Health
೧೮೨೯ ಮೀ ಎತ್ತರದಲ್ಲಿರುವ ಮಣಿಕರಣ್ ತನ್ನ ಬಿಸಿನೀರಿನ ಚಿಲುಮೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ನೀರಿನಲ್ಲಿ ಯುರೇನಿಯಂ ಮತ್ತು ಗಂಧಕದ ಜೊತೆಗೆ ವಿಕಿರಣಶೀಲ ಖನಿಜಗಳಿವೆ ಎನ್ನಲಾಗಿದೆ.
ಮಂದಾಕಿನಿ ಬೆಟ್ಟದ ತಪ್ಪಲಿನಲ್ಲಿರುವ ವಜ್ರೇಶ್ವರಿ ಗ್ರಾಮದಲ್ಲಿ ಹಲವಾರು ಬಿಸಿನೀರಿನ ಚಿಲುಮೆಗಳಿವೆ. ಇಲ್ಲಿನ ನೀರಿನ ತಾಪಮಾನ ೪೩ ರಿಂದ ೪೯ ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ.
ಬಕ್ರೇಶ್ವರ್ ಒಂದು ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಇದು ೧೦ ಬಿಸಿನೀರಿನ ಚಿಲುಮೆಗಳನ್ನು ಹೊಂದಿದೆ. ಇದರಲ್ಲಿ ನೈಸರ್ಗಿಕವಾಗಿ ಚಿಕಿತ್ಸಕ ಖನಿಜಗಳಿವೆ.
ಬೆರ್ಹಾಂಪುರದಿಂದ ಸುಮಾರು ೫೦ ಕಿ.ಮೀ ದೂರದಲ್ಲಿ ತಪ್ತಪಾನಿ ಬಿಸಿನೀರಿನ ಚಿಲುಮೆ ಇದೆ. ಈ ನೈಸರ್ಗಿಕ ಚಿಲುಮೆಯ ನೀರು ಚರ್ಮ ರೋಗಗಳನ್ನು ಗುಣಪಡಿಸುವ ಔಷಧೀಯ ಗುಣಗಳನ್ನು ಹೊಂದಿದೆ.
ತವಾಂಗ್ ಜಿಲ್ಲೆಯ ತವಾಂಗ್ - ಜಾಂಗ್ ರಸ್ತೆಯಲ್ಲಿ ತಿಂಗ್ಬು ಮತ್ತು ಸಾಚು ಬಿಸಿನೀರಿನ ಚಿಲುಮೆಗಳಿವೆ. ಇಲ್ಲಿನ ಗಂಧಕಯುಕ್ತ ನೀರು ಚರ್ಮ ರೋಗಗಳನ್ನು ಗುಣಪಡಿಸುತ್ತದೆ ಎಂದು ನಂಬಲಾಗಿದೆ.
ಸುಂದರವಾದ ಉತ್ತರ ಸಿಕ್ಕಿಂನಲ್ಲಿ, ಚೀನಾ ಗಡಿಯ ಬಳಿ ಇರುವ ಯುಮೆಸಮ್ಡಾಂಗ್ ಪ್ರದೇಶದಲ್ಲಿ ೧೪ ಗಂಧಕದ ಬಿಸಿನೀರಿನ ಚಿಲುಮೆಗಳಿವೆ.
೧೯೮೨ ಮೀಟರ್ ಎತ್ತರದಲ್ಲಿರುವ ಗೌರಿಕುಂಡ್‌ನಲ್ಲಿ ಪವಿತ್ರ ಸ್ನಾನವು ಶುಭವೆಂದು ಪರಿಗಣಿಸಲಾಗಿದೆ.
ಸಿಯಾಚಿನ್ ಹಿಮನದಿಯ ಆರಂಭದಿಂದ ಸುಮಾರು ೯ ಕಿ.ಮೀ ದೂರದಲ್ಲಿ ಲಡಾಖ್‌ನಲ್ಲಿರುವ ಪನಾಮಿಕ್ ಇದೆ. ಈ ನೀರು ಹಲವು ಔಷಧೀಯ ಗುಣಗಳನ್ನು ಹೊಂದಿದೆ ಎಂದು ನಂಬಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೇಂದ್ರ್‌ತೀರ್ಥ ಮತ್ತು ಬೆಳ್ತಂಗಡಿ ತಾಲೂಕಿನ ಬಂದಾರು ಅಂಕರಮಜಲು ಎಂಬಲ್ಲಿರುವ ಬಿಸಿನೀರ ಚಿಲುಮೆ ದಕ್ಷಿಣ ಭಾರತದಲ್ಲಿರುವ ಎರಡು ಬಿಸಿನೀರ ಬುಗ್ಗೆಯಾಗಿದೆ.