Asianet Suvarna News Asianet Suvarna News

ಟಾಟಾ ಸುಮೋ ಕಾರಿಗೆ ಈ ಹೆಸರು ಬಂದಿದ್ದು ಹೇಗೆ? ಇದರ ಹಿಂದಿದೆ ಉದ್ಯೋಗಿಯ ರೋಚಕ ಕಹಾನಿ!

ಟಾಟಾ ಸುಮೋ MUV ಕಾರು ಭಾರತದಲ್ಲಿ ಭಾರಿ ಮೋಡಿದ ಕಾರು. ಈ ಕಾರಿಗೆ ಸುಮೋ ಎಂದು ಹೆಸರಿಡಲು ಕಾರಣವೇನು? ಈ ಹೆಸರನ್ನು ಜಪಾನ್ ರಸ್ಲರ್ಸ್‌ನಿಂದ ಸ್ಪೂರ್ತಿ ಪಡೆದು ಇಟ್ಟಿಲ್ಲ. ಟಾಟಾ ಉದ್ಯೋಗಿಯೊಬ್ಬರ ಹೆಸರನ್ನೇ ಕಾರಿಗೆ ಇಡಲಾಗಿದೆ. ಇದರ ಹಿಂದೆ ರೋಚಕ ಕಹಾನಿ ಇದೆ.

Iconic Tata Sumo name not inspired by Japan wrestler its derived from employee to honour his work ckm
Author
First Published Jul 31, 2023, 3:24 PM IST

ಮುಂಬೈ(ಜು.31): ಭಾರತದಲ್ಲಿ ಟಾಟಾ ಸುಮೋ ಕಾರು ಸದ್ಯ ನಿವೃತ್ತಿಯಾಗಿದೆ. 1990ರ ದಶಕದಲ್ಲಿ ಬಿಡುಗಡೆಯಾದ ಕಾರು ಬರೋಬ್ಬರಿ 25 ವರ್ಷಗಳ ಕಾಲ ಭಾರತದ ವಾಹನ ಮಾರುಕಟ್ಟೆಯ ದೊರೆಯಾಗಿ ಮೆರೆದಿದೆ. ಟಾಟಾ ಸುಮೋ, ಟಾಟಾ ಸುಮೋ ಗೋಲ್ಡ್ ಸೇರಿದಂತೆ ಹಲವು ಅಪ್‌ಡೇಟೆಡ್ ವರ್ಶನ್ ಕಾರುಗಳು ಮೂಲಕ ಸಂಚಲನ ಸೃಷ್ಟಿಸಿದೆ. 2019ರ ವರೆಗೆ ಟಾಟಾ ಸುಮೋ ಕಾರು ಉತ್ಪಾದನೆಯಾಗಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿತ್ತು. 2019ರಲ್ಲಿ ಟಾಟಾ ಸುಮೋ ಕಾರಿಗೆ ವಿದಾಯ ಹೇಳಲಾಯಿತು. ಆದರೆ ಟಾಟಾ ಸುಮೋ ಕಾರಿನ ಹಿಂದೆ ಹಲವು ಕುತೂಹಲಕರ ವಿಚಾರಗಳಿವೆ. ಪ್ರಮುಖವಾಗಿ ಈ ಕಾರಿಗೆ ಸುಮೋ ಎಂದು ಹೆಸರಿಡಲು ಕಾರಣವೇನು? ಬಹುತೇಕರು ಜಪಾನ್ ರಸ್ಲರ್ಸ್‌ನಿಂದ ಸ್ಪೂರ್ತಿ ಪಡೆದ ಹೆಸರು ಎಂದುಕೊಂಡಿದ್ದಾರೆ. ಆದರೆ ಇದು ತಪ್ಪು. ಟಾಟಾ ಸುಮೋ ಕಾರಿಗೆ ಇಟ್ಟಿರುವ ಹೆಸರು ಟಾಟಾದಲ್ಲಿ ಪರಿಶ್ರಮ ಜೀವಿಯಾಗಿ ಕೆಲಸ ಮಾಡಿ, ಟಾಟಾ ಸಂಸ್ಥೆಯ ಏಳಿಗೆಯಲ್ಲಿ ಪ್ರಮುಖ ಕಾರಣರಾದ ಉದ್ಯೋಗಿಯ ಹೆಸರು.

ಟಾಟಾ ಸುಮೋ ಕಾರನ್ನು 1990ರ ದಶಕದಲ್ಲಿ ಬಿಡುಗಡೆ ಮಾಡಲಾಯಿತು. ಬಿಡುಗಡೆ ಮಾಡಿದ ಮೂರೇ ವರ್ಷಕ್ಕೆ 1 ಲಕ್ಷ ಟಾಟಾ ಸುಮೋ ಕಾರುಗಳು ಮಾರಾಟವಾಗುವ ಮೂಲಕ ದಾಖಲೆ ಬರೆದಿತ್ತು. ಟಾಟಾ ಸುಮೋ ಕಾರಿಗೆ, ಟಾಟಾದ ಮಾಜಿ ಉದ್ಯೋಗಿ, ಟಾಟಾ ಮೋಟಾರ್ಸ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ, ಪದ್ಮಭೂಷಣ ಪ್ರಶಸ್ತಿ ವಿಜೇತ ಸುಮಂತ್ ಮೂಲ್ಗೌವ್ಕರ್.

ರತನ್ ಟಾಟಾ ಡ್ರೀಮ್ ಕಾರ್ ಕೊಂಡಾಡಿದ ಶಾಂತನು ನಾಯ್ಡು, ಭಾವನಾತ್ಮಕ ಪೋಸ್ಟ್ ವೈರಲ್!

ಸುಮಂತ್ ಮೂಲ್ಗೌವ್ಕರ್(Sumant Moolgaokar) ಅವರ ಮೊದಲ ಹೆಸರಿನ ಮೂರು ಅಕ್ಷರ ಹಾಗೂ ಎರಡನೇ ಹೆಸರಿನ ಎರಡನೇ ಅಕ್ಷರವನ್ನು ತಗೆದು ಸುಮೋ(SUMO) ಎಂದು ಹೆಸರಿಡಲಾಗಿದೆ. ಟಾಟಾ ಸಂಸ್ಥೆಯಲ್ಲಿ ಹಲವು ಉದ್ಯೋಗಿಗಳಿದ್ದಾರೆ. ಹಲವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಆದರೆ ಓರ್ವ ಉದ್ಯೋಗಿಯ ಹೆಸರನ್ನು ಟಾಟಾ ಕಾರಿಗೆ ಇಡಲು ಕಾರಣವೇನು? ಅನ್ನೋ ಪ್ರಶ್ನೆ ಮೂಡದೇ ಇರದು. ಇದರ ಹಿಂದೆ ಮತ್ತೊಂದು ರೋಚಕ ಕತೆ ಇದೆ.

ಸುಮಂತ್ ಟಾಟಾದ ವ್ಯವಸ್ಥಾಪಕ ನಿರ್ದೇಶಕರಾಗಿ ಉನ್ನತ ಸ್ಥಾನದಲ್ಲಿದ್ದವರು.ಟಾಟಾ ಮೋಟಾರ್ಸ್ ಕಚೇರಿಯಲ್ಲಿ ಮಧ್ಯಾಹ್ನ ಉದ್ಯೋಗಿಳೆಲ್ಲರು ಜೊತೆಯಾಗಿ ಊಟ ಮಾಡುತ್ತಾರೆ.  ಆದರೆ ಸುಮಂತ್ ಮಾತ್ರ ಸಹೋದ್ಯೋಗಿಗಳ ಜೊತೆ ಊಟ ಮಾಡುತ್ತಿರಲಿಲ್ಲ. ಊಟದ ವೇಳೆ ಹೊರಗಡೆ ಹೋಗುತ್ತಿದ್ದರು. ಬಳಿಕ ಒಂದು ಗಂಟೆ ಬಳಿಕ ಕಚೇರಿಗೆ ವಾಪಸ್ಸಾಗುತ್ತಿದ್ದರು. ಇದು ಕಚೇರಿಯಲ್ಲಿ ಭಾರಿ ಚರ್ಚೆಯಾಗಿತ್ತು. ಟಾಟಾದ ಎಂಡಿ ಸುಮಂತ್, ಸಹದ್ಯೋಗಿಗಳ ಜೊತೆ ಕುಳಿತು ಊಟ ಮಾಡುತ್ತಿಲ್ಲ ಅನ್ನೋ ಮಾತು ಆಡಳಿ ಮಂಡಳಿವರೆಗೂ ತಲುಪಿತ್ತು. ಇದೇ ವೇಳ ಸುಮಂತ್‌ಗೆ ಟಾಟಾ ಡೀಲರ್ಸ್‌ಗಳು ಪ್ರತಿ ದಿನ ಮಧ್ಯಾಹ್ನ ಹತ್ತಿರದಲ್ಲಿರುವ ಫೈವ್ ಸ್ಟಾರ್ ಹೊಟೆಲ್‌ನಲ್ಲಿ ಊಟ ನೀಡುತ್ತಿದ್ದಾರೆ. ಸುಮಂತ್ ಲಕ್ಷ ಲಕ್ಷ ವೇತನ ಪಡೆಯುತ್ತಿರುವ ವ್ಯಕ್ತಿ. ಹೀಗಾಗಿ ಅವರು ಫೈವ್ ಸ್ಟಾರ್ ಹೊಟೆಲ್‌ನಲ್ಲಿ ಮಾತ್ರ ಊಟ ಮಾಡುತ್ತಾರೆ ಅನ್ನೋ ಊಹಾಪೋಹಗಳು ಹರಿದಾಡಿತ್ತು.

ಕುತೂಹಲ ಹೆಚ್ಚಾಯಿತು. ಹೀಗಾಗಿ ಕೆಲ ಉದ್ಯೋಗಿಗಳು ಎಂಡಿ ಸುಮಂತ್ ಮಧ್ಯಾಹ್ನ ಹೊರಗಡೆ ಹೋಗುವುದು ಎಲ್ಲಿಗೆ? ಎಲ್ಲಿ ಊಟ ಮಾಡುತ್ತಾರೆ ಅನ್ನೋದು ತಿಳಿಯಲು ಅವರಿಗೆ ಗೊತ್ತಿಲ್ಲದೆ ಹಿಂಬಾಲಿಸಿದರು. ಸುಮಂತ್ ಮೂಲ್ಕೌವ್ಕರ್ ತಮ್ಮ ಕಾರಿನಲ್ಲಿ ಕೆಲವೇ ಕಿಲೋಮೀಟರ್ ದೂರದಲ್ಲಿದ್ದ ಸಣ್ಣ ಹಾಗೂ ಸರಳ ಡಾಬಾಗೆ ತೆರಳಿದರು. ಬಳಿಕ ಅಲ್ಲಿ ಟ್ರಕ್, ಲಾರಿ ಚಾಲಕರ ಜೊತೆ ಕುಳಿತು ಊಟ ಮಾಡುತ್ತಿದ್ದರು. ಈ ವೇಳೆ ಟ್ರಕ್ ಚಾಲಕರ ಜೊತೆ ಮಾತುಕತೆ ನಡೆಸುತ್ತಿದ್ದರು. ಟ್ರಕ್, ಲಾರಿಯಲ್ಲಿನ ಸಮಸ್ಯೆಗಳು, ಚಾಲಕರ ಬೇಡಿಕೆಗಳು, ಕುಂದು ಕೊರತೆಗಳು ಸೇರಿದಂತೆ ಎಲ್ಲವನ್ನೂ ಚರ್ಚಿಸುತ್ತಿದ್ದರು. ಎಲ್ಲವನ್ನೂ ನೋಟ್ ಮಾಡಿಕೊಳ್ಳುತ್ತಿದ್ದರು. ಇದು ಪ್ರತಿ ದಿನ ಮಧ್ಯಾಹ್ನ ಊಟದ ಸಮಯದಲ್ಲಿ ನಡೆಯುತ್ತಿತ್ತು.

ಶೀಘ್ರದಲ್ಲೇ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು ಬಿಡುಗಡೆ, ಇದು ಅತಿ ಕಡಿಮೆ ಬೆಲೆಯ SUV ಇವಿ!

ಮರಳಿ ಕಚೇರಿಗೆ ಬರುತ್ತಿದ್ದ ಸುಮಂತ್ ಮೂಲ್ಗೌವ್ಕರ್, ಟಾಟಾ ಡಿಸೈನರ್, ಎಂಜಿನೀಯರ್ ಸೇರಿದಂತೆ ಹಲವು ಸಭೆಗಳಲ್ಲಿ ಯಾವೆಲ್ಲಾ ಸುಧಾರಣೆ ತರಬೇಕು, ಸಮಸ್ಯೆಗಳೇನು ಅನ್ನೋದನ್ನು ವಿಸ್ತಾರವಾಗಿ ವಿವರಿಸಿ ಎಲ್ಲರಿಗೂ ಮನವರಿಕೆ ಮಾಡುತ್ತಿದ್ದರು. ತಾನೋಬ್ಬ ವ್ಯವಸ್ಥಾಪಕ ನಿರ್ದೇಶಕನಾಗಿದ್ದರೂ, ಅತ್ಯಂತ ಸರಳ ವ್ಯಕ್ತಿಯಂತೆ ತೆರಳಿ ಸಾಮಾನ್ಯ ಚಾಲಕರ ಜೊತೆ ಕುಳಿತು ಮಾತನಾಡಿ ಅವರಿಂದ ಹಲವು ಮಾಹಿತಿ ಪಡೆದುಕೊಳ್ಳುತ್ತಿದ್ದರು. ಈ ವಿಚಾರ ಕಚೇರಿಯಲ್ಲಿ ಬಹಿರಂಗವಾಯಿತು. ಒಬ್ಬ ಟಾಟಾ ಉದ್ಯೋಗಿಯಾಗಿ, ಎಂಡಿಯಾಗಿ ಕಂಪನಿಯ ಏಳಿಗೆಯಲ್ಲಿ ಶ್ರಮಿಸಿದ ಸುಮಂತ್ ಅವರಿಗೆ ಗೌರವ ನೀಡಲು ಟಾಟಾ ಎಂಯುವಿ ಕಾರಿಗೆ ಸುಮೋ ಎಂದು ಹೆರಸಿಟ್ಟಿತು. ಇವರ ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಪದ್ಮೂಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

Follow Us:
Download App:
  • android
  • ios