Asianet Suvarna News Asianet Suvarna News

ಓ ಗಾಡ್..! ಬ್ರೂಸ್‌ ಲೀಯನ್ನು ಕೊಂದೇ ಬಿಡ್ತಾ ನೀರು..?

1973ರಲ್ಲಿ ಕೇವಲ 32ನೇ ವಯಸ್ಸಿನಲ್ಲಿ ವಿಶ್ವದಲ್ಲಿಯೇ ಅತ್ಯಂತ ಜನಪ್ರಿಯನಾಗಿದ್ದ ಬ್ರೂಸ್‌ ಲೀ ಸಾವು ಕಂಡಿದ್ದ. ಈತ ಸಾವು ಕಂಡು 45 ವರ್ಷಗಳಾದ ನಂತರವೂ ಮಾರ್ಷಲ್‌ ಆರ್ಟ್ಸ್‌ನ ದಿಗ್ಗಜನ ಸಾವಿನ ಬಗೆಗಿನ ಕುತೂಹಲ ಜನರಿಗೆ ತಣಿದಿಲ್ಲ.

new study suggests Bruce Lee may have died from drinking too much water san
Author
First Published Dec 10, 2022, 5:11 PM IST

- ಶೋಭಾ ಎಂ.ಸಿ, ಏಷ್ಯಾನೆಟ್ ಸುವರ್ಣನ್ಯೂಸ್

Bruce Lee Overhydration: ಅವನನ್ನು ಕೊಂದಿದ್ದು ಪ್ರೇಯಸಿಯಲ್ಲ, ಗೂಢಾಚಾರಿಗಳಲ್ಲ, ಅಮೆರಿಕ ಸುಪಾರಿ ಕೊಡಲಿಲ್ಲ. ಅವನ ಜೀವ ತೆಗೆದಿದ್ದು ನೀರು. ಹೌದು, ಜೀವರಕ್ಷಕ ನೀರೇ, ಅವನ ಪಾಲಿಗೆ ಯಮಸ್ವರೂಪಿ. ಅವನು ಬೇರಾರೂ ಅಲ್ಲ, ಹಾಲಿವುಡ್​ ದಂತಕಥೆ ಬ್ರೂಸ್​ ಲೀ. ಚಿರತೆಯಂಥಾ ಕಣ್ಣು, ಏಟಿಗೆ ಸಿಗದಂತೆ ಚಂಗನೆ ಎಗರಿ ಬೀಳುವ ಫಟಿಂಗ. ಸಿಕ್ಸ್​​ ಪ್ಯಾಕ್​ನಂಥ ಬಾಡಿ. ಸ್ಕ್ರೀನ್​ ಮೇಲೆ ಬಂದ ಅಂದ್ರೆ ಮೈಮೇಲೆ ಬ್ರೂಸ್​ ಲೀ ಆವರಿಸಿಕೊಂಡಂತೆಯೇ. 
50-60ರ ದಶಕದಲ್ಲಿ ತನ್ನ ಆಕ್ಷನ್​ನಿಂದಲೇ ಹಾಂಗ್​ಕಾಂಗ್, ಹಾಲಿವುಡ್​​ನ್ನು ಅಕ್ಷರಶಃ ಆಳಿದವನು ಬ್ರೂಸ್​ಲೀ. 

ಮಾರ್ಷಲ್ ಆರ್ಟ್ಸ್​ ಕಲೆಯಿಂದ ಯುವ ಜನರನ್ನು ಮೋಡಿ ಮಾಡಿದ್ದ. ಬ್ರೂಸ್​ ಲೀ ಹೊಸ ಕ್ರಷ್​ ಆಗಿಬಿಟ್ಟಿದ್ದ. ತೆಳ್ಳನೆ ಅನ್ನಿಸಿದ್ರು ಮಸ್ತ್​ ಫಿಟ್​ ಬಾಡಿ. ಅದಕ್ಕಿಂತಲೂ ಅವನ ಆಕ್ಷನ್ ಮೂವ್​​ಮೆಂಟ್​​ಗಳು ಕಣ್ಣರಳಿಸಿ ನೋಡುವಂತೆ ಮಾಡ್ತಿತ್ತು. ಬ್ರೂಸ್ ಲೀ ಪಂಚ್ ಕೊಟ್ಟರೆ ಅದು ಕ್ಯಾಮರಾ ಸ್ಲೋ ಮೋಷನ್‌ಗೂ ಸಿಗುತ್ತಿರಲಿಲ್ಲವಂತೆ. ಜುಡೋ, ಕರಾಟೆ, ಬಾಕ್ಸಿಂಗ್ ಹಾಗೂ ಆಕ್ಟಿಂಗ್​ನಲ್ಲೂ  ಬ್ರೂಸ್​ ಲೀ ಪಳಗಿದ್ದ. ಯುವಕರಂತೂ ಬ್ರೂಸ್​ಲೀಗೆ ಫಿದಾ ಆಗಿಬಿಟ್ಟಿದ್ರು. 

Enter the Dragon,  The Game of Death, Way of the Dragon ಹಿಟ್​ ಮೇಲೆ ಹಿಟ್​ ಆಗ್ತಿದ್ದಂತೆ, ಯುವಕರು ಲೀಯಂತೆ ದೇಹ ಹುರಿಗೊಳಿಸುವುದು, ಮಾರ್ಷಲ್​ ಆರ್ಟ್ಸ್​​ ಕಲಿಯಲು ಮುಗಿಬೀಳ್ತಿದ್ರು.  ಇಂಥ ಬ್ರೂಸ್​ ಲೀ, ಒಂದು ದಿನ ರಾತ್ರಿ ಮಲಗಿದವನು ಮೇಲೇಳಲೇ ಇಲ್ಲ. 

1973 ಜುಲೈ 20, ಬ್ರೂಸ್​ ಲೀ ಇಹಲೋಕ ತ್ಯಜಿಸಿದಾಗ, ಆತನ ವಯಸ್ಸು ಕೇವಲ 32. 

45 ವರ್ಷಗಳವರೆಗೂ ಬ್ರೂಸ್ ಲೀ ಸಾವು ನಿಗೂಢ. ಆತನ ಸಾವಿನ ಹಿಂದೆ ನೂರೆಂಟು ಕಥೆಗಳು. ವದಂತಿಗಳು. ವಿಷ ಹಾಕಿಕೊಂದರಂತೆ, ಪ್ರೀಪ್ಲಾನ್ಡ್​ ಮರ್ಡರ್, ಅವನ ಯಶಸ್ಸು ಸಹಿಸದೇ ಅಮೆರಿಕದವರೇ ಸುಪಾರಿ ಕೊಟ್ಟು ಕೊಲ್ಲಿಸಿದಂತೆ.. ಒಂದೇ ಎರಡೇ ಹತ್ತಾರು ಅನುಮಾನಗಳು. ಆದ್ರೆ, ಈ ಎಲ್ಲ ಅನುಮಾನಗಳಿಗೆ ಸಂಶೋಧಕರು ಉತ್ತರ ಕೊಟ್ಟಿದ್ದಾರೆ. 45 ವರ್ಷಗಳ ಬಳಿಕ ಬ್ರೂಸ್​ ಲೀ ಸಾವಿನ ರಹಸ್ಯ ಬಯಲಾಗಿದೆ.  ಮಿದುಳು ಊತದಿಂದ ಬ್ರೂಸ್​ ಲೀ ಸಾವು ಸಂಭಿಸಿದೆ ಅಂತ ಕ್ಲಿನಿಕಲ್ ಕಿಡ್ನಿ ಜರ್ನಲ್ ನಲ್ಲಿ ರಿಪೋರ್ಟ್ ಪ್ರಕಟಿಸಿದೆ.  

ಬ್ರೂಸ್​ ಲೀ ಮೆದುಳು 1, 575 ಗ್ರಾಂನಷ್ಟು ಊದಿಕೊಂಡಿತ್ತು ಅಂತಿದೆ ಪೋಸ್ಟ್ ಮಾರ್ಟಂ ರಿಪೋರ್ಟ್. ಸಾಮಾನ್ಯವಾಗಿ ಮಿದುಳಿನ ಗಾತ್ರ 1,400 ಗ್ರಾಂ.

ಕಿಡ್ನಿಯಲ್ಲಿ ನೀರು ತುಂಬಿಕೊಂಡ್ರೆ, ಅದು ಮೂತ್ರವಿಸರ್ಜನೆ ಮೂಲಕ ಹೊರಹೋಗುತ್ತದೆ. ಆದ್ರೆ, ಬ್ರೂಸ್​ಲೀ ದೇಹದಲ್ಲಿನ ಹೆಚ್ಚುವರಿ ನೀರನ್ನು ಹೊರಹಾಕುವಲ್ಲಿ ಮೂತ್ರಪಿಂಡ ವಿಫಲಗೊಂಡಿತ್ತು. ಇದರಿಂದಲೇ ಬ್ರೂಸ್ ಲೀ ಸಾವೀಡಾಗಿದ್ರು ಅಂತಿದೆ ರಿಪೋರ್ಟ್. ಬ್ರೂಸ್​ ಲೀ ಸಾವಿನ ದಿನ ಅತಿಯಾದ ತಲೆನೋವಿನಿಂದ ಬಳುತ್ತಿದ್ದನಂತೆ. ಡ್ರಗ್ಸ್​ ತೆಗೆದುಕೊಳ್ಳುವ ಅಭ್ಯಾಸವೂ ಇತ್ತು. ತಲೆನೋವಿಗೆಂದು ಮಾತ್ರೆ ತೆಗೆದುಕೊಂಡಿದ್ದ ಲೀ, ರಾತ್ರಿ 7.30ಕ್ಕೆ ಮಲಗಿದವನು ನಿದ್ರೆಯಲ್ಲೇ ಸಾವಿಗೆ ಜಾರಿದ್ದ.

ಮಗಳಿದ್ದರೆ ನಿನ್ನಂಥ ಮಗಳಿರಬೇಕು! ಲಾಲುಗೆ ಕಿಡ್ನಿ ಕೊಟ್ಟ ಮಗಳಿಗೊಂದು ಚಪ್ಪಾಳೆ

ವೈದ್ಯರ ಪ್ರಕಾರ, ಅತಿಯಾಗಿ ನೀರು ಕುಡಿಯುವುದೂ ಮಾರಕವೇ. ನಾವು ಕುಡಿಯುವ ನೀರು ಮೂತ್ರಪಿಂಡಗಳಿಗೆ ತಲುಪುತ್ತವೆ. ಈ ಮೂತ್ರಪಿಂಡಗಳು, ಬೇಡದ ವಸ್ತುಗಳನ್ನು ಹೊರಹಾಕಿ ದೇಹವನ್ನು ಆರೋಗ್ಯದಿಂದಿರುವಂತೆ ಕಾಪಾಡುತ್ತದೆ. ಅಗತ್ಯಕ್ಕಿಂತ ಹೆಚ್ಚು ನೀರು ಕುಡಿಯುವುದರಿಂದ ಮೂತ್ರಪಿಂಡಗಳಿಗೆ ಒತ್ತಡ ಹೆಚ್ಚಾಗಿ, ಕಾರ್ಯ ನಿರ್ವಹಣೆಗೆ ಅಡ್ಡಿಯಾಗುತ್ತದೆ. ಬ್ರೂಸ್​ ಲೀ ಸಾವಿಗೂ ನೀರೇ ಕಾರಣ. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಹೈಪೋನಾಟ್ರೀಮಿಯಾ ಎನ್ನುತ್ತಾರೆ.

ತಾಯಿಯ ಹೋರಾಟ, ನಂಬಿಕೆಯೇ ಗೆದ್ದಿತು..ಏಳು ವರ್ಷ ಜೈಲಿನಲ್ಲಿದ್ದ ಮಗ ನಿರಪರಾಧಿ

ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿದ್ರೆ ದೇಹದಲ್ಲಿನ ಸೋಡಿಯಂ ಮಟ್ಟ ಕಡಿಮೆಯಾಗುತ್ತದೆ. ಸೋಡಿಯಂ ಮಟ್ಟ ಕಡಿಮೆಯಾದರೆ ಮೆದುಳಿನ ಕೋಶಗಳ ಊತಕ್ಕೆ ಕಾರಣವಾಗಬಹುದು. ವ್ಯಕ್ತಿಯೊಬ್ಬ ದಿನಕ್ಕೆ 3 ಲೀಟರ್​ ಕುಡಿದರೆ ಸಾಕು ಅಂತಾರೆ ವೈದ್ಯರು. ಮನುಷ್ಯನಿಗೇ ನೀರೇ ಶತ್ರು, ನೀರೇ ಮಿತ್ರ.

Be Water My Friend ಅಂತ ಡೈಲಾಗ್ ಹೇಳಿದ್ದ ಹಾಲಿವುಡ್ ದಂತಕಥೆ ಬ್ರೂಸ್​ ಲೀ ಪಾಲಿಗೆ ವಾಟರ್ ವಿಲನ್​ ಆಗಿದ್ದು ಸುಳ್ಳಲ್ಲ..!

Follow Us:
Download App:
  • android
  • ios