ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಬ್ಯಾಂಕ್ ಅಕೌಂಟ್ ಮಾಡಿಸಿ ವಂಚನೆ; ಉತ್ತರ ಭಾರತದ ನಾಲ್ವರ ಬಂಧನ

ಉತ್ತರ ಭಾರತದ ಕಾಲೇಜು ವಿದ್ಯಾರ್ಥಿಗಳಿಗೆ ಹಣ ನೀಡಿ ಬ್ಯಾಂಕ್ ಖಾತೆ ತೆರೆಯುವಂತೆ ಪ್ರೇರೇಪಿಸಿ, ನಂತರ ಆ ಖಾತೆಗಳನ್ನು ಬಳಸಿಕೊಂಡು ಉದ್ಯೋಗ ವಂಚನೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಉತ್ತರ ಭಾರತದಲ್ಲಿ ಬಂಧಿಸಿದ್ದಾರೆ. ವಿದ್ಯಾರ್ಥಿಗಳ ಖಾತೆಗಳಿಗೆ ಲಕ್ಷಾಂತರ ರೂಪಾಯಿ ಹಣ ವರ್ಗಾವಣೆ ಮಾಡಿಕೊಂಡು ವಂಚಿಸುತ್ತಿದ್ದರು.

North Indians Bank account fraud by name of college students in Bengaluru 4 arrested sat

ಬೆಂಗಳೂರು (ನ.15): ಉತ್ತರ ಭಾರತದಿಂದ ಬೆಂಗಳೂರಿಗೆ ಬಂದು ವಿವಿಧ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿದ್ದವರನ್ನು ಟಾರ್ಗೆಟ್ ಮಾಡಿ ಅವರಿಗೆ 2 ಸಾವಿರ ರೂ. ಹಣ ಕೊಟ್ಟು ಬ್ಯಾಂಕ್ ಖಾತೆ ಮಾಡಿಸುತ್ತಿದ್ದ ಆರೋಪಿಗಳು, ನಂತರ ಅವರ ಖಾತೆಗೆ ಹಣವನ್ನು ಹಾಕಿಸಿಕೊಂಡು ವಂಚನೆ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಹೌದು, ಬೆಂಗಳೂರು ಕಾಲೇಜು ವಿದ್ಯಾರ್ಥಿಗಳ ಹೆಸರಲ್ಲಿ ಬ್ಯಾಂಕ್ ಅಕೌಂಟ್ ಓಪನ್ ಮಾಡಿ, ಜಾಬ್ ಫ್ರಾಡ್ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ. ಕಾಲೇಜು ವಿದ್ಯಾರ್ಥಿಗಳಿಗೆ 2 ಸಾವಿರ ಕೊಟ್ಟು ಬ್ಯಾಂಕ್  ಅಕೌಂಟ್ ಓಪನ್ ಮಾಡಿಸುತ್ತಿದ್ದರು.ನಂತರ, ಅದೇ ಅಕೌಂಟ್ ಗೆ ಲಕ್ಷಾಂತರ ರೂಪಾಯಿ ಹಾಕಿಸ್ಕೊಂಡು ವಂಚಿಸುತ್ತಿದ್ದರು. ಆಗ್ನೇಯ ವಿಭಾಗದ ಸೈಬರ್ ಕ್ರೈಂ ಪೊಲೀಸರಿಂದ ನಾಲ್ವರ ಬಂಧಿಸಲಾಗಿದೆ. ಬಂಧಿತರು ಉತ್ತರ ಭಾರತ ಮೂಲದ ಅಬಯ್ ದಾನ್ ಚರಣ್, ಅರವಿಂದ್ ಕುಮಾರ್, ಪವನ್ ವಿಷ್ಣೋಯ್, ಸವಾಯಿ ಸಿಂಗ್ ಆರೋಪಿಗಳಾಗಿದ್ದಾರೆ. ಇವರು ಕೆಲವು ಮೊಬೈಲ್‌ ನಂಬರ್‌ಗಳಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ಜನರನ್ನ ಸಂಪರ್ಕಿಸಿ ವಂಚನೆ ಮಾಡುತ್ತಿದ್ದರು. 

ಇದನ್ನೂ ಓದಿ: ಬೆಂಗಳೂರು ವೈದ್ಯೆಗೆ ನಗ್ನ ಫೋಟೋ ಕೇಳಿದ ಬಸವನಗುಡಿ PSI ಕೇಸಲ್ಲಿ ಬಿಗ್ ಟ್ವಿಸ್ಟ್!

ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳಿಗೆ ಹೋಗಿ ಉತ್ತರ ಭಾರತದ ಯುವಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ನಂತರ ನಿಮಗೆ 1-2 ಸಾವಿರ ಕೊಡ್ತೀವಿ ಅಕೌಂಟ್ ಓಪನ್ ಮಾಡಿಸಿ ಎಂದು ಹೇಳುತ್ತಿದ್ದರು. ಇನ್ನು ವಿದ್ಯಾರ್ಥಿಗಳು ನಮ್ಮ ಉತ್ತರ ಭಾರತದ ಕಡೆಯವರು ಎಂದು ಆರೋಪಿಗಳ ಮಾತು ಕೇಳಿ ಬ್ಯಾಂಕ್ ಅಕೌಂಟ್ ಓಪನ್ ಮಾಡಿಕೊಳ್ಳುತ್ತಿದ್ದರು. ನಂತರ ಬ್ಯಾಂಕ್ ಅಕೌಂಟ್ ಓಪನ್‌ ಮಾಡಿಸಿ ಬ್ಯಾಂಕ್‌ನಿಂದ ಕೊಡುವ ಎಟಿಎಂ ಕಾರ್ಡ್, ಪಾಸ್ ಬುಕ್, ಚೆಕ್ ಬುಕ್ ಅನ್ನು ಇವರೇ ತೆಗೆದುಕೊಂಡು ಹೋಗುತ್ತಿದ್ದರು.

ನಂತರ, ಕೆಲವೊಂದು ಮೂಲಗಳಿಂದ ಜನರ ಮೊಬೈಲ್ ನಂಬರ್‌ಗಳನ್ನು ಪಡೆದು ಅವರಿಗೆ ಕೆಲಸ ಕೊಡಿಸುವುದಾಗಿ ಆಫರ್ ಮಾಡುತ್ತಿದ್ದರು. ದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಸುಳ್ಳು ಹೇಳಿ ಉದ್ಯೋಗ ಆಕಾಂಕ್ಷಿಗಳಿಂದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಳ್ಳುತ್ತಿದ್ದರು. ಇದೇ ರೀತಿ ಜಾಬ್ ಕೊಡಿಸುವುದಾಗಿ ವಂಚನೆಗೊಳಗಾದ ದೂರು ದಾಖಲಿಸಿಕೊಂಡಿದ್ದ ಆಗ್ನೇಯ ವಿಭಾಗದ ಸೈಬರ್ ಕ್ರೈಮ್ ಪೊಲೀಸರು ತನಿಖೆ ವೇಳೆ ವಿದ್ಯಾರ್ಥಿಯೊಬ್ಬನ ಅಕೌಂಟ್ ಗೆ ಹಣ ಹೋಗಿರೋದು ಪತ್ತೆ ಮಾಡಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತ ಪತ್ನಿ ಒಪ್ಪಿಗೆ ಮೇಲೆ ಸಂಬಂಧ ಬೆಳೆಸಿದ್ರೂ ಅದು ಬಲಾತ್ಕಾರ, ಕೋರ್ಟ್‌ ಮಹತ್ವದ ತೀರ್ಪು

ಹಣ ವರ್ಗಾವಣೆ ಆಗಿರುವ ವಿದ್ಯಾರ್ಥಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಮಾಡಿದಾಗ ಕೆಲವು ಆರೋಪಿಗಳು 1-2 ಸಾಔಇರ ರೂ. ಹಣ ಕೊಟ್ಟು ಬ್ಯಾಂಕ್ ಖಾತೆ ಮಾಡಿಸಿಕೊಂಡು ಹೋಗಿರುವುದನ್ನು ಹೇಳಿದ್ದಾರೆ. ನಂತರ ಉದಯ್ ಪುರ್, ಜೋಧ್ ಪುರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಇದೀಗ ನಾಲ್ವರು ಆರೋಪಿಗಳನ್ನು ಬಂಧಿಸಿ ಪೊಲೀಸರು ಹೆಚ್ಚಿನ ತನಿಖೆ ಮಾಡುತ್ತಿದ್ದಾರೆ. ಜೊತೆಗೆ, ಆರೋಪಿಗಳಿಂದ ಲಕ್ಷಾಂತರ ರೂಪಾಯಿ ಹಣ, ಹಲವು ಡೆಬಿಟ್ ಕಾರ್ಡ್ ಗಳು, ಬ್ಯಾಂಕ್ ಪಾಸ್ ಬುಕ್‌ಗಳನ್ನು ಸೀಜ್ ಮಾಡಲಾಗಿದೆ. ಇನ್ನು ಆಗ್ನೇಯ ವಿಭಾಗದ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

Latest Videos
Follow Us:
Download App:
  • android
  • ios