Asianet Suvarna News Asianet Suvarna News

ಮರು ಮದ್ವೆಗೆ ಸಮಂತಾ ರೆಡಿ? ವೈದ್ಯನ ಫೋಟೋ ಶೇರ್​ ಮಾಡಿ ನಟಿ ಹೇಳಿದ್ದೇನು?

ನಟ ನಾಗಚೈತನ್ಯ ಅವರಿಂದ ದೂರವಾದ ಮೇಲೆ ಒಂಟಿಯಾಗಿ ವಾಸಿಸುತ್ತಿರುವ ನಟಿ ಸಮಂತಾ ರುತ್​ ಪ್ರಭು ಎರಡನೆಯ ಮದ್ವೆಗೆ ರೆಡಿ ಆದ್ರಾ? ಏನಿದು ವಿಷಯ?
 

Samantha Ruth Prabhu is Looking For a Suitable Match But There's a Catch
Author
First Published May 22, 2023, 12:14 PM IST

ತಾರಾ ಜೋಡಿಗಳು ಸಂಬಂಧದಲ್ಲಿದ್ದ ಎಷ್ಟು ಸುದ್ದಿಯಾಗುತ್ತದೆಯೋ, ಅವರ ವಿಚ್ಛೇದನ ಪಡೆದರೆ ಅವರ ಮೇಲೆ ಇನ್ನೂ ಹೆಚ್ಚಿಗೆ ಕಣ್ಣು ನೆಟ್ಟಿರುತ್ತದೆ. ಅಂಥ ಜೋಡಿಗಳಲ್ಲಿ ಒಂದು ನಾಗ ಚೈತನ್ಯ (Naga Chaitanya) ಹಾಗೂ ಸಮಂತಾ ರುತ್​ ಪ್ರಭು ಜೋಡಿ.  ಯೇ ಮಾಯಾ ಚೇಸಾವೆ ಸಿನಿಮಾ ಮೂಲಕ ಆತ್ಮೀಯರಾದ ನಾಗ ಚೈತನ್ಯ ಹಾಗೂ ನಟಿ ಸಮಂತಾ, ಸ್ನೇಹವನ್ನು ಪ್ರೇಮವಾಗಿ ಬದಲಾಯಿಸಿ ನಂತರ ಅದ್ಧೂರಿಯಾಗಿ ಮದುವೆಯಾದರು. ಇಬ್ಬರೂ ಕುಟುಂಬ ಸದಸ್ಯರ ಮನವೊಲಿಸಿ ಸಾಂಪ್ರದಾಯಿಕ ಹಿಂದೂ ಮತ್ತು ಕ್ರೈಸ್ತ ರೀತಿಯಲ್ಲಿ ವಿವಾಹವಾಗಿದ್ದರು.  ಮದುವೆಯ ಬಳಿಕ ಈ ಜೋಡಿ  ಸಂತೋಷದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುತ್ತಲೇ ಇದ್ದರು. ಆದರೆ ಅದೇನಾಯಿತೋ ಗೊತ್ತಿಲ್ಲ, ಸಾಮಾಜಿಕ ಜಾಲತಾಣದ (Social Media) ಮೂಲಕವೇ  ವಿಚ್ಛೇದನ ಘೋಷಿಸಿದ್ದರು.   ಮದುವೆಯಾಗಿ ನಾಲ್ಕೇ ವರ್ಷಕ್ಕೆ ದಾಂಪತ್ಯ ಜೀವನ ಕೊನೆಗೊಳಿಸಿದ್ದರು. ಇದಾಗಿ  ಮೂರು ವರ್ಷ ಗತಿಸಿದರೂ ಜೋಡಿಯ ಬಗ್ಗೆ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ.

ಅದಾದ ಬಳಿಕ ಅನಾರೋಗ್ಯದ ಕಾರಣದಿಂದ ನಟಿ ಸಮಂತಾ (Samantha) ಸುದ್ದಿಯಾಗಿದ್ದರೆ, ಬಳಿಕ ಶಾಕುಂತಲಂ ಚಿತ್ರದ ಮೂಲಕ ಸುದ್ದಿಯಾದರು. ‘ಶಾಕುಂತಲಂ’ ಗಲ್ಲಾಪೆಟ್ಟಿಗೆಯಲ್ಲಿ ಫ್ಲಾಪ್ ಆಗಿದೆ. ಇದರ ನಡುವೆಯೇ,  ಈ ನಟಿ    ದುಬಾರಿ ಬಂಗಲೆ ಖರೀದಿ ವಿಷಯದಲ್ಲಿ ಸುದ್ದಿಯಅದರು. ನಟಿ ಇದಾಗಲೇ  ಒಂದು ಕೋಟಿ ರೂಪಾಯಿಯ ಬಂಗಲೆ ಖರೀದಿಸಿದ್ದು ಅದರಲ್ಲಿಯೇ ವಾಸ ಮಾಡುತ್ತಿದ್ದಾರೆ. ಆದರೆ, ಇದೀಗ  ನಟಿ ಹೈದರಾಬಾದ್​ನಲ್ಲಿ ಹೊಸದಾಗಿ  ಐಷಾರಾಮಿ ಡ್ಯೂಪ್ಲೆಕ್ಸ್ ಅಪಾರ್ಟ್​ಮೆಂಟ್​ ಖರೀದಿಸಿದ್ದಾರೆ ಎಂದು ಚರ್ಚೆಯಾಗುತ್ತಿದೆ.  ಜಯಭೇರಿ ಆರೆಂಜ್ ಕೌಂಟಿಯಲ್ಲಿ ಐಷಾರಾಮಿ 3 ಬಿಎಚ್‌ಕೆ ಡ್ಯೂಪ್ಲೆಕ್ಸ್ ಅಪಾರ್ಟ್​ಮೆಂಟ್​  ಖರೀದಿಸಿದ್ದಾರೆ.  13ನೇ ಮಹಡಿಯಲ್ಲಿ 3,920 ಚದರ ಅಡಿ ಮತ್ತು 14ನೇ ಮಹಡಿಯಲ್ಲಿ 4,024 ಚದರ ಅಡಿ ವಿಸ್ತೀರ್ಣವನ್ನು ಹೊಂದಿರುವ ಈ ಡ್ಯೂಪ್ಲೆಕ್ಸ್ ಅಪಾರ್ಟ್​ಮೆಂಟ್​ (Apartment) ಒಟ್ಟು 7,944 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ ಎನ್ನಲಾಗಿದೆ.

ಶಾಕಿಂಗ್​ ಬೆಲೆಯ ಇನ್ನೊಂದು ಐಷಾರಾಮಿ ಬಂಗ್ಲೆ ಖರೀದಿಸಿದ Samantha Ruth Prabhu

ಇದೀಗ ಮತ್ತೊಂದು ಹೊಸ ಅಪ್​ಡೇಟ್​ (Update) ಹೊರಬಿದ್ದಿದೆ. ಅದು ಸಮಂತಾ ಮರು ಮದುವೆಯ ಕುರಿತಂತೆ! ಹೌದು.  ನಾಗ ಚೈತನ್ಯ ಜೊತೆ ವಿಚ್ಛೇದನದ ಬಳಿಕ ಸಖತ್ ಸುದ್ದಿಯಲ್ಲಿರುವ ಸಮಂತಾ ರುತ್ ಪ್ರಭು, 2ನೇ ಮದುವೆ ಆಗ್ತಾರಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಕಾರಣ ಅವರ ಇನ್​ಸ್ಟಾಗ್ರಾಂ (Instagram). ಇದರಲ್ಲಿ  ಒಬ್ಬ ವ್ಯಕ್ತಿಯ ವಿವರಗಳನ್ನು ಪೋಸ್ಟ್ ಮಾಡಿದ್ದಾರೆ ಸಮಂತಾ. ಸಮಂತಾ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಒಬ್ಬ ವ್ಯಕ್ತಿಯ ವಿವರಗಳನ್ನು ಹಾಕಿದ್ದು, ನಾನು ಸೂಕ್ತವಾದ ಹೊಂದಾಣಿಕೆಯನ್ನು ಹುಡುಕುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಆ ವ್ಯಕ್ತಿಯೇ ಬಾಲಿವುಡ್ ಸೆಲೆಬ್ರಿಟಿ ಡಾ.ಜ್ಯುವೆಲ್ ಗಮಾಡಿಯಾ. ಇವರಿಗೆ ಸರಿಯಾದ ಜೋಡಿಯನ್ನು ಹುಡುಕುತ್ತಿರುವುದಾಗಿ ಸಮಂತಾ ಬರೆದಿದ್ದರೂ ಅದು ಬೇರೆಯದ್ದೇ ಅರ್ಥ ಕೊಡುತ್ತಿದೆ ಎನ್ನುವುದು ಫ್ಯಾನ್ಸ್​ ಅಂಬೋಣ.

Naga Chaitanya: ಸೀಕ್ರೆಟ್ ಕ್ರಶ್​ ಬಗ್ಗೆ ಕೊನೆಗೂ ಬಾಯ್ಬಿಟ್ಟ ನಟಿ ಸಮಂತಾ ಮಾಜಿ ಪತಿ!

 ಡಾ.ಜ್ಯುವೆಲ್ ಗಮಾಡಿಯಾ (Dr Jewel Gamadia) ಈ ಚಿತ್ರದಲ್ಲಿ  ಕಾಣುವುದಕ್ಕಿಂತ ಹೆಚ್ಚು ಬುದ್ಧಿವಂತರು ಎಂದು ಗುಣಗಾನ ಮಾಡಿರುವ ಸಮಂತಾ, ಅವರಿಗಾಗಿ ಜೋಡಿ ಹುಡುಕುತ್ತಿದ್ದೇನೆ ಎಂದಿದ್ದಾರೆ.  ಅಂದಹಾಗೆ, ಡಾ.ಜ್ಯುವೆಲ್ ಗಮಾಡಿಯಾ ಅವರು ಬಾಲಿವುಡ್ ತಾರೆಯರಾದ  ಅನುಷ್ಕಾ ಶರ್ಮಾ, ಕತ್ರಿನಾ ಕೈಫ್, ಅಜಯ್ ದೇವಗನ್ ಸೇರಿದಂತೆ ಅನೇಕ ಬಿಟೌನ್ ಸೆಲೆಬ್ರಿಟಿಗಳಿಗೆ ವೈದ್ಯರಾಗಿದ್ದಾರೆ. ಸಮಂತಾ ಸದ್ಯ ತೆಲುಗಿನಲ್ಲಿ ವಿಜಯ್ ದೇವರಕೊಂಡ ಜೊತೆ ಖುಷಿ ಸಿನಿಮಾ ಮಾಡುತ್ತಿದ್ದಾರೆ. ಶಿವ ನಿರ್ವಾಣ ನಿರ್ದೇಶನದ ಈ ಚಿತ್ರಕ್ಕಾಗಿ ಸಮಂತಾ ಮತ್ತು ವಿಜಯ್ ದೇವರಕೊಂಡ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಖುಷಿ ಸಿನಿಮಾದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. 

Follow Us:
Download App:
  • android
  • ios