರಾಗಿರುವ ಈ ಗಳಿಗೆಯಲ್ಲಿ, ಕಾಲೇಜು ಮೆಟ್ಟಿಲು ಹತ್ತುವ ಮುಂಚೆ ಗಮನದಲ್ಲಿರಬೇಕಾದ ಕೆಲ ವಿಷಯಗಳು ಇಲ್ಲಿವೆ..

ಇದೀಗ ಮೇ ತಿಂಗಳು. ಹತ್ತನೇ ತರಗತಿಯನ್ನು ಮುಗಿಸಿ, ಶಾಲಾ-ಜೀವನಕ್ಕೆ ತಿಲಾಂಜಲಿ ಹಾಡಿ, ಕಾಲೇಜಿಗೆ ಹೋಗಲು ಶುರು ಮಾಡಿರುವವರು ಕೆಲವು ಹಾಗೂ ಕಾಲೇಜು ಶುರುವಾಗುವುದನ್ನು ಕಾಯುತ್ತಿರುವವರು ಕೆಲವು, ನಾನು ಆ ಪೈಕಿಯಲ್ಲಿ ಒಬ್ಬ. ಇತ್ತೀಚಿಗೆ ಸಿ.ಬಿ.ಎಸ್.ಇ ಫಲಿತಾಂಶ ಕೂಡ ಪ್ರಕಟಗೊಂಡಿದೆ. ಇಷ್ಟು ದಿವಸ ರಿಸಲ್ಟ್ ಬಗ್ಗೆ ತಲೆಕೆಡಿಸಿಕೊಂಡಿದ್ದ ವಿದ್ಯಾರ್ಥಿಗಳು ಈಗ ಕಾಲೇಜಿನ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದಾದರೂ ಅವರ ಮನಸ್ಸಿನಲ್ಲಿ ಚೂರಾದರೂ ನರ್ವಸ್ ಆಗಿಯೇ ಆಗಿರುತ್ತಾರೆ. ಆ ಭಯವನ್ನು ಹೋಗಲಾಡಿಸಲೆಂದು ನಾನು ಕೆಲವು ಟಿಪ್ಸ್‌ಗಳನ್ನು ಹಂಚಿಕೊಳ್ಳಲು ಇಚ್ಛಿಸುತ್ತೇನೆ. 

* ಮೊದಲನೇ ದಿನ ಕಾಲೇಜಿಗೆ ಸ್ವಲ್ಪ ಬೇಗ ತಲುಪುವುದು ಸೂಕ್ತ ಎಂದು ಹೇಳುತ್ತೇನೆ. ಇದು ನಿಮ್ಮ ಸಮಯಪ್ರಜ್ಞೆ ಮಾತ್ರವಲ್ಲದೆ ನಿಮ್ಮ ಆಸಕ್ತಿಯನ್ನೂ ಕೂಡ ತೋರಿಸುತ್ತದೆ. 
* ಹೇಗೂ ಬೇಗ ತಲುಪಿರುವ ನೀವು ನಿಮ್ಮ ಕಾಲೇಜಿನ ಕ್ಯಾಂಪಸ್ ಅನ್ನು ಒಂದು ಸುತ್ತುಹಾಕಿ, ಆದಷ್ಟು ನಿಮ್ಮ ಕಾಲೇಜಿನ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿ. 
* ಮೊದಲನೇ ದಿನ ಆದಷ್ಟು ನಿಮ್ಮ ಸಹಪಾಠಿಗಳನ್ನು ಪರಿಚಯಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ನರ್ವಸ್‌ನೆಸ್ ಅನ್ನು ಬೇಲಿಯಾಗಿ ಮಾಡಿಕೊಂಡು, ಬೇರೆಯವರೊಂದಿಗೆ ಬೆರೆಯದಂಥವರಾಗಬೇಡಿ. ನೆನಪಿಡಿ, ಅಲ್ಲಿರುವ ವಿದ್ಯಾರ್ಥಿಗಳಿಗೂ ಕೂಡ ಅದು ಮೊದಲ ದಿನ. ಅವರೂ ಸಹ ನಿಮ್ಮಷ್ಟೇ ನರ್ವಸ್ ಆಗಿರುತ್ತಾರೆ.
* ನಿಮ್ಮ ಕಾಲೇಜಿನ ವಾತಾವರಣಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸಿ. ನೀವೀಗ ಶಾಲೆಗೆ ಹೋಗುವ ಮಕ್ಕಳಲ್ಲ ಎಂಬುದನ್ನು ನೆನಪಿಟ್ಟುಕೊಂಡು ನಿಮ್ಮಲ್ಲಿ ಆತ್ಮವಿಶ್ವಾಸ ಹಾಗೂ ಸ್ವಾಭಿಮಾನಗಳನ್ನು ನೆಲೆಯಾಗಿಸಿ. 
* ನಿಮ್ಮ ಮುಗುಳುನಗೆಯನ್ನು ಒಂದು ಬಲವಾದ ಆಯುಧದಂತೆ ಬಳಸಿಕೊಂಡು ನಿಮ್ಮ ಎಲ್ಲಾ ಸಹಪಾಠಿಗಳೊಂದಿಗೆ ಸ್ನೇಹದಿಂದ ವರ್ತಿಸಿ. ಎಲ್ಲರೂ ನಿಮ್ಮ ಬೆಸ್ಟ್ ಫ್ರೆಂಡ್’ಗಳಾಗದಿರಬಹುದು, ಆದರೆ ನಿಮ್ಮ ಸ್ವಭಾವದಿಂದ ಒಳ್ಳೆಯ ಸ್ನೇಹಿತರನ್ನು ಕಟ್ಟಿಕೊಳ್ಳಬಹುದು. 
* ನಿಮ್ಮ ಉಪನ್ಯಾಸಕರು ಹಾಗೂ ನಿಮ್ಮ ಪ್ರಾಧ್ಯಾಪಕರನ್ನು ಮಾತನಾಡಿಸಿ ಅವರ ಮನಸ್ಸನ್ನು ಗೆಲ್ಲಲು ಪ್ರಯತ್ನಿಸಿ. ಈ ಸಣ್ಣ ಹೆಜ್ಜೆ ಮುಂದೆ ಬಹಳ ಒಳ್ಳೆಯ ಪ್ರಭಾವವನ್ನು ಬೀರಬಹುದು. 
* ಕಾಲೇಜಿನಲ್ಲಿ ನೀವು ಕಾನ್‌ಫಿಡೆಂಟ್ ಆಗಿ ವರ್ತಿಸಬೇಕು. ಆದರೆ ನೀವು ಓವರ್-ಕಾನ್‌ಫಿಡೆಂಟ್ ಆಗಿ ವರ್ತಿಸಬಾರದು. ನೀವು ನಿಮ್ಮ ಕಾಲೇಜಿನಲ್ಲಿ ಟಾಪರ್ ಆಗಿರಬಹುದು, ಆದರೆ ನೀವು ಓದುತ್ತಿರುವ ಕಾಲೇಜಿನಲ್ಲಿ ನಿಮ್ಮ ತರಹದ ಅದೆಷ್ಟೋ ಟಾಪರ್ ಗಳಿರುತ್ತಾರೆ. ಇದನ್ನು ನೀವು ನೆನಪಿಟ್ಟುಕೊಳ್ಳಬೇಕು. 
* ಕೆಲವರು ಸಿನೆಮಾ ಹಾಗೂ ಟೀವಿಗಳಲ್ಲಿ ನೋಡಿದಂತೆ ತಾವೂ ಕೂಡ ರ್ಯಾಗಿಂಗ್ ಹಾಗೂ ಟೀಸಿಂಗ್‌ಗಳಿಗೆ ಒಳಗಾಗಬಹುದು ಎಂಬ ಭಯದಲ್ಲಿ ಕಾಲೇಜಿನ ಬಗ್ಗೆ ಬಹಳ ಕೆಟ್ಟ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಅದು ಅಷ್ಟರ ಮಟ್ಟಿಗೆ ನಿಜವಲ್ಲದಿದ್ದರೂ ಒಂದು ಮಟ್ಟಿಗೆ ನಿಜ. ಆದರೆ ನೀವು ಧೃತಿಗೆಡದೆ ಆ ಸಮಸ್ಯೆಗಳಿಂದ ಹೊರಬಬೇಕು. 
* ಕಾಲೇಜಿಗೆ ಕಾಲಿಡುತ್ತಿರುವ ಎಲ್ಲ ನನ್ನ ಸ್ನೇಹಿತರಿಗೆ ಶುಭವಾಗಲಿ  ಎಂದು ಹಾರೈಸುತ್ತೇನೆ.  
- ಹೇಮಾಂಶು. ಎಸ್ ರಾಮಕೃಷ್ಣ ನಗರ, ಮೈಸೂರು

loader