UPSC ಪಾಸಾದ ಕನ್ನಡಿಗರ ಯಶೋಗಾಥೆ..!

*  ಐಪಿಎಸ್‌ ಅಣ್ಣನ ಮಾರ್ಗದರ್ಶನದಲ್ಲಿ ತಮ್ಮ ಐಎಎಸ್‌ ಪಾಸ್‌
*  ಕೆಎಎಸ್‌ ಅಧಿಕಾರಿ ಅಣ್ಣನ ಮಾರ್ಗದರ್ಶನದಲ್ಲಿ ಮಮತಾ ಸಾಧನೆ
*  ಸರ್ಕಾರಿ ಶಾಲೆಯಲ್ಲಿ ಕಲಿತು ಐಎಎಸ್‌ ಪಾಸ್‌

Kannadigas Got Good Rank in UPSC Exam grg

ಬೆಂಗಳೂರು(ಸೆ.26):  ಸರ್ಕಾರಿ ಶಾಲೆಗಳು ಎಂದರೆ ನಿರ್ಲಕ್ಷ್ಯ ಮಾಡುವ ಜನರೇ ಜಾಸ್ತಿ. ಆದರೆ, ಸರ್ಕಾರಿ ಶಾಲೆಯಲ್ಲೇ ಕಲಿತ ವಿದ್ಯಾರ್ಥಿಯೋರ್ವ ಇದೀಗ ಯುಪಿಎಸ್‌ಸಿನಲ್ಲಿ(UPSC) ದೇಶಕ್ಕೆ 385ನೇ  ರ‍್ಯಾಂಕ್ ಪಡೆದುಕೊಂಡಿದ್ದಾನೆ. ವಿಜಯಪುರ(Vijayapura) ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಕೋರವಾರ ಶಾಲೆಯ ಹಿರಿಯ ಶಿಕ್ಷಕರಾದ ಅಮಗೊಂಡ ಎಸ್‌.

ವಾಡಿ ಅವರ ಹಿರಿಯ ಪುತ್ರ ಸಾಗರ ವಾಡಿ ಈ ವಿದ್ಯಾರ್ಥಿ. ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿಂಗಣಿ ಗ್ರಾಮದವರು. 1ನೇ ತರಗತಿ ಇಂಡಿ ತಾಲೂಕಿನ ಚವಡಿಹಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ, 2 ರಿಂದ 5ನೇ ತರಗತಿಯವರೆಗೆ ಕೋರವಾರದ ಸರ್ಕಾರಿ ಶಾಲೆಯಲ್ಲಿ(Government School) ಹಾಗೂ 6 ರಿಂದ 12ನೇ ತರಗತಿವರೆಗೆ ಆಲಮಟ್ಟಿಯ ನವೋದಯ ಶಾಲೆಯಲ್ಲಿ ಅಭ್ಯಾಸ ನಡೆಸಿದ್ದಾರೆ. ಸುರತ್ಕಲ್‌ನಲ್ಲಿ ಎಲೆಕ್ಟ್ರಾನಿಕ್ಸ್‌ ಅಂಡ್‌ ಎಲೆಕ್ಟ್ರಿಕಲ್‌ನಲ್ಲಿ ಬಿಟೆಕ್‌ ಮುಗಿಸಿದ್ದು, ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರಿ ಸೌಮ್ಯದ ಪವರ ಗ್ರಿಡ್‌ ಕಂಪನಿಯಲ್ಲಿ ಎಂಜಿನಿಯರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಸತತ 3ನೇ ಪ್ರಯತ್ನದಲ್ಲಿ ಸಾಗರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 385ನೇ ಸ್ಥಾನ ಪಡೆಯುವ ಮೂಲಕ ಗ್ರಾಮ ಜಿಲ್ಲೆ ಹಾಗೂ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ.

ರಾಜ್ಯದ 16 ಮಂದಿ ಐಎಎಸ್‌ ಪಾಸ್‌ : ಕನ್ನಡ ಐಚ್ಛಿಕ ವಿಷಯ ತೆಗೆದುಕೊಂಡಿದ್ದ ಅಕ್ಷಯ್‌ ರಾಜ್ಯಕ್ಕೆ ಪ್ರಥಮ

ಐಎಎಸ್‌ ಪಾಸಾದ ಕೆಎಎಸ್‌ ಅಧಿಕಾರಿ

ಕೆಎಎಸ್‌(KAS) ಅಧಿಕಾರಿಯೊಬ್ಬರು ಐಎಎಸ್‌ ಪರೀಕ್ಷೆಯಲ್ಲಿ ರಾರ‍ಯಂಕ್‌ ಪಡೆದ ಕತೆಯಿದು. ಬೆಳಗಾವಿ(Belagavi) ಜಿಲ್ಲೆಯ ಸವದತ್ತಿ ತಾಲೂಕಿನ ರಾಮಾಪುರ ಸೈಟ್‌ನ ಶಾಕೀರ ಅಹ್ಮದ ಅಕಬರಸಾಬ ತೊಂಡಿಖಾನ ಯುಪಿಎಸ್‌ಸಿ ಪರೀಕ್ಷೆಯಲ್ಲಿ 583ನೇ ರಾರ‍ಯಂಕ್‌ ಗಳಿಸಿದ ಕೆಎಎಸ್‌ ಅಧಿಕಾರಿ. ಬಿಇ ಪದವೀಧರಾದ ಜಾಕೀರ, ಮೊದಲು ಸ್ಯಾಮ್‌ಸಂಗ್‌ ಕಂಪನಿಯ ಬೆಂಗಳೂರು ಶಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. 

ಕೆಪಿಎಸ್‌ಸಿ 2014ನೇ ಸಾಲಿನ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದರು. ಮತ್ತೆ ಕೆಪಿಎಸ್ಸಿ ಪರೀಕ್ಷೆ ಬರೆದಿದ್ದ ಅವರು 2015ರಲ್ಲಿ ಫಲಿತಾಂಶ ಸುಧಾರಿಸಿಕೊಂಡಿದ್ದರು. ಸದ್ಯ ಹುಬ್ಬಳ್ಳಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾಗಿ ತರಬೇತಿಯಲ್ಲಿದ್ದಾರೆ. ಕೆಲಸದಲ್ಲಿದ್ದುಕೊಂಡೇ ಓದಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆ ತೋರಿದ್ದಾರೆ. ಶಾಕೀರ ಹುಕ್ಕೇರಿಯಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡಿದ್ದು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಪ್ರಥನ ಸ್ಥಾನ ಗಳಿಸಿದ್ದರು. ಬೆಳಗಾವಿಯ ಆರ್‌ಎಲ್‌ಎಸ್‌ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ ಅವರು, ಬೆಂಗಳೂರಿನ ಬಿಎಂಎಸ್‌ ಎಂಜಿನಿಯರಿಂಗ್‌ ಪದವಿಯನ್ನು ರಾರ‍ಯಂಕ್‌ ಮತ್ತು ಚಿನ್ನದ ಪದಕದೊಂದಿಗೆ ಪಡೆದಿದ್ದಾರೆ.

ಐಚ್ಛಿಕ ಕನ್ನಡದ ವಿದ್ಯಾರ್ಥಿ ತರಬೇತಿ ಪಡೆಯದೆ ಪಾಸ್‌

ಓದಿದ್ದು ಸಿವಿಲ್‌ ಎಂಜಿನಿಯರಿಂಗ್‌ ಆದರೂ ಐಚ್ಛಿಕ ವಿಷಯವನ್ನಾಗಿ ಐಚ್ಛಿಕ ಕನ್ನಡ(Kannada) ತೆಗೆದುಕೊಂಡ ವಿದ್ಯಾರ್ಥಿನಿಯೊಬ್ಬಳು ಯಾವುದೇ ತರಬೇತಿ ಪಡೆಯದೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ 707ನೇ ರಾರ‍ಯಂಕ್‌ಗಳಿಸಿದ್ದಾಳೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ದೇವಪುರ ಭೋವಿಹಟ್ಟಿಯ ಮಮತಾ ಈ ಸಾಧಕಿ. ಪಿಯುಸಿಯಲ್ಲೇ ಕಂಡ ಐಎಎಸ್‌ ಕನಸನ್ನು ಕೆಲ ವರ್ಷಗಳಲ್ಲೇ ನನಸಾಗಿಸಿಕೊಂಡಿದ್ದಾಳೆ.

UPSC Results 2020: ಯುಪಿಎಸ್‌ಸಿ ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟ

ಶಿಕ್ಷಕ ಗೋವಿಂದಪ್ಪ, ಚಂದ್ರಮ್ಮ ದಂಪತಿಯ ಪುತ್ರಿಯಾದ ಮಮತಾ, ಕುಗ್ರಾಮವಾದ ದೇವಪುರ ಭೋವಿಹಟ್ಟಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ಬಳಿಕ ಸಂತ ಅಂಥೋಣಿ ಸ್ಕೂಲ್‌ನಲ್ಲಿ ಪ್ರೌಢಶಾಲೆ ಪೂರ್ಣಗೊಳಿಸಿದರು. ಬಳಿಕ ಶಿವಮೊಗ್ಗದಲ್ಲಿ ಪಿಯುಸಿ (ವಿಜ್ಞಾನ) ಮುಗಿಸಿದ್ದು, ಮೆಡಿಕಲ್‌ ಪ್ರವೇಶಕ್ಕೆ ಅರ್ಹತೆ ದೊರೆತರೂ ಸಹ ಐಎಎಸ್‌ ಕನಸು ನನಸು ಮಾಡಿಕೊಳ್ಳಲು ಬೆಂಗಳೂರಿನ ಆರ್‌ವಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಸಿವಿಲ್‌ ವಿಭಾಗಕ್ಕೆ ಪ್ರವೇಶ ಪಡೆದು ಯುಪಿಎಸ್ಸಿಗೆ ಸಿದ್ಧತೆ ನಡೆಸಿದ್ದರು. ಇಂಜಿನಿಯರಿಂಗ್‌ ಓದುವಾಗಲೇ ಕೆಎಎಸ್‌ ಅಧಿಕಾರಿಯಾದ ಅಣ್ಣ ಯೋಗೇಶ್‌ ಮಾರ್ಗದರ್ಶನದಲ್ಲಿ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿ ಈಗ ಪಾಸ್‌ ಆಗಿದ್ದಾರೆ.

ಐಪಿಎಸ್‌, ಐಎಎಸ್‌ ಅಧಿಕಾರಿಗಳಾದ ಅಣ್ತಮ್ಮ!

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ರಾರ‍ಯಂಕಿಂಗ್‌ ಗಳಿಸುವ ಮೂಲಕ ಐಪಿಎಸ್‌(IPS) ಶ್ರೇಣಿಗೇರಿದ ಅಣ್ಣನ ಮಾರ್ಗದರ್ಶನದಲ್ಲೇ, ಯಾವುದೇ ಕೋಚಿಂಗ್‌ ಇಲ್ಲದೇ ಸಹೋದರ ಐಎಎಸ್‌ ಶ್ರೇಣಿಗೇರುವಂಥ ರಾರ‍ಯಂಕ್‌ ಪಡೆದಿದ್ದಾರೆ. 

ಬೀದರ್‌ ಜಿಲ್ಲೆಯ ಮಹ್ಮದ್‌ ಹ್ಯಾರೀಸ್‌ ಸುಮೇರ್‌. ಬೀದರ್‌ನ ಹಳೆ ಭಾಗದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಮಹ್ಮದ್‌ ನಯಿಮೋದ್ದಿನ್‌ ಅವರ ಕಿರಿಯ ಪುತ್ರ ಹ್ಯಾರೀಸ್‌ ಈಗ ಯುಪಿಎಸ್‌ಸಿ ಪರೀಕ್ಷೆಯಲ್ಲಿ 270ನೇ ರಾರ‍ಯಂಕಿಂಗ್‌ ಪಡೆದಿದ್ದಾರೆ. ಅತ್ಯುತ್ತಮ ರಾರ‍ಯಂಕಿಂಗ್‌ ಇದಾಗಿದ್ದು, ಐಎಎಸ್‌ ಶ್ರೇಣಿಗೇರುವ ಅದರಲ್ಲಿಯೂ ಕರ್ನಾಟಕ ಕೇಡರ್‌ನಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಗುವ ಸಾಧ್ಯತೆಗಳು ನಿಚ್ಚಳವಾಗಿವೆ. ತಂದೆಯ ಪರಿಶ್ರಮ, ಶಿಸ್ತು ಬದ್ಧ ಜೀವನದ ದಾರಿಯಲ್ಲಿ ಸಾಗುತ್ತಿರುವ ಮಕ್ಕಳ ಈ ಸಾಧನೆ ಇಡೀ ಕುಟುಂಬ ಸಂತಸದಲ್ಲಿ ತೇಲುತ್ತಿದೆ.
 

Latest Videos
Follow Us:
Download App:
  • android
  • ios