Asianet Suvarna News Asianet Suvarna News

ತಂದೆಯ ಕೊಂದು 50 ವರ್ಷದ ಮಲತಾಯಿ ಮೇಲೆ ರೇಪ್ : ಯುವಕನ ಬಂಧನ

20 ವರ್ಷದ ತರುಣನೋರ್ವ ತನ್ನ ತಂದೆಯನ್ನು ಕೊಂದು ಬಳಿಕ ತನ್ನ 50 ವರ್ಷ ಪ್ರಾಯದ ಮಲತಾಯಿ ಮೇಲೆ ಅತ್ಯಾಚಾರವೆಸಗಿದ ಹೇಯ ಕೃತ್ಯ ಒಡಿಶಾ ರಾಜ್ಯದಲ್ಲಿ ನಡೆದಿದೆ.

A 20 year old youth killed his father and raped his 50 year old stepmother in odishas Jajpur akb
Author
First Published Mar 9, 2023, 1:35 PM IST | Last Updated Mar 9, 2023, 1:35 PM IST

ಜಾಜ್‌ಪುರ: 20 ವರ್ಷದ ತರುಣನೋರ್ವ ತನ್ನ ತಂದೆಯನ್ನು ಕೊಂದು ಬಳಿಕ ತನ್ನ 50 ವರ್ಷ ಪ್ರಾಯದ ಮಲತಾಯಿ ಮೇಲೆ ಅತ್ಯಾಚಾರವೆಸಗಿದ ಹೇಯ ಕೃತ್ಯ ಒಡಿಶಾ ರಾಜ್ಯದಲ್ಲಿ ನಡೆದಿದೆ.  ಜಾಜ್‌ಪುರ ಜಿಲ್ಲೆಯ ಟೊಮ್ಕಾ ಪೊಲೀಸ್ ಠಾಣೆ ವ್ಯಾಪ್ತಿಯ ಚಂಪಾಜರ್ (Champajhar) ಗ್ರಾಮದಲ್ಲಿ ಫೆ.5ರಂದು ಈ ಭಯಾನಕ ಘಟನೆ ನಡೆದಿದ್ದು, ಫೆ.6 ರಂದು ಆರೋಪಿ 20 ವರ್ಷದ ಲುಗು ಹೆಂಬ್ರೂಮ್‌ನನ್ನು ಪೊಲೀಸರು ಬಂಧಿಸಿದ್ದಾರೆ. 

ಕೌಟುಂಬಿಕ ಕಲಹದ (family dispute) ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು 65 ವರ್ಷದ ಸದೈ ಹೆಂಬ್ರಾಮ್ (Sadai Hembram) ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಸದೈ ಹೆಂಬ್ರಾಮ್ ಅವರ ಪುತ್ರ ದಿನಗೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದ. ಆದರೆ ಮಲತಾಯಿ ಆತನೊಂದಿಗೆ ನಿರಂತವಾಗಿ ಜಗಳವಾಡುತ್ತಿದ್ದಳು. ಅಲ್ಲದೇ ಆತ ಕುಟುಂಬದೊಂದಿಗೆ ಚಂಪಾಜಾರ್ ಗ್ರಾಮದಲ್ಲಿಇರಲು ಮಲತಾಯಿ ಅವಕಾಶ ನೀಡದ ಕಾರಣ ಆತ ಕುಟುಂಬ ತೊರೆದು ಬೇರೆಯೇ ಹಳ್ಳಿಯಲ್ಲಿ ವಾಸವಾಗಿದ್ದ.  ಈ ಎಲ್ಲಾ ಕಾರಣಗಳಿಂದ 20ರ ಹರೆಯದ ಹುಡುಗ ತನ್ನ ಮಲತಾಯಿಯ ಬಗ್ಗೆ ವ್ಯಾಘ್ರನಾಗಿದ್ದ. 

ಮದುವೆ ಮಾಡಿಸಿ ಎಂದ ದಿವ್ಯಾಂಗ ಮಗನನ್ನು ಹೊಡೆದು ಕೊಂದ ತಂದೆ-ತಾಯಿ

ಈ ಮಧ್ಯೆ ಭಾನುವಾರ ರಾತ್ರಿ, ಲುಗು ತನ್ನ ತಂದೆ ಇದ್ದಲ್ಲಿಗೆ ಬಂದಾಗ ಮಲತಾಯಿ ಮತ್ತೆ ಅವನೊಂದಿಗೆ ಜಗಳ ಶುರು ಮಾಡಿದ್ದಳು. ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ, ಆತನ ತಂದೆ ಪತ್ನಿಯ ಬೆಂಬಲಕ್ಕೆ ನಿಂತಿದ್ದಾನೆ. ಇದರಿಂದ ಕೋಪಗೊಂಡ ಲುಗು ತನ್ನ ತಂದೆಯನ್ನು ಹರಿತವಾದ ಆಯುಧದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ನಂತರ ಆತ ತನ್ನ 50 ವರ್ಷದ ಮಲತಾಯಿಯ ಮೇಲೆ ಅತ್ಯಾಚಾರವೆಸಗಿ  ಶೀಘ್ರದಲ್ಲೇ ಆ ಸ್ಥಳದಿಂದ ಪರಾರಿಯಾಗಿದ್ದ. ಈ ಬಗ್ಗೆ ಅತ್ಯಾಚಾರ ಸಂತ್ರಸ್ತೆ ಹಾಗೂ ಮಲತಾಯಿ ಟೊಮ್ಕಾ ಪೊಲೀಸರಿಗೆ ದೂರು ನೀಡಿದ್ದಳು.  ಭಾನುವಾರ ರಾತ್ರಿ  ತಂದೆಯನ್ನು ಕೊಂದ ತನ್ನ ಮಲಮಗ ನಂತರ  ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಮಲತಾಯಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 

ಮಲತಾಯಿ ನೀಡಿದ ದೂರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ (postmortem) ಕಳುಹಿಸಿದ ಪೊಲೀಸರು ಸೋಮವಾರ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಮತ್ತು ಬದುಕುಳಿದವರ ವೈದ್ಯಕೀಯ ಪರೀಕ್ಷೆ  (Medical examination) ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಂದೆ​- ಮಲತಾಯಿ ಕೊಲೆಗೆ ಸಂಚು: ವಕೀಲನ ಬಂಧನ

ಅಪರಾಧದ ಹಿಂದಿನ ಕಾರಣವನ್ನು ತಿಳಿಯಲು ನಾವು ಯುವಕನ ವಿಚಾರಣೆ (interrogation) ನಡೆಸುತ್ತಿದ್ದೇವೆ. ಕೌಟುಂಬಿಕ ಕಲಹದ ಹಿನ್ನೆಲೆ ಆರೋಪಿ ಮತ್ತು ಆತನ ಮಲತಾಯಿಯ (stepmother) ನಡುವೆ ವೈಷಮ್ಯ ಬೆಳೆದಿತ್ತು. ಏಕೆಂದರೆ ಆಕೆ  ಯುವಕನನ್ನು ತನ್ನ ತಂದೆಯ ಮನೆಯಲ್ಲಿ ಇರುವುದಕ್ಕೆ ನಿರ್ಬಂಧ ಹೇರಿದ್ದಳು ಎಂದು  ಟೋಮ್ಕಾ ಪೊಲೀಸ್ ಠಾಣೆಯ ಎಸ್ ಕೆ ಪತ್ರಾ ಹೇಳಿದ್ದಾರೆ.  ಆರೋಪಿಯನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗದ ವಶಕ್ಕೆ ನೀಡಲಾಗಿದೆ. 

Latest Videos
Follow Us:
Download App:
  • android
  • ios