Asianet Suvarna News Asianet Suvarna News

General Bipin Rawat : ಜ.ರಾವತ್‌ ಬಗ್ಗೆ ಕೀಳು ಪೋಸ್ಟ್‌ : ರಾಜ್ಯದಲ್ಲಿ ಮೊದಲ ವ್ಯಕ್ತಿ ಸೆರೆ

  •   ಜ.ರಾವತ್‌ ಬಗ್ಗೆ ಕೀಳು ಪೋಸ್ಟ್‌ : ರಾಜ್ಯದಲ್ಲಿ ಮೊದಲ ವ್ಯಕ್ತಿ ಸೆರೆ
  •   ರಾವತ್‌ಗೆ ಮೋದಿ ಗುಲಾಮ ಎಂದಿದ್ದ ವಸಂತ್‌
  •  ರಾವತ್‌ ಸಾವಿನಿಂದ ದೇಶ ಪಾರಾಗಿದೆ ಎಂದು ಬರಹ
     
Man arrested for derogatory post on General Bipin Rawat snr
Author
Bengaluru, First Published Dec 13, 2021, 7:15 AM IST

  ಬೆಂಗಳೂರು (ಡಿ.13):  ಇತ್ತೀಚಿಗೆ ತಮಿಳುನಾಡಿನಲ್ಲಿ (Tamilnadu) ಸಂಭವಿಸಿದ ವಿಮಾನ ದುರಂತದಲ್ಲಿ ಹುತಾತ್ಮರಾದ ಸಶಸ್ತ್ರ ಪಡೆಗಳ ಮುಖ್ಯಸ್ಥ ಬಿಪಿನ್‌ ರಾವತ್‌ (Bipin Rawat) ಅವರ ಬಗ್ಗೆ ಅವಹೇಳಕಾರಿಯಾಗಿ ಪೋಸ್ಟ್‌ ಹಾಕಿದ ಆರೋಪದ ಮೇರೆಗೆ ಕಿಡಿಗೇಡಿಯೊಬ್ಬನನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಮೂಲದ ಟಿ.ಕೆ.ವಸಂತ್‌ ಕುಮಾರ್‌ (TK Vasanth Kumar) ಬಂಧಿತ ವ್ಯಕ್ತಿ. ನಗರ ಪೊಲೀಸ್‌ ಆಯುಕ್ತರ ಕಚೇರಿಯ ಕಮಾಂಡ್‌ ಸೆಂಟರ್‌ನಲ್ಲಿರುವ ಸೋಷಿಯಲ್‌ ಮೀಡಿಯಾ  (Social Media) ಘಟಕದ ಸಬ್‌ ಇನ್‌ಸ್ಪೆಕ್ಟರ್‌ ದೀಪಾ ನೀಡಿದ್ದ ಮಾಹಿತಿ ಮೇರೆಗೆ ಆರೋಪಿ ಬಂಧನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹುಚ್ಚಾಟಕ್ಕೆ ಪೋಸ್ಟ್‌ : ಮೈಸೂರಿನಲ್ಲಿ (mysuru) ವಸಂತ್‌ ಕುಮಾರ್‌, ಖಾಸಗಿ ಲ್ಯಾಬ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾನೆ. ತಮಿಳುನಾಡಿನಲ್ಲಿ ಸಂಭವಿಸಿದ ವಿಮಾನ ದುರಂತದ ವಿಚಾರ ತಿಳಿದ ಆತ, ತನ್ನ ಫೇಸ್‌ಬುಕ್‌ ಖಾತೆಯಲ್ಲಿ ‘ಬಿಪಿನ್‌ ರಾವತ್‌, (Bipin Rawat) ಮೋದಿ ಗುಲಾಮಿತನದ ತಲೆಮಾರು. ಚೀನಾ ಒಂದು ಹಳ್ಳಿಯನ್ನು ನಿರ್ಮಿಸಿದಾಗಲೂ ಮೋದಿಯಂತೆ ಬುಡಬುಡಿಕೆ ಹೇಳಿಕೆ ಕೊಟ್ಟವ್ಯಕ್ತಿ. ಸದ್ಯಕ್ಕೆ ಅವರ ಕುಟುಂಬಕ್ಕೆ ಸಮಾಧಾನ ಸಿಗಲಿ. ಅವರ ಸಾವಿನಿಂದ ದೇಶವಂತೂ ಪಾರಾಗಿದೆ. ಅವರ ಜಾಗಕ್ಕೆ ನಿಜವಾದ ಒಬ್ಬ ಗಂಡು ಮಗ ಬರುತ್ತಾನೆ ಎಂಬ ನಂಬಿಕೆಯೊಂದಿಗೆ ನಾನು ಸಮಾಧಾನವಾಗಿದ್ದೇನೆ. ನಮಗೂ ಆತ್ಮಕ್ಕೂ ಸಂಬಂಧವಿಲ್ಲ. ಆದರೂ, ಹಿರಿಯರಿಗೋಸ್ಕರ ಅವರ ಆತ್ಮಕ್ಕೆ ಸಮಾಧಾನ ಸಿಗಲಿ’ ಎಂದು ಪೋಸ್ಟ್‌ (Post) ಹಾಕಿದ್ದ.

ಈ ಪೋಸ್ಟ್‌ ಬಗ್ಗೆ ಹಲವು ಜನರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಅವಹೇಳನಕಾರಿ ಬರಹಗಳನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು, ಬಿಪಿನ್‌ ರಾವ್‌ ಸಾವಿನ ಬಗ್ಗೆ ಆಕ್ಷೇಪಾರ್ಹ ಪೋಸ್ಟ್‌ ಹಾಕುವ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ಸೂಚಿಸಿದ್ದರು. ಈ ಸೂಚನೆ ಬೆನ್ನಲ್ಲೇ ಕಾರ್ಯಚರಣೆಗಿಳಿದ ಪೊಲೀಸರು, ಮೈಸೂರಿನಲ್ಲಿ ವಸಂತ್‌ ಕುಮಾರ್‌ನನ್ನು ಪತ್ತೆ ನಗರಕ್ಕೆ ಕರೆ ತಂದಿದು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಬಳಿಕ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೂರು ಮಂದಿ ವಿರುದ್ಧ ಕೇಸ್ :   ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ (Bipin Rawat) ಹಾಗೂ ಇತರೆ 12 ಮಂದಿ ತಮಿಳುನಾಡಿನ ಕೂನೂರು ಸಮೀಪ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ (Helicopter Crash) ಮೃತಪಟ್ಟ ಘಟನೆ ದೇಶಾದ್ಯಂತ ಜನರಲ್ಲಿ ಅತೀವ ದುಃಖ ಮೂಡಿಸಿದೆ. ಆದರೆ ಅನೇಕ ಕಿಡಿಗೇಡಿಗಳು ಈ ಸಾವುಗಳನ್ನು ಸಂಭ್ರಮಿಸಿದ ವರದಿಗಳಾಗಿವೆ. ಕರ್ನಾಟಕದಲ್ಲೂ (Karnataka) ವಿಕೃತ ಮನಸ್ಸುಗಳು ಸಂಭ್ರಮಿಸಿದ್ದು, ಇದೀಗ ಅವರ ವಿರುದ್ಧ ಕೇಸ್ ಬುಕ್ ಆಗಿದೆ.

ಹೌದು.. ಹೆಲಿಕಾಪ್ಟರ್‌ ದುರಂತದಲ್ಲಿ ಅಸುನೀಗಿದ ಮೂರು ಸೇನಾಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌, ಅವರ ಪತ್ನಿ ಹಾಗೂ ಇತರ ಸೇನಾಧಿಕಾರಿಗಳ ಸಾವನ್ನು ಸಂಭ್ರಮಿಸುವ ವಿಕೃತ ಮನಸ್ಥಿತಿಗಳ ವಿರುದ್ಧ ರಾಜ್ಯದಲ್ಲೂ ಮೊದಲ ಬಾರಿಗೆ ಪ್ರಕರಣ (Case) ದಾಖಲಾಗಿದೆ. ಸೇನಾಧಿಕಾರಿಗಳ ಸಾವಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದ ಮೂವರ ವಿರುದ್ಧ ಮಂಗಳೂರು ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.

News Hour: ಸಕಲ ಗೌರವಗಳೊಂದಿಗೆ ರಾವತ್ ಅಂತ್ಯಕ್ರಿಯೆ, ಸಾವು ಸಂಭ್ರಮಿಸುವ ಬುದ್ದಿಗೇಡಿಗಳು ಇದ್ದಾರೆ!

ಸುಶಾಂತ್‌ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಪಾಂಡೇಶ್ವರ ಠಾಣೆ ಪೊಲೀಸರು ಬೆಂಗಳೂರು, ಮಂಗಳೂರು ಮತ್ತು ಕಾರ್ಕಳ ಮೂಲದ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರಾವತ್‌ ಸಾವನ್ನು ಸಂಭ್ರಮಿಸಿರುವ ಆರೋಪಿಗಳು, ‘ದೇಶ ಪಾರಾಗಿದೆ’, ರಾಷ್ಟ್ರೀಯ ಭದ್ರತಾ ಸಲಹೆಗಾರ ‘ಅಜಿತ್‌ ದೋವಲ್‌ ಸರದಿ ಯಾವಾಗ?’ ಎಂಬರ್ಥದ ಪೋಸ್ಟ್‌ಗಳು ಸೇರಿ ಹಲವು ಅವಹೇಳನಕಾರಿ ಪೋಸ್ಟ್‌ಗಳನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ.

ಆರೋಪಿಗಳ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 505(1), 505(1)(ಬಿ), 505(2) ಅಡಿ (ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿ ನೆಮ್ಮದಿ ಭಂಗ ತರುವುದು, ವದಂತಿ ಅಥವಾ ಸುಳ್ಳು ಸುದ್ದಿ ಪ್ರಸಾರ/ವರದಿ ಪ್ರಕಟಿಸಿ ದಂಗೆಗೆ ಪ್ರಚೋದನೆ, ರಾಷ್ಟ್ರದ್ರೋಹ ಮತ್ತು ಸಾರ್ವಜನಿಕರಲ್ಲಿ ದ್ವೇಷಭಾವ ಕೆರಳಿಸುವುದು) ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಶೀಘ್ರ ವಶಕ್ಕೆ ಪಡೆಯಲಾಗುವುದು ಎಂದು ನಗರ ಪೊಲೀಸ್‌ ಆಯುಕ್ತ ಶಶಿಕುಮಾರ್‌ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸೇನಾಧಿಕಾರಿಗಳ ಸಾವನ್ನು ಸಂಭ್ರಮಿಸುವ ವಿಕೃತ ಮನಸ್ಸುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಶುಕ್ರವಾರವಷ್ಟೇ ಪೊಲೀಸರಿಗೆ ಸೂಚನೆ ನೀಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಈ ದುರಂತದ ಕುರಿತಾದ ಮಾಧ್ಯಮ ವರದಿಗಳಿಗೆ ಖುಷಿಯ ಎಮೋಜಿಗಳನ್ನು, ಕಾಮೆಂಟ್‌ಗಳನ್ನು ಹಾಕಿದ್ದಾರೆ.

ಇಂತಹ ಪ್ರಕರಣಗಳ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಅಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ. ಇನ್ನು ಕೆಲವು ರಾಜ್ಯಗಳಲ್ಲಿ ಅನೇಕರನ್ನು ಬಂಧಿಸಲಾಗಿದೆ.

ಬಿಪಿನ್ ರಾವತ್ ಕುರಿತು ಅವಹೇಳನಾಕಾರಿ ಫೇಸ್‌ಬುಕ್ ಪೋಸ್ಟ್ ಮಾಡಿದ್ದ ಆರೋಪಡಿ ಗುಜರಾತ್‌ನ 44 ವರ್ಷದ ಶಿವ ಭಾಯ್ ಅಹಿರ್ ಎಂಬ ವ್ಯಕ್ತಿಯನ್ನು ಅಹ್ಮದಾಬಾದ್ ಸೈಬರ್ ಅಪರಾಧ ಘಟಕದ ಪೊಲೀಸರು ಗುರುವಾರ ಬಂಧಿಸಿದ್ದಾರೆ.

Follow Us:
Download App:
  • android
  • ios