ಬ್ಯಾಟ್ ಎಡ್ಜ್ ಆಗಿದೆ. ಆದರೆ ನೀವು ಥೈಪ್ಯಾಡ್ ಟಚ್ ಎಂದು ರನ್ ನೀಡಿಲ್ಲ. ಈಗಾಗಲೇ ನಾನು ಶೂನ್ಯಕ್ಕೆ 2 ಬಾರಿ ಔಟ್ ಆಗಿದ್ದೇನೆ ಎಂದು ರೋಹಿತ್ ಶರ್ಮಾ ಫೀಲ್ಡ್ ಅಂಪೈರ್ ಬಳಿಕ ಹೇಳಿದ ಫನ್ನಿ ಮಾತು ಭಾರಿ ವೈರಲ್ ಆಗಿದೆ. 

ಬೆಂಗಳೂರು(ಜ.17) ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಬೆಂಗಳೂರು ಟಿ20 ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಆದರೆ ಇದೇ ಪಂದ್ಯದಲ್ಲಿ ರೋಹಿತ್ ಶರ್ಮಾ, ಫೀಲ್ಡ್ ಅಂಪೈರ್ಸ್ ಜೊತೆಗಿನ ಫನ್ನಿ ಮಾತು ಕೂಡ ವೈರಲ್ ಆಗಿದೆ. ರೋಹಿತ್ ಶರ್ಮಾ 5 ಎಸೆತ ಎದುರಿಸಿದರೂ ರನ್ ಖಾತೆ ತೆರೆದಿರಲಿಲ್ಲ. ಇತ್ತ ಬ್ಯಾಟ್ ಎಡ್ಜ್ ಆಗಿದ್ದರೂ ಅಂಪೈರ್ ರೋಹಿತ್‌ಗೆ ರನ್ ನೀಡಲಿಲ್ಲ. ಇದಕ್ಕೆ ಪ್ರತಿಕ್ರಿಯಿಸಿದ ರೋಹಿತ್, ಈಗಾಗಲೇ ಎರಡು ಬಾರಿ ಶೂನ್ಯಕ್ಕೆ ಔಟ್ ಆಗಿದ್ದೇನೆ ಎಂದು ಫನ್ನಿಯಾಗಿ ಅಂಪೈರ್‌ಗೆ ಹೇಳಿದ್ದಾರೆ. ಈ ಮಾತು ಭಾರಿ ವೈರಲ್ ಆಗಿದೆ.

ಮೊದಲು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ನಿರೀಕ್ಷಿತ ಆರಂಭ ಪಡೆಯಲಿಲ್ಲ. 2ನೇ ಓವರ್‌ನಲ್ಲಿ ಅಜ್ಮತುಲ್ಹಾ ಒಮರ್ಜೈ ಎಸೆದ ಎಸೆತದಲ್ಲಿ ಸಿಂಗಲ್ ಪಡೆದರೂ ರೋಹಿತ್ ಶರ್ಮಾಗೆ ರನ್ ಸಿಗಲಿಲ್ಲ. ಕಾರಣ ಫೀಲ್ಡ್ ಅಂಪೈರ್ ವೀರೇಂದ್ರ ಶರ್ಮಾ ರೋಹಿತ್ ಥೈಪ್ಯಾಡ್‌ಗೆ ತಾಗಿದೆ ಎಂದು ಬೈಸ್ ನೀಡಿದ್ದಾರೆ. ರೋಹಿತ್ ಶರ್ಮಾ 5 ಎಸೆತ ಎದುರಿಸಿದರೂ ಒಂದು ರನ್ ಗಳಿಸಿರಲಿಲ್ಲ. ಇಷ್ಟೇ ಅಲ್ಲ ಈಗಾಗಲೇ 2 ಬಾರಿ ಶೂನ್ಯಕ್ಕೆ ರೋಹಿತ್ ಶರ್ಮಾ ವಿಕೆಟ್ ಕೈಚೆಲ್ಲಿದ್ದರು.

ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ರೋಹಿತ್ ಶತಕ ದಾಖಲೆ, ಹಲವು ದಾಖಲೆ ಪುಡಿ ಪುಡಿ!

ಚೆಂಡು ರೋಹಿತ್ ಶರ್ಮಾ ಬ್ಯಾಟ್‌ಗೆ ತಾಗಿ ಬಳಿಕ ಪ್ಯಾಡ್‌ಗೆ ತಾಗಿತ್ತು. ಆದರೆ ಅಂಪೈರ್ ಥೈಪ್ಯಾಡ್ ಎಂದ ನಿರ್ಧಾರ ಘೋಷಿಸಿದ್ದರು. ಇನ್ನು ಅಂಪೈರ್ ಬಳಿ ಫನ್ನಿಯಾಗಿ ಪ್ರಶ್ನಿಸಿದ ರೀತಿ ವೈರಲ್ ಆಗಿದೆ. ಹೇ ವೀರೂ, ನೀವು, ಮೊದಲ ಎಸೆತದಲ್ಲಿನ ರನ್‌ನ್ನು ಥೈಪ್ಯಾಡ್ ಎಂದು ಘೋಷಿಸಿದ್ದೀರಿ. ಅದು ಮೊದಲು ಬ್ಯಾಟ್‌ಗೆ ತಾಗಿ ಬಳಿಕ ಪ್ಯಾಡ್‌ಗೆ ತಾಗಿತ್ತು. ನಾನು ಈಗಾಗಲೇ 2 ಬಾರಿ ಶೂನ್ಯಕ್ಕೆ ಔಟಾಗಿದ್ದೇನೆ ಎಂದು ಫೀಲ್ಡ್ ಅಂಪೈರ್ ವೀರೇಂದ್ರ ಶರ್ಮಾಗೆ ಹೇಳಿದ್ದಾರೆ. ರೋಹಿತ್ ಶರ್ಮಾ ಮಾತುಗಳು ಸ್ಟಂಪ್ ಮೈಕ್‌ನಲ್ಲಿ ರೆಕಾರ್ಡ್ ಆಗಿದೆ. ಇದೀಗ ಈ ವಿಡಿಯೋ ಭಾರಿ ವೈರಲ್ ಆಗಿದೆ. 

Scroll to load tweet…

ಈ ಪಂದ್ಯದಲ್ಲಿ ರೋಹಿತ್ ಶರ್ಮಾ ದಾಖಲೆಯ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. 65 ಎಸೆತದಲ್ಲಿ ರೋಹಿತ್ ಶರ್ಮಾ ಸೆಂಚುರಿ ಸಿಡಿಸಿದ್ದಾರೆ. ಟಿ20 ಕ್ರಿಕೆಟ್‌‌ನಲ್ಲಿ ರೋಹಿತ್ ಶರ್ಮಾ 5ನೇ ಶತಕ ದಾಖಲಿಸಿದರು. ಟಿ20 ಮಾದರಿಯಲ್ಲಿ ಗರಿಷ್ಠ ಸೆಂಚುರಿ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರೆ. ರೋಹಿತ್ ಶರ್ಮಾ ಅಜೇಯ 121 ರನ್ ಸಿಡಿಸಿದರು. 

ಮದ್ವೆನೂ ಕಷ್ಟ ಡಿವೋರ್ಸ್‌ ಆದ್ರೂ ಕಷ್ಟ ಎಂದ ಸಾನಿಯಾ ಮಿರ್ಜಾ: ಟೆನ್ನಿಸ್ ತಾರೆಗೇನಾಯ್ತು?

ಟಿ20ಯಲ್ಲಿ ರೋಹಿತ್ ಶರ್ಮಾ ವೈಯುಕ್ತಿಕ ಗರಿಷ್ಠ ರನ್ ಇದಾಗಿದೆ. ರೋಹಿತ್ ಶರ್ಮಾ 8 ಸಿಕ್ಸರ್ ಹಾಗೂ 11 ಬೌಂಡರಿ ಮೂಲಕ ಅಜೇಯ 121 ರನ್ ಸಿಡಿಸಿರು. ಇದರೊಂದಿಗೆ ಟೀಂ ಇಂಡಿಯಾ 212 ರನ್ ಸಿಡಿಸಿತು.