Asianet Suvarna News Asianet Suvarna News

ಡ್ರಗ್‌ಗೆ ದಾಸನಾಗಿ ಮನೆಯವರಿಗೆಲ್ಲಾ ಕಿರುಕುಳ ನೀಡುತ್ತಿದ್ದ ಅಣ್ಣನ ಹತ್ಯೆ

ಡ್ರಗ್‌ಗೆ ದಾಸನಾಗಿದ್ದ ಅಣ್ಣನ ಕಿರುಕುಳಕ್ಕೆ ಬೇಸತ್ತು ತಮ್ಮನೋರ್ವ ಆತನನ್ನು ಕೊಂದು ಶವವನ್ನು ತಂದೆಯ ಸಹಾಯದಿಂದ ದೂರ ಎಸೆದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. 

Delhi Younger brother killed his elder brother after he demanding and torturing family for money to his drug addiction akb
Author
First Published Dec 16, 2022, 7:59 PM IST

ದೆಹಲಿ: ಡ್ರಗ್‌ಗೆ ದಾಸನಾಗಿದ್ದ ಅಣ್ಣನ ಕಿರುಕುಳಕ್ಕೆ ಬೇಸತ್ತು ತಮ್ಮನೋರ್ವ ಆತನನ್ನು ಕೊಂದು ಶವವನ್ನು ತಂದೆಯ ಸಹಾಯದಿಂದ ದೂರ ಎಸೆದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಡ್ರಗ್ ಹಾಗೂ ದುಶ್ಚಟಗಳಿಗೆ ದಾಸನಾಗಿದ್ದ ಅಣ್ಣ ಮನೆಯವರಿಗೆ ಸದಾ ಕಾಲ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದ. ಅಣ್ಣನ ಈ ದುಶ್ಚಟದಿಂದಾಗಿ ಮನೆ ಮಂದಿಗೆ ಯಾರಿಗೂ ನೆಮ್ಮದಿ ಇರಲಿಲ್ಲ. ಮಾದಕ ವಸ್ತುಗಳಿಗೆ ದಾಸನಾಗಿದ್ದ ಆತ ಯಾವಾಗಲೂ ಹಣಕ್ಕಾಗಿ ಪೋಷಕರನ್ನು ಹಿಂಸಿಸುತ್ತಿದ್ದ, ಈತನ ಕಿರುಕುಳದಿಂದ ತಾಳ್ಮೆಗೆಟ್ಟ ಕಿರಿಯ ಸಹೋದರ ಆತನನ್ನು ಯಮಪುರಿಗೆ ಅಟ್ಟಿದ್ದಾನೆ. 

ದೆಹಲಿಯ ಮಂಗೊಲಪುರಿಯಲ್ಲಿ (Mangolpuri) ಈ ಆಘಾತಕಾರಿ ಘಟನೆ ನಡೆದಿದೆ. ಕೊಲೆಯಾದ ಯುವಕನನ್ನು ಜೈಕಿಶನ್ (Jaikishan) ಎಂದು ಗುರುತಿಸಲಾಗಿದೆ. 23 ವರ್ಷದ ಲಲಿತ್‌ಕುಮಾರ್ ಕೊಲೆ ಮಾಡಿದ ಸಹೋದರ. ಸಹೋದರನ ಕೊಲೆ ಮಾಡಿದ ಬಳಿಕ ಲಲಿತ್‌ಕುಮಾರ್, ಶವವನ್ನು ಪ್ಲಾಸ್ಟಿಕ್ ಹಾಳೆಯಲ್ಲಿ (plastic sheet) ಸುತ್ತಿ ತನ್ನ ತಂದೆಯ ಸಹಾಯದಿಂದ ತಮ್ಮ ಮನೆ ಸಮೀಪದ ಪಾರ್ಕ್‌ನಲ್ಲಿ ಎಸೆದು ಬಂದಿದ್ದಾನೆ. 

ದೆಹಲಿಯಲ್ಲಿ ಮತ್ತೊಂದು ಭೀಭತ್ಸ ಕೃತ್ಯ: ಕುಟುಂಬದ ನಾಲ್ವರನ್ನು ಕೊಂದ ಮಾದಕ ವ್ಯಸನಿ..!

ಬಳಿಕ ಆತ ಪೊಲೀಸ್ ಠಾಣೆಗೆ ತೆರಳಿ ಕೊಲೆ ಮಾಡಿದ ವಿಚಾರ ತಿಳಿಸಿ ಪೊಲೀಸರಿಗೆ ಶರಣಾಗಿದ್ದಾನೆ. ನಂತರ ಪಾರ್ಕ್‌ನಿಂದ ಕೊಲೆಯಾದ ಜೈಕಿಶನ್ ಶವವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಪ್ರಕರಣ ದಾಖಲಿಸಿಕೊಂಡು ಸಹೋದರ ಲಲಿತ್‌ಕುಮಾರ್‌ನನ್ನು (Lalit Kumar) ಬಂಧಿಸಿದ್ದಾರೆ. ನಂತರ ಪೊಲೀಸರ ವಿಚಾರಣೆ (interrogation) ವೇಳೆ ಆರೋಪಿ  ತನ್ನ ಡ್ರಗ್ ವ್ಯಸನಿ ಅಣ್ಣನ ದುಷ್ಟತನವನ್ನು ವಿವರಿಸಿದ್ದಾನೆ. ಮಾದಕ ದ್ರವ್ಯದ ದುಶ್ಚಟವನ್ನು ಮೈಗೇರಿಸಿಕೊಂಡಿದ್ದ ಜೈಕಿಶನ್ ಹಣಕ್ಕಾಗಿ ಮನೆಯವರನ್ನೆಲ್ಲಾ ಪೀಡಿಸುತ್ತಿದ್ದ. ಅಲ್ಲದೇ ಮನೆಯಲ್ಲಿ ಯಾರು ಇಲ್ಲದ ದಿನ ಹೆತ್ತಮ್ಮನನ್ನು ಕೂಡ ಹಣಕ್ಕಾಗಿ ಪೀಡಿಸಿ ಥಳಿಸಿದ್ದ.

ಡ್ರಗ್ಸ್‌ ಹೆಚ್ಚಾಗಿ ಎರಡು ದಿನಗಳ ನಂತರ ಎಚ್ಚರವಾದಾಗ ಶಾಕ್‌ ಆದ ಸಂಜಯ್‌ ದತ್‌

ಇದರಿಂದ ತೀವ್ರವಾಗಿ ಸಿಟ್ಟಾಗಿದ್ದ ಕಿರಿಯ ಸಹೋದರ ಲಲಿತ್ ಮಾರನೇಯ ದಿನ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿಅಣ್ಣ ಜೈಕಿಶನ್‌ (Jaikishan) ತಲೆಗೆ ಹ್ಯಾಮರ್‌ನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ನಂತರ ಶವವನ್ನು ಮಂಚದ ಕೆಳಗೆ ನೂಕಿದ್ದ. ನಂತರ ಎಲ್ಲೋ ಹೊರಗೆ ಹೋಗಿದ್ದ ತಂದೆ ಮನೆಗೆ ಬಂದಾಗ ಆತ ತಾನು ಜೈಕಿಶನ್‌ನ್ನು ಹಲ್ಲೆ ಮಾಡಿದ್ದಾಗಿ ಹೇಳಿದ್ದಾನೆ. ನಂತರ ಅಪ್ಪ ಮಗ ಇಬ್ಬರು ಸೇರಿ ಶವವನ್ನು ಮನೆ ಸಮೀಪದ ಪಾರ್ಕ್‌ ಬಳಿ ಎಸೆದು ಬಂದಿದ್ದಾರೆ.  ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪ್ಪ (father) ಮಗ ಇಬ್ಬರನ್ನು ಬಂಧಿಸಿದ್ದಾರೆ. 


Madhya Pradesh: ಡ್ರಗ್ಸ್‌ಗೆ ಹಣ ನೀಡಲಿಲ್ಲವೆಂದು ಪತ್ನಿಯ ಖಾಸಗಿ ಅಂಗಕ್ಕೆ ಫೆವಿಕ್ವಿಕ್‌ ಹಾಕಿದ ಪತಿ..!

Follow Us:
Download App:
  • android
  • ios