ವಿಶಾಖಪಟ್ಟಣ(ನ. 04)  ಗೃಹ ಸಚಿವರಾದ  ಮೆಕಥೋಟಿ ಸುಚಿತ್ರ  ವಿದ್ಯಾರ್ಥಿ ವರಲಕ್ಷ್ಮೀ ಕೊಲೆ ಪ್ರಕರಣದ ವಿಚಾರಣೆ ಜವಾಬ್ದಾರಿಯನ್ನು ದಿಶಾ ಪೊಲೀಸ್ ಸ್ಟೇಶನ್ ಸಿಬ್ಬಂದಿಗೆ ವಹಿಸಿದ್ದಾರೆ.

ಅಖಿಲ್ ಸಾಯಿ ಎಂಬಾತ ವಿದ್ಯಾರ್ಥಿನಿ ಕೊಲೆ ಮಾಡಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದಾನೆ.  ಬಾಲಕಿ ಸಾವಿನ ಮೂರು ಗಂಟೆ ಅವಧಿಯೊಳಗೆ ಆರೋಪಿಯನ್ನು ಬಂಧನ ಮಾಡಲಾಗಿತ್ತು. ನಿರ್ಜನ ಪ್ರದೇಶಕ್ಕೆ ಬಾಲಕಿ ಕರೆದುಕೊಂಡು  ಹೋಗಿ ಹತ್ಯೆ ಮಾಡಿದ್ದ. ವಿಜಾಗ್ ನ ಶ್ರೀನಗರದಲ್ಲಿ ನಡೆದ ಘಟನೆ ಇಡೀ   ರಾಜ್ಯವನ್ನು ಬೆಚ್ಚಿಬೀಳಿಸಿತ್ತು.

ಗೃಹ ಸಚಿವೆ ಸಂತ್ರಸ್ತೆಯ ಮನೆಗೆ  ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಹತ್ತು ಲಕ್ಷ ರೂ. ಗಳ ಪರಿಹಾರ ಘೋಷಣೆ ಮಾಡಿದ್ದರು.  ಈ ಪ್ರಕರಣದ ಬಗ್ಗೆ ಮಾತನಾಡಿದ್ದ ಆಂಧ್ರ ಪ್ರದೇಶ ಸಿಎಂ ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗುತ್ತದೆ ಎಂದು ತಿಳಿಸಿದ್ದರು.

ದಿಶಾ ಅತ್ಯಾಚಾರಿಗಳ ಎನ್‌ಕೌಂಟರ್ ಮಾಡಿದ್ದ ಕನ್ನಡಿಗ ಆಫೀಸರ್

ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಆರೋಪಿಗೆ ಸಹಾಯ ಮಾಡಿದವರನ್ನು ಪತ್ತೆ ಹಚ್ಚಿ ಶಿಕ್ಷೆ ನೀಡಬೇಕು.   ಸಂತ್ರಸ್ತೆಯ ಮನೆಗೆ ಗೃಹ ಸಚಿವೆ ಭೇಟಿ ನೀಡಿದಾಗ ಅವರ ಜತೆ ದಿಶಾ ಆಕ್ಟ್ ಸ್ಪೆಶಲ್ ಆಫೀಸರ್ ಕೃತಿಕಾ ಶುಕ್ಲಾ, ಐಪಿಎಸ್ ಅಧಿಕಾರಿ ದೀಪಿಕಾ ಶುಕ್ತಾ, ವಿಶಾಖಾ ಡಿಸಿಪಿ ಐಶ್ವರ್ಯಾ ರಸ್ಟೋಗಿ ಇದ್ದರು. 

ಹೈದರಾಬಾದ್‌ನ ಪಶುವೈದ್ಯೆ ದಿಶಾಳನ್ನು ನವೆಂಬರ್ 26 ರಂದು ನಾಲ್ವರು ಕಾಮುಕರು ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಲ್ಲದೇ ದಿಶಾಳನ್ನು ಭೀಕರವಾಗಿ ಕೊಲೆ ಮಾಡಿದ್ದರು. ನವೆಂಬರ್ 28 ರಂದು ಆರೋಪಿಗಳನ್ನು ಬಂಧಿಸಲಾಗಿತ್ತು. ಡಿಸೆಂಬರ್ 6 ರಂದು ಸ್ಥಳ ಮಹಜರಿಗೆ ಕರೆದುಕೊಂಡು ಹೋದ ಸಂದರ್ಭ ಎನ್‌ಕೌಂಟರ್‌ನಲ್ಲಿ ಆರೋಪಿಗಳು ಹತರಾಗಿದ್ದರು.

ಆಂಧ್ರ ಪ್ರದೇಶ ದಿಶಾ ಕಾನೂನು-2019' ಹೆಸರಿನ ಮಸೂದೆಯನ್ನು ಕಳೆದ ವರ್ಷ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಿ ಕಾಯ್ದೆ ಸ್ವರೂಪ ನೀಡಲಾಗಿತ್ತು. ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರಿಗೆ, ಮಕ್ಕಳಿಗೆ ತ್ವರಿತ ನ್ಯಾಯದಾನ, ದೋಷಿಗಳಿಗೆ ಮರಣದಂಡನೆವೆರೆಗೆ ಶಿಕ್ಷೆ ಎಂದು ಹೇಳಲಾಗಿದೆ.  ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಜಗನ್ ಮೋಹನ ರೆಡ್ಡಿ ಈ ಬದಲಾವಣೆ ಹೆಜ್ಜೆ ಇಟ್ಟಿದ್ದರು.