Asianet Suvarna News Asianet Suvarna News

Delhi Crime: ಅಕ್ಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದವನ ಕುರ್ಚಿಯಿಂದ ಜಜ್ಜಿ ಹತ್ಯೆ

* ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ ವ್ಯಕ್ತಿ ಹತ್ಯೆ
* ತನ್ನ ಅಕ್ಕನ ಜತೆ ಸಂಬಂಧ ಹೋಂದಿದ್ದ ಎಂಬ ಕಾರಣಕ್ಕೆ ಕೊಲೆ ಮಾಡಿದರು
* ಲೋಹದ ಕುರ್ಚಿಯಿಂದ ಮಾರಣಾಂತಿಕ ಹಲ್ಲೆ

Delhi 24-year-old man thrashed stabbed to death over relationship with married woman mah
Author
Bengaluru, First Published Dec 30, 2021, 8:28 PM IST

ನವದೆಹಲಿ(ಡಿ. 30)   ವಿವಾಹಿತ ಮಹಿಳೆಯೊಂದಿಗೆ (Woman)ಸಂಬಂಧ (Illicit Relationship) ಹೊಂದಿದ್ದ ಎಂಬ ಕಾರಣಕ್ಕೆ ಮೂವರ ತಂಡವೊಂದು 24 ವರ್ಷದ ಯುವಕನ ಥಳಿಸಿ ಚಾಕುವಿನಿಂದ ಇರಿದು (Murder)ಕೊಂದಿದೆ.  ಇಬ್ಬರು ಆರೋಪಿಗಳನ್ನು ಪೊಲೀಸರು (NewDelhi)ಬಂಧಿಸಿದ್ದಾರೆ.

 ಪೊಲೀಸರ ಪ್ರಕಾರ, ಮೃತನನ್ನು ಹಳೆ ಸೀಮಾಪುರಿಯ ಶಾರುಖ್ ಎಂದು ಗುರುತಿಸಲಾಗಿದೆ. ಆರೋಪಿಗಳಲ್ಲಿ  ಒಬ್ಬನ ಸಹೋದರಿ ಜತೆ ಹತ್ಯೆಗೀಡಾದವ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.  ಇದೇ ಕಾರಣಕ್ಕೆ ಸರಿಯಾದ ಸಮಯಕ್ಕೆ ಹೊಂಚು ಹಾಕಿ ಸ್ನೇಹಿತರೊಂದಿಗೆ ಸೇರಿ ಹತ್ಯೆ ಮಾಡಿದ್ದಾನೆ. ಈ ಘೋರ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ.

ಲೋಹದ ಕುರ್ಚಿಯೊಂದರಿಂದ ಆರೋಪಿಗಳು ಶಾರುಖ್ ಮೇಲೆ ಮನಸಿಗೆ ಬಂದ ಹಾಗೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಮತ್ತೊಬ್ಬ ತಪ್ಪಿಸಿಕೊಳ್ಳದಂತೆ ಹಿಡಿದುಕೊಂಡಿದ್ದಾನೆ. ಆತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಮಹಿಳೆ ಶಾರುಖ್ ರಕ್ಷಣೆಗೆ ಮುಂದಾದರೂ ಅವರನನ್ನು ಅಲ್ಲಿಂದ ಅಡ್ಡ ಕಳುಹಿಸಲಾಗಿದೆ.

Sexual Harassment : ಅಪ್ರಾಪ್ತೆ ಮೇಲೆ ಎರಗಿದ ಪಾದ್ರಿ, ವಿಡಿಯೋ ಮಾಡಿಕೊಂಡ ಪತ್ನಿ!

 ಗಂಭೀರ ಗಾಯಗೊಂಡಿದ್ದ ಶಾರುಖ್ ಅವರನ್ನು ಗುರು ತೇಗ್ ಬಹದ್ದೂರ್ (ಜಿಟಿಬಿ) ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆ ಸೇರುವ ವೇಳೆಗೆ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಘಟನೆಗೆ ಸಂಬಂಧಿಸಿ ಸೀಮಾಪುರಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 34 (ಸಾಮಾನ್ಯ ಉದ್ದೇಶ) ಮತ್ತು 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.  ಪೊಲೀಸರು ಇಬ್ಬರು ಆರೋಫಿಗಳನ್ನು ಬಂಧಿಸಿದ್ದಾರೆ.  ಆದಿತ್ಯ ಮತ್ತು ಜುಬೇರ್ ರನ್ನು ಬಂಧಿಸಲಾಗಿದ್ದು ಮೂರನೇ ಆರೋಪಿ ಜಾಫರ್ ಗೆ ಬಲೆ  ಬೀಸಲಾಗಿದೆ. ಹತ್ಯೆಗೀಡಾದ ವ್ಯಕ್ತಿಯ ಮೇಲೂ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಸಿನಿಮಾದಂತೆ ಪತ್ನಿ ಹತ್ಯೆ:   ಬಾ  ನಲ್ಲೆ ಮಧುಚಂದ್ರಕೆ ಕನ್ನಡ (Sandalwood) ಸಿನಿಮಾದ ಕತೆಯೇ ಇಲ್ಲಿ ಪುನರಾವರ್ತನೆಯಾಗಿದೆ.  ಪತ್ನಿಯನ್ನು(Wife) ನಂಬಿಸಿ ಪ್ರವಾಸಕ್ಕೆ ಕರೆದುಕೊಂಡು ಬಂದು ಕೊಲೆ (Murder) ಮಾಡಿದ್ದವ ಸಿಕ್ಕಿಬಿದ್ದಿದ್ದ. 

ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ 29 ವರ್ಷದ ಪತ್ನಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಗೋವಾ ಪಣಜಿ ಮಾರ್ಗೋವ್ ಪೊಲೀಸರು ಬಂಧಿಸಿದ್ದಾರೆ.  ಬಂಧಿತನನ್ನು ಸಾಗರ್ ತಿಂಬಾಡಿಯಾ ಎಂದು ಗುರುತಿಸಲಾಗಿದ್ದು,  ಗೋವಾದ (Goa) ರಾವನ್‌ಫೊಂಡ್ ಪ್ರದೇಶದಲ್ಲಿ ನೆಲೆಸಿದ್ದ.

ಗುಜರಾತ್ ಮೂಲದ ಸಾಗರ್ ವೃತ್ತಿಯಲ್ಲಿ ಸೆರಾಮಿಕ್ ಟೈಲ್ಸ್ ಡೀಲರ್. ಈತನ ಪತ್ನಿ ಸಾವನ್ನಪ್ಪಿದ ನಂತರ, ಪೊಲೀಸರು ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.  ಆದರೆ ಮರಣೋತ್ತರ ಪರೀಕ್ಷೆಯ ಸಂದರ್ಭ ಮೃತ ಮಹಿಳೆಯ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದವು.  ಮದುವೆಯಾಗಿ ಸರಿಯಾಗಿ ಎರಡು ವರ್ಷದ  ನಂತರ ಆಕೆ ಸಾವನ್ನಪ್ಪಿದ್ದಳು.

ಅನುಮಾನಗೊಂಡ ಪೊಲೀಸರು ತನಿಖೆ ಆರಂಭಿಸಿದಾಗ ಒಂದೊಂದೆ ಅಂಶಗಳು ಬಹಿರಂಗವಾಗಿವೆ. ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಆಕೆಯನ್ನು  ಗಂಡನೇ ಕೊಲೆ ಮಾಡಿದ್ದು ಗೊತ್ತಾಗಿದೆ.  ಸಾಗರ್ ತಿಂಬಾಡಿಯ ವಿರುದ್ಧ ಎಸ್‌ಡಿಎಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. 

 

Follow Us:
Download App:
  • android
  • ios