*   ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ*   ನೇಪಾಳದ ಕಾರ್ಮಿಕರಿಬ್ಬರ ಗಲಾಟೆ*   ಕೋಪದಲ್ಲಿ ತರಕಾರಿ ಕತ್ತರಿಸುವ ಚಾಕುವಿನಿಂದ ಇರಿದ 

ಬೆಂಗಳೂರು(ಮೇ.31): ಹೊಟೇಲ್‌ನಲ್ಲಿ ತರಕಾರಿ ಕತ್ತರಿಸುವ ವಿಚಾರವಾಗಿ ಇಬ್ಬರು ಕಾರ್ಮಿಕರ ಮಧ್ಯೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

ಬಿಇಎಂಎಲ್‌ ಲೇಔಟ್‌ 5ನೇ ಹಂತದ ಆಂಧ್ರ ಸ್ಟೈಲ್‌ ರೆಸ್ಟೋರೆಂಟ್‌ನಲ್ಲಿ ಈ ಕೃತ್ಯ ನಡೆದಿದ್ದು, ನೇಪಾಳ ಮೂಲದ ಮಿಲನ್‌ ಬಿರಾಲ್‌ ಹತ್ಯೆಗೀಡಾದ ದುರ್ದೈವಿ. ಕೃತ್ಯ ಸಂಬಂಧ ಮೃತನ ಸ್ನೇಹಿತ ಅರ್ಯನ್‌ ಪುಷ್ಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಹೋಟೆಲ್‌ನಲ್ಲಿ ಸೋಮವಾರ ಮಧ್ಯಾಹ್ನ ಈ ಇಬ್ಬರ ಮಧ್ಯೆ ತರಕಾರಿ ಹೆಚ್ಚುವ ವಿಚಾರವಾಗಿ ಜಗಳವಾಗಿದೆ. ಈ ಹಂತದಲ್ಲಿ ಕೋಪಗೊಂಡ ಮಿಲನ್‌, ಅರ್ಯನ್‌ ಹೊಟ್ಟೆಗೆ ತರಕಾರಿ ಕತ್ತರಿಸುವ ಚಾಕುವಿನಿಂದ ಇರಿದಿದ್ದಾನೆ.

ಮೋಟರ್‌ ಕದ್ದಿದ್ದಾನೆಂದು ಕೈ ಕಟ್ಟಿಬಡಿದು ಕಾರ್ಮಿಕನ ಹತ್ಯೆ

ಕೂಡಲೇ ಇತರೆ ಸಿಬ್ಬಂದಿ ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಾರ್ಗ ಮಧ್ಯೆ ತೀವ್ರ ರಸ್ತಸ್ರಾವದಿಂದ ಆತ ಕೊನೆಯುಸಿರೆಳೆದಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನೇಪಾಳ ಮೂಲದ ಮಿಲನ್‌ ಹಾಗೂ ಅರ್ಯನ್‌, ಕೆಲ ತಿಂಗಳಿಂದ ಈ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಹೋಟೆಲ್‌ನ ಕೊಠಡಿಯಲ್ಲೇ ಇಬ್ಬರು ತಂಗಿದ್ದರು. ತರಕಾರಿ ಕತ್ತರಿಸುವುದು ಸೇರಿದಂತೆ ಅಡುಗೆಗೆ ಕೆಲಸಕ್ಕೆ ಸಹಾಯಕರಾಗಿದ್ದರು. ಸೋಮವಾರ ಸಹ ಹೋಟೆಲ್‌ನ ತರಕಾರಿ ದಾಸ್ತಾನು ಕೊಠಡಿಯಲ್ಲಿ ತರಕಾರಿ ಹೆಚ್ಚುವ ಕೆಲಸದಲ್ಲಿ ನಿರತರಾಗಿದ್ದರು. ಆಗ ಅವರ ಮಧ್ಯೆ ಜಗಳ ಉಂಟಾಗಿ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.