ಕೋಲಾರ: ಮದುವೆಯಾದ ಒಂದೇ ತಿಂಗಳಲ್ಲಿ ಮಾವನ ಕಥೆ ಫಿನಿಷ್ ಮಾಡಿದ ಆಳಿಯ..!

ಬಾಬು ಷರೀಫ್‌ ಕೊಲೆಯಾದ ವ್ಯಕ್ತಿ, ಆಳಿಯ ತಬರೇಜ್‌ ಪಾಷಾ ಹಾಗೂ ಜಬೀನಾ ತಾಜ್‌ ಸೇರಿಕೊಂಡು ಬಾಬು ಷರೀಫ್‌ನನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. 

Son in Law Killed his Father in law in Kolar grg

ಕೋಲಾರ(ಆ.18): ಮದುವೆಯಾಗಿ ಒಂದು ತಿಂಗಳ ಒಳಗೆ ಮಾವನನ್ನು ಅಳಿಯ ಚಾಕುವಿನಿಂದ ತಿವಿದು ಹತ್ಯೆ ಮಾಡಿರುವ ಘಟನೆ ಶಹೀದ್‌ ನಗರದದಲ್ಲಿ ನಡೆದಿದೆ. 

ಇಲ್ಲಿನ ನಿವಾಸಿ ಬಾಬು ಷರೀಫ್‌ ಕೊಲೆಯಾದ ವ್ಯಕ್ತಿ, ಆಳಿಯ ತಬರೇಜ್‌ ಪಾಷಾ ಹಾಗೂ ಜಬೀನಾ ತಾಜ್‌ ಸೇರಿಕೊಂಡು ಬಾಬು ಷರೀಫ್‌ನನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. 

ನಾರಿಯ ಸೀರೆ ಕದ್ದ, ರಾಧೆಯ ಮನ ಗೆಲ್ಲೋ ಮುನ್ನ ಸೆಕ್ಯೂರಿಟಿಯ ಕ್ರೋಧಕ್ಕೆ ತುತ್ತಾಗಿ ಸತ್ತೇ ಹೋದ!

ಬಾಬು ಷರೀಫ್‌ ತನ್ನ ಮಗಳನ್ನು ತಬರೇಜ್‌ನಿಗೆ ಕಳೆದ ತಿಂಗಳಷ್ಟೇ ಮದುವೆ ಮಾಡಿದ್ದರು. ಆದರೆ ತಬರೇಜ್‌ ಪಾಷಾ ಹೆಂಡತಿಗೆ ನಿತ್ಯ ಕಿರುಕುಳ ನೀಡುತ್ತಿದ್ದ, ಮಗಳಿಗೆ ಆಗುತ್ತಿರುವ ಕಿರುಕುಳ ನೋಡಲಾಗದೇ ತಂದೆ ಬಾಬು ಷರೀಫ್‌ ಈ ಬಗ್ಗೆ ಆಳಿಯನಿಗೆ ಪ್ರಶ್ನೆ ಮಾಡಲು ಹೋಗಿದ್ದರು. ಮನೆಗೆ ಬಂದ ಮಾವನಿಗೆ ಚಾಕಿವಿನಿಂದ ಇರಿದು ಅಳಿಯ ತಬರೇಜ್‌ ಪಾಷಾ ಕೊಲೆ ಮಾಡಿದ್ದಾನೆ.  ಕೋಲಾರ ನಗರ ಠಾಣಾ ಪೊಲೀಸರು ಕೇಸು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Latest Videos
Follow Us:
Download App:
  • android
  • ios