Asianet Suvarna News Asianet Suvarna News

ಯಾದಗಿರಿ: ಪತ್ನಿ ನಿಂದಿಸಿದವನ ಬರ್ಬರ ಹತ್ಯೆ

ಮಲ್ಲಪ್ಪನು ಬುರನಾ ಪತ್ನಿಯ ಬಗ್ಗೆ ಕೀಳುಮಟ್ಟದ ಭಾಷೆ ಬಳಸಿ ನಿಂದಿಸಿದ್ದಾನೆ. ಇದರಿಂದ ತಾಳ್ಮೆ ಕಳೆದ ಬುರಾನ್ ಪಕ್ಕದಲ್ಲಿದ್ದ ಕಬ್ಬಿಣದ ರಾಡ್‌ನ್ನು ತೆಗೆದುಕೊಂಡು ಮಲ್ಲಪ್ಪನ ತೆಲೆಗೆ ಬಲವಾಗಿ ಬಾರಿಸಿದ್ದಾನೆ. ಮಲ್ಲಪ್ಪನು ರಕ್ತದ ಮಡುವಿನಲ್ಲಿ ಬಿದ್ದವನನ್ನು ಆಸ್ಪತ್ರೆಗೆ ಕರೆದುತರುವ ಮಾರ್ಗ ಮಧ್ಯೆದಲ್ಲಿ ಮೃತಪಟ್ಟಿದ್ದಾನೆ. 

Man Killed for who Abused his Wife at Surapura in Yadgir grg
Author
First Published Feb 24, 2024, 10:20 PM IST

ಸುರಪುರ(ಫೆ.24):  ಪತ್ನಿಯನ್ನು ನಿಂದಿಸಿದ್ದರಿಂದ ತಾಳ್ಮೆ ಕಳೆದುಕೊಂಡ ಕೂಲಿಕಾರನೊಬ್ಬ, ಸಹ ಕೂಲಿ ಕಾರ್ಮಿಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ತಾಲೂಕಿನ ತಿಂಥಣಿ ದೇವಸ್ಥಾನ ಹತ್ತಿರ ಗುರುವಾರ ರಾತ್ರಿ ಸಂಭವಿಸಿದೆ. 

ರಾಜ್ಯದಲ್ಲಿ ನಡೆಯುವ ಜಾತ್ರೆಗಳಲ್ಲಿ ಬೇರೆ ಅಂಗಡಿಗಳಲ್ಲಿ ಬಾಗಲಕೋಟೆ ಮಹಾಲಿಂಗಪುರದ ಬುರಾನಸಾಬ ನದಾಫ್ ಮತ್ತು ಬೆಳಗಾವಿ ಜಿಲ್ಲೆ ಅಥಣಿಯ ಮಲ್ಲಪ್ಪ ಶಿವಲಿಂಗಪ್ಪ ಮರನೂರು ಕೆಲಸ ಮಾಡುತ್ತಾ ತಕ್ಕಮಟ್ಟಿಗೆ ಪರಿಚಯವಾಗಿದ್ದರು. 

ವಿವಾಹಿತೆ ಮಹಿಳೆ ಅನುಮಾನಾಸ್ಪದ ಸಾವು; ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಗಂಡನೇ ಕೊಂದನಾ?

ಮಲ್ಲಪ್ಪನು ಬುರನಾ ಪತ್ನಿಯ ಬಗ್ಗೆ ಕೀಳುಮಟ್ಟದ ಭಾಷೆ ಬಳಸಿ ನಿಂದಿಸಿದ್ದಾನೆ. ಇದರಿಂದ ತಾಳ್ಮೆ ಕಳೆದ ಬುರಾನ್ ಪಕ್ಕದಲ್ಲಿದ್ದ ಕಬ್ಬಿಣದ ರಾಡ್‌ನ್ನು ತೆಗೆದುಕೊಂಡು ಮಲ್ಲಪ್ಪನ ತೆಲೆಗೆ ಬಲವಾಗಿ ಬಾರಿಸಿದ್ದಾನೆ. ಮಲ್ಲಪ್ಪನು ರಕ್ತದ ಮಡುವಿನಲ್ಲಿ ಬಿದ್ದವನನ್ನು ಆಸ್ಪತ್ರೆಗೆ ಕರೆದುತರುವ ಮಾರ್ಗ ಮಧ್ಯೆದಲ್ಲಿ ಮೃತಪಟ್ಟಿದ್ದಾನೆ. ಮೃತರ ಪತ್ನಿ ರೂಪಾ ನೀಡಿದ ದೂರಿನನ್ವಯ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಪಿಐ ಆನಂದ ವಾಗ್ಮೋಡೆ ತಿಳಿಸಿದ್ದಾರೆ.

Follow Us:
Download App:
  • android
  • ios