ಹಣ ನೀಡದ್ದಕ್ಕೆ ಸ್ಫೂರ್ತಿ ಕರಿಯರ್ ಮಾಲೀಕನಿಗೆ ಚಾಕು ಇರಿದ ವಿದ್ಯಾರ್ಥಿ!
ಹಣ ನೀಡದ್ದಕ್ಕೆ ಸ್ಫೂರ್ತಿ ಕರಿಯರ್ ಮಾಲೀಕನಿಗೆ ವಿದ್ಯಾರ್ಥಿಯೋರ್ವ ಮನಬಂದಂತೆ ಚಾಕು ಇರಿದು ಪರಾರಿಯಾದ ಘಟನೆ ಧಾರವಾಡದ ಸಪ್ತಾಪೂರದಲ್ಲಿ ನಡೆದಿದೆ. ಕರಿಯರ್ ಮಾಲೀಕ ರಮೇಶ ಕಾಖಂಡಕಿ ಇರಿತಕೊಳ್ಳಗಾದವರು, ಕಲಬುರಗಿ ಮೂಲದ ಭೀರಪ್ಪ ಎಂಬುವವನಿಂದ ಕೃತ್ಯ.
ಧಾರವಾಡ (ಜು.18): ಹಣ ನೀಡದ್ದಕ್ಕೆ ಸ್ಫೂರ್ತಿ ಕರಿಯರ್ ಮಾಲೀಕನಿಗೆ ವಿದ್ಯಾರ್ಥಿಯೋರ್ವ ಮನಬಂದಂತೆ ಚಾಕು ಇರಿದು ಪರಾರಿಯಾದ ಘಟನೆ ಧಾರವಾಡದ ಸಪ್ತಾಪೂರದಲ್ಲಿ ನಡೆದಿದೆ.
ಕರಿಯರ್ ಮಾಲೀಕ ರಮೇಶ ಕಾಖಂಡಕಿ ಇರಿತಕೊಳ್ಳಗಾದವರು, ಕಲಬುರಗಿ ಮೂಲದ ಭೀರಪ್ಪ ಎಂಬುವವನಿಂದ ಕೃತ್ಯ. ತಲೆ, ಎದೆ ಭಾಗಕ್ಕೆ ಚೂರಿ ಇರಿದಿರುವ ವಿದ್ಯಾರ್ಥಿ. ಚೂರಿ ಇರಿತದಿಂದ ತೀವ್ರ ರಕ್ತಸ್ರಾವ, ಗಂಭೀರ ಗಾಯಗೊಂಡ ಮಾಲೀಕ. ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕತ್ಸೆ ಪಡೆಯುತ್ತಿರುವ ಮಾಲೀಕ. ಇತ್ತ ಚಾಕು ಇರಿಯುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿ ಪರಾರಿಯಾಗಿರುವ ವಿದ್ಯಾರ್ಥಿ.
ಬೃಹತ್ ಗುಡ್ಡ ಕುಸಿತ: ಬೇಗ ಮನೆಗೆ ಬಾ ಮಗ ಎಂದ ತಾಯಿ, ಮನೆಗೆ ಬಂದ ಮಗನಿಗೆ ಸಿಕ್ಕಿದ್ದು ತಾಯಿಯ ಸೀರೆ ಮಾತ್ರ!
ಕಲಬುರಗಿ ಮೂಲದವನಾದ ಭೀರಪ್ಪ ರಮೇಶ್ ಕಾಖಂಡಕಿ ಮಾಲೀಕತ್ವದ ಸ್ಫೂರ್ತಿ ಕರಿಯರ್ ಸೇರಿದ್ದಾನೆ. ಸೇರುವ ಮೊದಲು 40 ಸಾವಿರ ರೂ. ಹಣ ನೀಡಿದ ಭೀರಪ್ಪ. ಬಳಿಕ ಕೊಟ್ಟಿದ್ದ ಹಣದ ಪೈಕಿ ಎರಡು ಸಾವಿರ ರೂಪಾಯಿ ನೀಡುವಂತೆ ರಮೇಶರನ್ನ ದುಂಬಾಲು ಬಿದ್ದಿದ್ದ ಭೀರಪ್ಪ. ಈ ವೇಳೆ ನಾಳೆ ಬೆಳಗ್ಗೆ ಕೊಡ್ತೇನೆ ಈಗ ದುಡ್ಡಿಲ್ಲ ಎಂದಿದ್ದ ಮಾಲೀಕ. ಅಷ್ಟಕ್ಕೇ ಕೋಪಗೊಂಡು ರಮೇಶ್ ಮೇಲೆ ಏಕಾಏಕಿ ಚೂರಿಯಿಂದ ದಾಳಿ ಮಾಡಿ ಪರಾರಿಯಾಗಿರುವ ಭೀರಪ್ಪ
ಸದ್ಯ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಭೀರಪ್ಪನಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.