Asianet Suvarna News Asianet Suvarna News

ಕುಡಿತದ ಜೊತೆ ಅಶ್ಲೀಲ ವೀಡಿಯೋ ವೀಕ್ಷಣೆ ಚಟ: ಮಗಳ ಮೇಲೆಯೇ ರೇಪ್ ಯತ್ನ: ವಿರೋಧಿಸಿದ್ದಕ್ಕೆ ಕೊಲೆ

ಕುಡಿತದ ಚಟದ ಜೊತೆ, ಅಶ್ಲೀಲ ಸಿನಿಮಾ ವೀಕ್ಷಣೆಗೂ ದಾಸನಾಗಿದ್ದ ಕಾಮುಕನೋರ್ವ 12 ವರ್ಷದ ಮಗಳ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿ, ಆಕೆ ವಿರೋಧಿಸಿದಾಗ ಮಗಳೆಂಬುದನ್ನು ನೋಡದೇ ಆಕೆಯನ್ನು ಕೊಲೆ ಮಾಡಿದ ಹೇಯ ಘಟನೆ ನೆರೆಯ ತೆಲಂಗಾಣದಲ್ಲಿ ನಡೆದಿದೆ.  

Father killed daughter for resisting rape in Telangana father had Addiction of alcohol and watching obscene video akb
Author
First Published Jun 21, 2024, 7:02 PM IST

ಹೈದರಾಬಾದ್‌: ಕುಡಿತದ ಚಟದ ಜೊತೆ, ಅಶ್ಲೀಲ ಸಿನಿಮಾ ವೀಕ್ಷಣೆಗೂ ದಾಸನಾಗಿದ್ದ ಕಾಮುಕನೋರ್ವ 12 ವರ್ಷದ ಮಗಳ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿ, ಆಕೆ ವಿರೋಧಿಸಿದಾಗ ಮಗಳೆಂಬುದನ್ನು ನೋಡದೇ ಆಕೆಯನ್ನು ಕೊಲೆ ಮಾಡಿದ ಹೇಯ ಘಟನೆ ನೆರೆಯ ತೆಲಂಗಾಣದಲ್ಲಿ ನಡೆದಿದೆ.  ಈ ಕುಟುಂಬವೂ 15 ದಿನಗಳ ಹಿಂದಷ್ಟೇ ತೆಲಂಗಾಣದ ಮಹುಬಬಾದ್ ಜಿಲ್ಲೆಯಿಂದ ಹೈದರಾಬಾದ್‌ನ ಮಿಯಾಪುರಕ್ಕೆ ಬಂದು ನೆಲೆಸಿತ್ತು. ಜೂನ್ 7 ರಂದು 12 ವರ್ಷದ ಹುಡುಗಿ  ತಾನು ಮತ್ತೆ ಮಹುಬಬಾದ್‌ಗೆ ಹೋಗಬೇಕು ಎಂದು ಹೇಳಿ ಮನೆಬಿಟ್ಟು  ಹೋಗಿದ್ದಾಳೆ. ಹೀಗೆ ಮನೆಬಿಟ್ಟು ಹೋದ ಬಾಲಕಿ ಸ್ಥಳೀಯ ಕಿರಾಣಿ ಅಂಗಡಿಯಲ್ಲಿ ಅಪ್ಪನಿಗೆ ಕಾಣಿಸಿಕೊಂಡಿದ್ದು, ಆಕೆಯನ್ನು ಮರಳಿ ಮನೆಗೆ ಕರೆತಂದ ಅಪ್ಪ ಆಕೆಯನ್ನು ಆಕೆಯ ತಾಯಿಯ ಬಳಿ ಕರೆದೊಯ್ಯುವುದಾಗಿ ಹೇಳಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. 

ನಂತರ ಆತ ತನ್ನ ಮಗಳನ್ನು ಸಮೀಪದ ಕಾಡಿರುವ ಪ್ರದೇಶಕ್ಕೆ ಕರೆದೊಯ್ದಿರುವುದು ಸಿಸಿಟಿವಿಯಲ್ಲಿ ಸೆರೆ ಆಗಿದೆ.  ಅಲ್ಲಿ ಆತ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಈ ವೇಳೆ ಕಿರುಚಿಕೊಂಡ 12 ವರ್ಷದ ಬಾಲಕಿ ವಿಚಾರವನ್ನು ಅಮ್ಮನಿಗೆ ಹೇಳುವುದಾಗಿ ಬೆದರಿಸಿದ್ದಾಳೆ. ಈ ವೇಳೆ ಆತ ಆಕೆಯನ್ನು ನೆಲಕ್ಕೆ ಕೆಡವಿದ್ದು, ಇದರಿಂದ ಆಕೆ ಗಾಯಗೊಂಡಿದ್ದಾಳೆ, ಜೊತೆಗೆ ಆಕೆಗೆ ರಕ್ತಸ್ರಾವ ಶುರುವಾಗಿದೆ. ನಂತರ ಆಕೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ.

 ಒಂದು ವರ್ಷದಿಂದ ಮಗಳ ಮೇಲೆ ಅತ್ಯಾಚಾರ ಎಸಗುತ್ತಿದ್ದ ಪಾಪಿ ತಂದೆ ಅರೆಸ್ಟ್‌!

11 ನಿಮಿಷಗಳ ನಂತರ ಆತ ಆ ಪ್ರದೇಶಕ್ಕೆ ಮರಳಿ ಬಂದಿದ್ದು, ಆಕೆ ಸತ್ತಿದ್ದಾಳೋ ಇಲ್ಲವೋ ಎಂಬುದನ್ನು ಪರೀಕ್ಷಿಸಿದ್ದಾನೆ.  ನಂತರ ಆತ ಮನೆಗೆ ಹೋಗಿದ್ದು, ತನ್ನ ಕೆಂಪು ಬಣ್ಣದ ಶರ್ಟ್ ಬದಲಿಸಿ ಬಿಳಿ ಬಣ್ಣದ ಶರ್ಟ್‌ನ್ನು ಹಾಕಿಕೊಂಡಿದ್ದಾನೆ. ಬಳಿಕ ಪತ್ನಿಗೆ ಕರೆ ಮಾಡಿದ ಆತ ಮಗಳು ನಾಪತ್ತೆಯಾಗಿದ್ದಾಳೆ ಎಂದು ಹೇಳಿದ್ದಾನೆ. ಇದಾಗಿ ಒಂದು ವಾರದ ನಂತರ ಅಂದರೆ ಜೂನ್ 13 ರಂದು ಬಾಲಕಿಯ ಕೊಳೆತ ಶವ ಮಿಯಾಪುರದ ಕಾಡಿನಲ್ಲಿ ಪತ್ತೆಯಾಗಿದೆ. ಬಳಿಕ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಗಮನಿಸಿದಾಗ ಅದರಲ್ಲಿ ಕೊಲೆಗಾರನ ಸುಳಿವು ಸಿಕ್ಕಿದೆ. 

ಬುದ್ಧಿಮಾಂದ್ಯ ಮಗಳ ಮೇಲೆ ತಂದೆಯಿಂದಲೇ ನಿರಂತರ ಅತ್ಯಾಚಾರ; ಗರ್ಭಾವತಿಯಾದ ಬಳಿಕ ಪ್ರಕರಣ ಬಯಲಿಗೆ!

ಸಿಸಿಟಿವಿಯಲ್ಲಿ ಕಾಮುಕ ತಂದೆಯೇ ಮಗಳನ್ನು ಅರಣ್ಯಕ್ಕೆ ಕರೆದೊಯ್ಯುತ್ತಿರುವ ದೃಶ್ಯ ಕಂಡುಬಂದಿದೆ. ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಮಗಳ ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಮಗಳ ಕೊಲೆ ಮಾಡಿದ ನಂತರ ತಾನು ಮಗಳ ಕೊಲೆ ಮಾಡಿರುವುದಾಗಿ ಆರೋಪಿ ತನ್ನ ಗ್ರಾಮದ ಆದಿವಾಸಿ ಸಮುದಾಯದ ವ್ಯಕ್ತಿಯೊಬ್ಬನಿಗೆ ತಿಳಿಸಿದ್ದು, ಆತ ಪೊಲೀಸರಿಗೆ ಶರಣಾಗುವಂತೆ ತಿಳಿಸಿದ್ದಾನೆ. ಅದೇ ಸಮಯಕ್ಕೆ ಪೊಲೀಸರು ಕೂಡ ಬಾಲಕಿಯ ಕೊಲೆಯಲ್ಲಿ ಆತನ ಪಾತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ನಂತರ ಬಂಧಿಸಿದ್ದಾರೆ ಎಂದು ಘಟನೆಗೆ ಸಂಬಂಧಿಸಿದಂತೆ ಎಸಿಪಿ ನರಸಿಂಹ ರಾವ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios