Asianet Suvarna News Asianet Suvarna News

ಪತಿ ಮೇಲಿನ ಕೋಪಕ್ಕೆ ಪೊಲೀಸರಿಗೆ ಬಾಂಬ್‌ ಬೆದರಿಕೆ ಸಂದೇಶ ಕಳುಹಿಸಿದ ಪತ್ನಿ!

ದಂಪತಿಯ ನಡುವೆ ನಡೆದ ಜಗಳ ತಾರಕಕ್ಕೇರಿ ಬೇಸರಗೊಂಡ ಪತ್ನಿಯು ಪ್ರಿಯಕರನ ಮಾತಿನಂತೆ ಪತಿಯ ಮೊಬೈಲ್‌ನಿಂದ ಅರ್‌ಡಿಎಕ್ಸ್ ಸ್ಫೋಟಗೊಳಿಸುವುದಾಗಿ ತನಿಖಾ ಸಂಸ್ಥೆಗಳಿಗೆ ಬೆದರಿಕೆ ಮೆಸೇಜ್ ಕಳಿಸಿದ್ದ ಘಟನೆ ಅನೇಕಲ್ ಠಾಣಾ ವ್ಯಾಪ್ತಿಯ ಮಾರುತಿ ಬಡಾವಣೆಯಲ್ಲಿ ಘಟಿಸಿದೆ.

Wife sends bomb threat message in husbands name at bengaluru rav
Author
First Published Dec 6, 2023, 5:43 AM IST

ಆನೇಕಲ್ (ಡಿ.6) :  ದಂಪತಿಯ ನಡುವೆ ನಡೆದ ಜಗಳ ತಾರಕಕ್ಕೇರಿ ಬೇಸರಗೊಂಡ ಪತ್ನಿಯು ಪ್ರಿಯಕರನ ಮಾತಿನಂತೆ ಪತಿಯ ಮೊಬೈಲ್‌ನಿಂದ ಅರ್‌ಡಿಎಕ್ಸ್ ಸ್ಫೋಟಗೊಳಿಸುವುದಾಗಿ ತನಿಖಾ ಸಂಸ್ಥೆಗಳಿಗೆ ಬೆದರಿಕೆ ಮೆಸೇಜ್ ಕಳಿಸಿದ್ದ ಘಟನೆ ಅನೇಕಲ್ ಠಾಣಾ ವ್ಯಾಪ್ತಿಯ ಮಾರುತಿ ಬಡಾವಣೆಯಲ್ಲಿ ಘಟಿಸಿದೆ.

ಉತ್ತರ ಕರ್ನಾಟಕ ಮೂಲದ ಕಿರಣ್ ಮತ್ತು ವಿದ್ಯಾರಾಣಿ ದಂಪತಿ ಆನೇಕಲ್‌ನ ಮಾರುತಿ ಬಡಾವಣೆಯಲ್ಲಿ ವಾಸವಿದ್ದಾರೆ. ವಿದ್ಯಾರಾಣಿಗೆ ರಾಮ್‌ಪ್ರಸಾದ್ ಎಂಬಾತ ಸಾಮಾಜಿಕ ಜಾಲತಾಣ ಮೂಲಕ ಪರಿಚಯವಾಗಿದ್ದು, ನಿರಂತರ ಚ್ಯಾಟಿಂಗ್ ನಲ್ಲಿ ನಿರತರಾಗಿದ್ದರು. ವಿದ್ಯಾರಾಣಿಯ ಗಂಡ ಕಿರಣ್‌ಗೆ ವಿಷಯ ಗೊತ್ತಾಗಿ ಜಗಳ ನಡೆದು ಪತ್ನಿಯ ಮೊಬೈಲನ್ನು ನೆಲಕ್ಕೆ ಎಸೆದು ಒಡೆದು ಹಾಕಿದ್ದರು.

ಉಪ್ಪಿನಕಾಯಿ ಕೇಳುವ ನೆಪದಲ್ಲಿ ವಿಧವೆ ಗಲ್ಲ ಕಚ್ಚಿ ರೇಪ್‌ ಮಾಡಲು ಯತ್ನಿಸಿದ ಕಾಮುಕ!

ಈ ವಿಚಾರವನ್ನು ಬೇರೆ ನಂಬರ್ ಮೂಲಕ ರಾಮ್‌ಪ್ರಸಾದ್‌ಗೆ ತಿಳಿಸಿದ್ದ ವಿದ್ಯಾರಾಣಿ ತನ್ನ ಗಂಡ ಕಿರಣ್‌ಗೆ ಬುದ್ಧಿ ಕಲಿಸಲು ಸಂಚು ಮಾಡಿ ಪ್ರಿಯಕರ ಕಳುಹಿಸಿದ ‘ಡಿಸೆಂಬರ್ 5ರಂದು ಆರ್‌ಡಿಎಸ್‌ ಬಾಂಬ್ ಹಾಕುತ್ತೇನೆ’ ಎಂಬ ಬೆದರಿಕೆ ಮೆಸೇಜನ್ನು ಗಂಡನ ಮೊಬೈಲ್ ಮೂಲಕ ಪ್ರಿಯಕರನಿಗೆ ಮರಳಿ ಫಾರ್ವಡ್ ಮಾಡಿದಳು. ಹಾಗೆಯೇ ಇದೇ ಮೆಸೇಜನ್ನು ಕಿರಣ್ ನಂಬರ್‌ನಿಂದ ಪೊಲೀಸ್ ಮತ್ತು ಕೇಂದ್ರ ತನಿಖಾ ಸಂಸ್ಥೆಗೂ ಕಳುಹಿಸಿದ್ದಳು.

ಚಿನ್ನ ಖರೀದಿಸುವ ನೆಪದಲ್ಲಿ ಮಾಂಗಲ್ಯ ಸರ ಎಗರಿಸಿದ ಖತರ್ನಾಕ್ ಮಹಿಳೆಯರು! 

ಬಳಿಕ ಗಂಡನ ಮೊಬೈಲ್‌ನಿಂದ ಮೆಸೇಜ್ ಡಿಲೀಟ್ ಮಾಡಿದ್ದಳು. ಮೂಲ ಹುಡುಕಿ ಹೊರಟಿದ್ದ ತನಿಖಾ ಸಂಸ್ಥೆಗಳು ಕಿರಣ್ ಮನೆಗೆ ಬಂದು ವಿಚಾರಣೆಗೆ ಒಗೊಳಪಡಿಸಿದಾಗ ಸತ್ಯ ಬಯಲಿಗೆ ಬಂದಿತು.

ಈ ಸಂಬಂಧ ಆನೇಕಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಠಾಣೆಗೆ ಭೇಟಿ ನೀಡಿದ್ದರು. ಶೀಘ್ರದಲ್ಲೇ‌ ವಿದ್ಯಾ ರಾಣಿಯ ಪ್ರಿಯಕರ ರಾಮಪ್ರಸಾದ್ ನನ್ನ ಬಂದಿಸಲಾಗುವುದೆಂದು ತಿಳಿಸಿದ್ದಾರೆ.

Follow Us:
Download App:
  • android
  • ios