3 ಲಕ್ಷ ಸುಪಾರಿ ನೀಡಿ ಮಾವನ ಕೊಲ್ಲಿಸಿದ ಅಳಿಯ

ಮಾವನ ಹತ್ಯೆ ಮಾಡುವುದಕ್ಕಾಗಿ ಅಳಿಯನೋರ್ವ 3 ಲಕ್ಷ ರೂಪಾಯಿ ಸುಪಾರಿ ನೀಡಿದ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ರಾಜೇಂದ್ರ ಉತ್ತಮ್ ರಾವ್ ಮರಾಠೆ ಕೊಲೆಯಾದವರು.

Son in law spent 3 lakh to contract killer to kill father in law at Maharashtra Four arrested including minors akb

ಮುಂಬೈ: ಮಾವನ ಹತ್ಯೆ ಮಾಡುವುದಕ್ಕಾಗಿ ಅಳಿಯನೋರ್ವ 3 ಲಕ್ಷ ರೂಪಾಯಿ ಸುಪಾರಿ ನೀಡಿದ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ರಾಜೇಂದ್ರ ಉತ್ತಮ್ ರಾವ್ ಮರಾಠೆ ಕೊಲೆಯಾದವರು. ನಂದುರ್ಬಾರ್‌ನಲ್ಲಿ ಪತ್ನಿ ಮಕ್ಕಳೊಂದಿಗೆ ವಾಸ ಮಾಡ್ತಿದ್ದ ಇವರು ಮಾರ್ಚ್ 14 ರಂದು ನಾಪತ್ತೆಯಾಗಿದ್ದರು. ಮಾರ್ಚ್‌ 16 ರಂದು ಇವರ ಶವ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಇವರ ಪುತ್ರಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ಕೂಡ ದಾಖಲಿಸಿದ್ದರು.

ಈ ಮಧ್ಯೆ ಪ್ರಕರಣದ ಶಂಕಿತರು ಮುಂಬೈಗೆ ಪರಾರಿಯಾಗುತ್ತಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಮಾಹಿತಿಯ ಮೇರೆಗೆ ಮರುವೇಷದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಅದರಲ್ಲಿ ಇಬ್ಬರು ಅಪ್ರಾಪ್ತರಾಗಿದ್ದಾರೆ. 25 ವರ್ಷದ ನಿಲೇಶ್ ಬಚ್ಚು ಪಾಟೀಲ್ 19 ವರ್ಷದ ಲಕ್ಕಿ ಕಿಶೋರ್ ಬಿರಾರೆ ವಯಸ್ಕ ಬಂಧಿತರಾಗಿದ್ದು, ಇನ್ನಿಬ್ಬರು ಆರೋಪಿಗಳು ಅಪ್ರಾಪ್ತರಾಗಿರುವ ಕಾರಣ ಅವರ ಹೆಸರನ್ನು ಗೌಪ್ಯವಾಗಿಡಲಾಗಿದೆ. 

ಶಾಲಾ ಬಾಲಕಿಯನ್ನು ಬೆನ್ನಟ್ಟಿ ಲೈಂಗಿಕ ಕಿರುಕುಳ: ಸಿಸಿಟಿವಿಯಲ್ಲಿ ಆಘಾತಕಾರಿ ದೃಶ್ಯ ಸೆರೆ

ಆರೋಪಿಗಳು ನೀಡಿದ ಮಾಹಿತಿ ಪ್ರಕಾರ, ಕೊಲೆಯಾದ ರಾಜೇಂದ್ರ ಉತ್ತಮ್ ರಾವ್ ಮರಾಠೆ ಅವರ ಅಳಿಯನಾದ 35 ವರ್ಷದ ಗೋವಿಂದ್ ಸುರೇಶ್ ಸೋನಾರ್ ಎಂಬಾತನೇ ತನ್ನ ಮಾವನ ಹತ್ಯೆಗೆ ಈ ಆರೋಪಿಗಳಿಗೆ 3 ಲಕ್ಷ ರೂಪಾಯಿ ಗುತ್ತಿಗೆ ನೀಡಿದ್ದ  ಎಂದು ತಿಳಿದು ಬಂದಿದೆ.  ಆರೋಪಿಗಳು ರಾಜೇಂದ್ರ ಮರಾಠೆ ಅವರನ್ನು ಕೊಲೆ ಮಾಡಿ ಶವವನ್ನು ನಂದೂರ್‌ಬರ್‌ನಲ್ಲಿಯೇ ವಿಲೇವಾರಿ ಮಾಡಿದ್ದರು. 

ಇನ್ನು ಆರೋಪಿಗಳ ಬಳಿ ಇದ್ದ ಮೊಬೈಲ್ ಫೋನ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅದರಲ್ಲಿ ಕೊಲೆ ಮಾಡಿದ ದೃಶ್ಯಗಳನ್ನು ರೆಕಾರ್ಡ್ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಯಾವ ಕಾರಣಕ್ಕೆ ಅಳಿಯನೇ ಮಾವನ ಕೊಲೆಗೆ ಇಷ್ಟೊಂದು ಮೊತ್ತದ ಹಣ ಸುಪಾರಿ ನೀಡಿದ್ದರು ಎಂಬ ಬಗ್ಗೆ ಮಾಹಿತಿ ಇಲ್ಲ.

ಮಗಳು ಆತ್ಮಹತ್ಯೆ: ಗಂಡನ ಮನೆಗೆ ಬೆಂಕಿ ಹಚ್ಚಿದ ಸಂಬಂಧಿಗಳು: ಅತ್ತೆಮಾವ ಇಬ್ಬರೂ ಸಜೀವ ದಹನ

Latest Videos
Follow Us:
Download App:
  • android
  • ios