Asianet Suvarna News Asianet Suvarna News

ಬೆಂಗಳೂರಿನಲ್ಲಿ ಭೀಕರ ಕೊಲೆ; ಅವೈಡ್ ಮಾಡಿದಾಳೆಂದು ಹತ್ಯೆ ಮಾಡಿದ ಪಾಪಿ!

ಅನೈತಿಕ ಸಂಬಂಧ ವಿಚಾರಕ್ಕೆ ಮಹಿಳೆಯೋರ್ವಳನ್ನು ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಬೆಂಗಳೂರಿನ ಜೆಜೆ ನಗರದ ನಾಲ್ಕನೇ ಕ್ರಾಸ್‌ನಲ್ಲಿ ನಡೆದಿದೆ. ಪರ್ವಿನ್ ತಾಜ್ ಕೊಲೆಯಾದ ಮಹಿಳೆ.

illicit relationship woman terrible murder by junaid at bengaluru rav
Author
First Published Dec 11, 2023, 8:47 AM IST

ಬೆಂಗಳೂರು (ಡಿ.11): ಅನೈತಿಕ ಸಂಬಂಧ ವಿಚಾರಕ್ಕೆ ಮಹಿಳೆಯೋರ್ವಳನ್ನು ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಬೆಂಗಳೂರಿನ ಜೆಜೆ ನಗರದ ನಾಲ್ಕನೇ ಕ್ರಾಸ್‌ನಲ್ಲಿ ನಡೆದಿದೆ.

ಪರ್ವಿನ್ ತಾಜ್ ಕೊಲೆಯಾದ ಮಹಿಳೆ. ಮಹಮ್ಮದ್ ಜುನೈದ್ ಎಂಬಾತನಿಂದ ನಡೆದಿರೋ ಕೊಲೆ.  ಆರೋಪಿ ಜುನೈದ್ ಹಾಗೂ ಮೃತ ಮಹಿಳೆ ಇಬ್ಬರೂ ಸಂಬಂಧಿಗಳು. ಸಣ್ಣಪುಟ್ಟ ವಿಚಾರಕ್ಕೂ ಜಗಳ ಆಗ್ತಿದ್ರಿಂದ ಕೆಲ ತಿಂಗಳುಗಳಿಂದ ಪತ್ನಿಯಿಂದ ದೂರವಾಗಿದ್ದ ಜುನೈದ್. ಪತ್ನಿ ದೂರವಾದ ಬಳಿಕ ಮಾನಸಿಕವಾಗಿ ನೊಂದಿದ್ದ ಆರೋಪಿ ಜುನೈದ್. ಈ ವೇಳೆ ಸಂಬಂಧಿ ಪರ್ವಿನ್ ತಾಜ್ ಹತ್ತಿರವಾಗಿದ್ದಳು. ಆದರೆ ಏನಾಯ್ತೋ ಅವಳು ಕೂಡ ಜುನೈದ್‌ನನ್ನ ಅವೈಡ್ ಮಾಡುತ್ತಿದ್ದಳು. ಈ ವಿಚಾರಕ್ಕೆ ಪರ್ವಿನ್ ತಾಜ್ ಜೊತೆಗೂ ಜಗಳ ಮಾಡಿಕೊಂಡಿದ್ದ ಜುನೈದ್, 

ಒಂದು ಎಕರೆ ಜಾಗಕ್ಕಾಗಿ ತಾಯಿಯ ರುಂಡ ಕತ್ತರಿಸಿದ ಮಗ, ತಲೆಯನ್ನು ಕೈಯಲ್ಲಿ ಹಿಡಿದು ತೋಟದಲ್ಲಿ ಕುಳಿತಿದ್ದ ಆರೋಪಿ!

ಪರ್ವಿನ್ ತಾಜ್ ಮನೆಯಲ್ಲಿ ಒಬ್ಬಳೇ ಇರುವುದನ್ನ ನೋಡಿಕೊಂಡು ಚಾಕುವಿನೊಂದಿಗೆ ಹೋಗಿದ್ದ ಆರೋಪಿ. ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಚಾಕುವಿನಿಂದ ಇರಿದುಕೊಂದಿದ್ದಾನೆ. ಬಳಿಕ ಅಲ್ಲಿಂದ ತಲೆಮರೆಸಿಕೊಂಡಿರೋ ಆರೋಪಿ. ಪರ್ವಿನ್ ತಾಜ್ ಮೃತ ದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಜುನೈದ್‌ಗಾಗಿ ಹುಡುಕಾಟ ನಡೆಸಿರುವ ಪೊಲೀಸರು. 

ಬಳ್ಳಾರಿ: ಇದು ದೃಶ್ಯಂ ಸಿನಿಮಾದ ಮಾದರಿಯ ಮರ್ಡರ್ ಸ್ಟೋರಿ, 4 ತಿಂಗಳ ಬಳಿಕ ಆರೋಪಿ ಅರೆಸ್ಟ್‌

ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ! 

ವಿಜಯಪುರ: ಯುವಕನ ತಲೆ ಮೇಲೆ ಕಲ್ಲು ಹಾಕಿ ಹತ್ಯೆ ಮಾಡಿದ ಘಟನೆ ಭಾನುವಾರ ನಗರದ ಝಂಡಾ ಕಟ್ಟೆ ಪ್ರದೇಶದಲ್ಲಿ ನಡೆದಿದೆ. ನಗರದ ಸಾಹಿಲ್ ಭಾಂಗಿ (21) ಹತ್ಯೆಯಾದವ. ಈತನ ಮೇಲೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಇವೆ. ಹತ್ಯೆಗೆ ನಿಖರ ಕಾರಣ ತಿಳಿದಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ ಭಗವಾನ್ ಪರಿಶೀಲಿಸಿದರು. ಬಳಿಕ ಮಾತಾಡಿದ ಅವರು, ಶನಿವಾರ ತಡರಾತ್ರಿಯಿಂದ ಭಾನುವಾರ ಬೆಳಗಿನ‌ ಜಾವದ ಮಧ್ಯದ ಅವಧಿಯಲ್ಲಿ ಈ ಕೃತ್ಯ ನಡೆದಿದೆ. ಹತ್ಯೆಗೆ ಕಾರಣ ಪತ್ತೆ ಮಾಡುತ್ತೇವೆ. ಕುಟುಂಬ ಸದಸ್ಯರು ನೀಡುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಿದ್ದೇವೆ ಎಂದರು. ಈ ಕುರಿತು ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios