Asianet Suvarna News Asianet Suvarna News

ತುಂಡುಡುಗೆ ಧರಿಸುತ್ತಾಳೆಂದು ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಪತಿ!

ತುಂಡುಡುಗೆ ಧರಿಸಿ ತಿರುಗಾಡುತ್ತಾಳೆಂದು ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ದುರ್ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.

Jeevan the husband who killed his wife for a trivial reason at hassan crime rav
Author
First Published Dec 31, 2023, 11:54 AM IST

ಅಹಾಸನ (ಡಿ.31):  ತುಂಡುಡುಗೆ ಧರಿಸಿ ತಿರುಗಾಡುತ್ತಾಳೆಂದು ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ದುರ್ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.

ಜ್ಯೋತಿ (22) ಪತಿಯಿಂದ ಕೊಲೆಯಾದ ಮಹಿಳೆ. ಜೀವನ್ ಹತ್ಯೆಗೈದಿರೋ ಆರೋಪಿ ಪತಿ. ಧಾರವಾಡ ಮೂಲದ ಜ್ಯೋತಿ, ಹಾಸನದ ಜೀವನ್ ಒಂದೂವರೆ ವರ್ಷದ ಹಿಂದೆಯಷ್ಟೇ ಪ್ರೀತಿಸಿ ಮದುವೆಯಾಗಿದ್ದರು. ಜೀವನ್-ಜ್ಯೋತಿ ಪತಿ-ಪತ್ನಿಯರ ಹೆಸರು ಎಷ್ಟೊಂದು ಮುದ್ದಾಗಿವೆಯಲ್ಲವಾ? ಸಂಸಾರವೂ ಸುಖವಾಗಿರಬೇಕಿತ್ತು. ಆದರೆ ಒಂದೇ ವರ್ಷಕ್ಕೆ ದುರಂತ ಅಂತ್ಯ ಕಂಡಿದೆ.

ಮಾನ್ಯ ಸಿದ್ದರಾಮಯ್ಯ ಅವರಿಗೆ ಸಾಷ್ಟಾಂಗ ನಮಸ್ಕಾರಗಳು: ಸಹೋದರನ ಬಂಧಿಸಿದ್ದಕ್ಕೆ ಸಂಸದ ಪ್ರತಾಪ್ ಸಿಂಹ ಭಾವುಕ ನುಡಿ

ಪತ್ನಿ ತುಂಡುಡುಗೆ ಧರಿಸಿದ್ದೇ ಮುಳುವಾಯ್ತು!

ಪತ್ನಿ ಮಾಡ್ರನ್ ಡ್ರೆಸ್ ಧರಿಸಿತ್ತಿರುವುದು ಪತಿ ಜೀವನ್‌ಗೆ ಸಹಿಸಲಾಗುತ್ತಿರಲಿಲ್ಲ. ಮದುವೆಯಾದ ಬಳಿಕ ಪತ್ನಿಯಾದವಳು ಸಂಪ್ರಾದಾಯಿಕ ಉಡುಗೆ ಧರಿಸಬೇಕು ಎನ್ನುತ್ತಿದ್ದ. ಈ ಕಾರಣಕ್ಕೆ ಪತ್ನಿ ತುಂಡುಡುಗೆ ತೊಟ್ಟು ಹೊರಗೆ ಹೊರಟಾಗಲೆಲ್ಲ ಪತ್ನಿಯೊಂದಿಗೆ ಜಗಳಕ್ಕೆ ಇಳಿಯುತ್ತಿದ್ದ ಪತಿ ಜೀವನ್. ಮದುವೆಯಾದ್ರೂ ತೊಡೆ ಕಾಣಿಸುವಂಥ ತುಂಡುಡುಗೆ ಧರಿಸಿ ಹೊರಗೆ ಓಡಾಡುವುದು ಏನಿದೆ ಅಂತ ವಾದ ಮಾಡುತ್ತಿದ್ದ ಪತಿ ಜೀವನ್. ತುಂಡುಡುಗೆ ಪತಿಯ ಕೋಪಕ್ಕೆ ಕಾರಣವಾಗಿದೆ. ಸಂಸಾರ ಹಾಳಾಗುವ ಹಂತಕ್ಕೆ ಬರಬಹುದೆ ಊಹಿಸದ ಪತ್ನಿ ಜ್ಯೋತಿ. ಮಾಡ್ರನ್ ಡ್ರಸ್ ಧರಿಸುವುದುನ್ನು ಮುಂದುವರಿಸಿದ್ದಾಳೆ. ಇದರಿಂದ ದಿನೇದಿನೆ ಪತ್ನಿ ಮೇಲೆ ಕೋಪ ಹೆಚ್ಚಾಗುತ್ತಲೇ ಹೋಗಿದೆ.

ಕೋಲಾರ: ಇಬ್ಬರು ಮಕ್ಕಳಿದ್ದ ಆಂಟಿ ಜತೆ ಅಕ್ರಮ ಸಂಬಂಧ, ಒಂದೇ ಮರಕ್ಕೆ ನೇಣಿಗೆ ಶರಣಾದ ಜೋಡಿ..!

ಎಂದಿನಂತೆ ತುಂಡುಡುಗೆ ಧರಿಸಿ ಹೊರಗಡೆ ಹೊರಟಿದ್ದ ಪತ್ನಿಯನ್ನ ತಡೆದಿರುವ ಪತಿ ಜೀವನ್. ಇವತ್ತು ನಾನೇ ಡ್ರಾಪ್  ಮಾಡುವುದಾಗಿ ಪತ್ನಿಯನ್ನು ಕರೆದೊಯ್ದಿದ್ದಾನೆ. ಪತ್ನಿಯನ್ನು ಮುಗಿಸಲು ಸ್ಕೆಚ್ ಹಾಕಿಯೇ ಬೈಕ್‌ ಮೇಲೆ ಕರೆದೊಯ್ದಿರುವ ಪತಿ. ಅರಣ್ಯಪ್ರದೇಶಕ್ಕೆ ಕರೆದೊಯ್ದು ಚಾಕುವಿನಿಂದ ಕತ್ತು ಕುಯ್ದು ಬರ್ಬರವಾಗಿ ಹತ್ಯೆಗೈದಿರುವ ಆರೋಪಿ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Follow Us:
Download App:
  • android
  • ios