Asianet Suvarna News Asianet Suvarna News

ಜನಧನ ಖಾತೆ ಸಂಖ್ಯೆ 50 ಕೋಟಿಗೆ: ಸರ್ಕಾರ ಹರ್ಷ

 9 ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿಯೇ ಜನಧನ ಖಾತೆಗಳ (Jan Dhan account) ಸಂಖ್ಯೆ 50 ಕೋಟಿಯನ್ನು ಮೀರಿದೆ. ಇದರಲ್ಲಿ ಶೇ.56ರಷ್ಟು ಖಾತೆಗಳು ಮಹಿಳೆಯರಿಗೆ ಸೇರಿವೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

Jan Dhan account number reached to 50 crore under Pradhan Mantri Jan Dhan Yojana akb
Author
First Published Aug 19, 2023, 6:32 AM IST

ನವದೆಹಲಿ: 9 ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿಯೇ ಜನಧನ ಖಾತೆಗಳ (Jan Dhan account) ಸಂಖ್ಯೆ 50 ಕೋಟಿಯನ್ನು ಮೀರಿದೆ. ಇದರಲ್ಲಿ ಶೇ.56ರಷ್ಟು ಖಾತೆಗಳು ಮಹಿಳೆಯರಿಗೆ ಸೇರಿವೆ ಎಂದು ಹಣಕಾಸು ಸಚಿವಾಲಯ ಶುಕ್ರವಾರ ಹೇಳಿದೆ. ಜನಧನ ಖಾತೆಗಳಲ್ಲಿ ಶೇ.67ರಷ್ಟು ಖಾತೆಗಳನ್ನು ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ತೆರೆಯಲಾಗಿದೆ. ಈ ಖಾತೆಗಳಲ್ಲಿ ಸುಮಾರು 2.03 ಲಕ್ಷ ಕೋಟಿ ರು. ಠೇವಣಿ ಇಡಲಾಗಿದೆ. ಪ್ರಧಾನಮಂತ್ರಿ ಜನಧನ ಯೋಜನೆಯಡಿ (Pradhan Mantri Jan Dhan Yojana) ತೆರೆಯಲಾದ ಈ ಖಾತೆಗಳಲ್ಲಿ ಸರಾಸರಿ 4,046 ರು. ಠೇವಣಿ ಇದೆ. ಸುಮಾರು 5.5 ಕೋಟಿ ಖಾತೆಗಳು ನೇರ ನಗದು ವರ್ಗಾವಣೆ ಲಾಭವನ್ನು ಪಡೆದುಕೊಳ್ಳುತ್ತಿವೆ ಎಂದು ಸಚಿವಾಲಯ ಹೇಳಿದೆ. ಬ್ಯಾಂಕ್‌ ಖಾತೆಯನ್ನೇ ಹೊಂದಿರದವರು ಶೂನ್ಯ ಠೇವಣಿಯೊಂದಿಗೆ ಜನಧನ ಖಾತೆ ಆರಂಭಿಸಲು ಮೋದಿ ಸರ್ಕಾರ 2014ರಲ್ಲಿ ಯೋಜನೆ ಜಾರಿಗೊಳಿಸಿತ್ತು.

ಸಾಲಕ್ಕೆ ಫಿಕ್ಸೆಡ್‌ ಬಡ್ಡಿ ದರದ ಆಯ್ಕೆ ನೀಡಿ: ಬ್ಯಾಂಕುಗಳಿಗೆ ಆರ್‌ಬಿಐ ಸೂಚನೆ

ಬ್ಯಾಂಕುಗಳು ಹಾಗೂ ಸಾಲ ನೀಡುವ ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ಫಿಕ್ಸೆಡ್‌ (ಬದಲಾಗದ) ಬಡ್ಡಿ ದರದ ಆಯ್ಕೆ ನೀಡಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಸೂಚನೆ ನೀಡಿದೆ. ಸದ್ಯ ಆರ್‌ಬಿಐ ಬಡ್ಡಿ ದರಗಳನ್ನು ಬದಲಾಯಿಸಿದಾಗಲೆಲ್ಲ ಬ್ಯಾಂಕುಗಳು ಗ್ರಾಹಕರಿಗೆ ನೀಡಿದ ಸಾಲದ ಮೇಲಿನ ಬಡ್ಡಿ ದರಗಳೂ ಬದಲಾಗುತ್ತವೆ. ಸಾಕಷ್ಟುಗ್ರಾಹಕರು ತಮಗೆ ಗೊತ್ತಿಲ್ಲದೆಯೇ ಬ್ಯಾಂಕುಗಳು ಬಡ್ಡಿ ದರ ಬದಲಾಯಿಸುತ್ತಿವೆ ಎಂದು ಆರ್‌ಬಿಐಗೆ ದೂರು ನೀಡಿದ್ದರು. 

ಜೊತೆಗೆ ತಮ್ಮ ಸಾಲದ ಕಂತಿನ (ಇಎಂಐ) ಸಂಖ್ಯೆಯನ್ನು ಬ್ಯಾಂಕುಗಳು ಮಾಹಿತಿ ನೀಡದೇ ಏರಿಸುತ್ತಿರುವ ಬಗ್ಗೆಯೂ ದೂರಿತ್ತಿದ್ದರು. ಈ ಹಿನ್ನೆಲೆಯಲ್ಲಿ, ಸಾಲದ ಮೇಲಿನ ಬಡ್ಡಿ ದರ ಮರುಹೊಂದಾಣಿಕೆಯ ಸಮಯದಲ್ಲಿ ಗ್ರಾಹಕರಿಗೆ ಈಗಿರುವ ಫ್ಲೋಟಿಂಗ್‌ (ಬದಲಾಗುವ) ಬಡ್ಡಿ ದರದ ಜೊತೆಗೆ ನಿಶ್ಚಿತ ಬಡ್ಡಿ ದರದ ಆಯ್ಕೆಯನ್ನೂ ನೀಡಬೇಕು. ಹಾಗೆಯೇ, ಕಂತುಗಳ ಸಂಖ್ಯೆಯನ್ನು ಬದಲಾಯಿಸುವ ಅಥವಾ ಮೊದಲಿದ್ದಷ್ಟೇ ಉಳಿಸಿಕೊಳ್ಳುವ ಆಯ್ಕೆಯನ್ನೂ ನೀಡಬೇಕು ಎಂದು ಆರ್‌ಬಿಐ (Reserve Bank of India) ಸೂಚನೆ ನೀಡಿದೆ. ಬಡ್ಡಿ ದರ ಬದಲಾವಣೆ ಅಥವಾ ಕಂತುಗಳ ಸಂಖ್ಯೆಯ ಬದಲಾವಣೆಯ ಸಮಯದಲ್ಲಿ ಬ್ಯಾಂಕುಗಳು ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡಬೇಕು ಎಂದೂ ಸೂಚಿಸಿದೆ. ಕೆಲ ವರ್ಷಗಳ ಹಿಂದಿನವರೆಗೆ ಸಾಲಕ್ಕೆ ನಿಶ್ಚಿತ ಹಾಗೂ ಬದಲಾಗುವ ಎರಡೂ ರೀತಿಯ ಬಡ್ಡಿ ದರಗಳ ಆಯ್ಕೆ ಗ್ರಾಹಕರಿಗಿತ್ತು. ನಂತರ ಅದನ್ನು ನಿಲ್ಲಿಸಲಾಗಿತ್ತು.

Udgam Portal: ಅಜ್ಜ-ಅಜ್ಜಿ ಇಟ್ಟ ನಿಧಿಗಾಗಿ ಇನ್ನು ಹುಡುಕಾಟ ಬೇಕಿಲ್ಲ.. ಆರ್‌ಬಿಐ ಪರಿಚಯಿಸಿದೆ ಉದ್ಗಮ್‌ ಪೋರ್ಟಲ್‌..!

ಇಎಂಐ ವಿಳಂಬ ಮಾಡಿದರೆ ಇನ್ನು ಶಿಕ್ಷೆ ಬಡ್ಡಿ ಇಲ್ಲ

ಸಾಲದ ಕಂತು (EMI) ಪಾವತಿಸಲು ವಿಳಂಬ ಮಾಡುವ ಗ್ರಾಹಕರಿಗೆ ಬ್ಯಾಂಕುಗಳು ದಂಡದ ರೂಪದಲ್ಲಿ ಬಡ್ಡಿ ದರ ಏರಿಕೆ ಮಾಡುವ ಪರಿಪಾಠಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ತಡೆಯೊಡ್ಡಿದೆ. 2024ರ ಜ.1ರಿಂದ ‘ಶಿಕ್ಷೆ ಬಡ್ಡಿ’ಯನ್ನು ನಿಲ್ಲಿಸಬೇಕು ಹಾಗೂ ದಂಡದ ರೂಪದಲ್ಲಿ ನಿಗದಿತ ಮೊತ್ತವನ್ನು ಮಾತ್ರ ಗ್ರಾಹಕರಿಗೆ ವಿಧಿಸಬೇಕು ಎಂದು ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳಿಗೆ ಆದೇಶ ನೀಡಿದೆ. ಕೆಲ ಬ್ಯಾಂಕ್‌ ಹಾಗೂ ಹಣಕಾಸು ಸಂಸ್ಥೆಗಳು ಇಎಂಐ ಪಾವತಿ ವಿಳಂಬ ಮಾಡುವ ಗ್ರಾಹಕರನ್ನು ಶಿಕ್ಷಿಸುವ ನೆಪದಲ್ಲಿ ಅವರಿಗೆ ದಂಡ ವಿಧಿಸುವುದರ ಜೊತೆಗೆ ಬಡ್ಡಿ ದರವನ್ನು ಕೂಡ ಏರಿಕೆ ಮಾಡಿ ಹಣ ಮಾಡಿಕೊಳ್ಳುತ್ತಿದ್ದವು. 2024ರ ಜ.1ರಿಂದ ಹೀಗೆ ಬಡ್ಡಿ ದರ ಏರಿಕೆ ಮಾಡುವಂತಿಲ್ಲ. ಬದಲಿಗೆ, ‘ಅಲ್ಪ ಪ್ರಮಾಣದ’ ದಂಡವನ್ನು ಮಾತ್ರ ವಿಧಿಸಬೇಕು ಎಂದು ಆರ್‌ಬಿಐ ಸೂಚಿಸಿದೆ. ಆದರೆ ಈ ಸೂಚನೆಯು ಕ್ರೆಡಿಟ್‌ ಕಾರ್ಡ್‌, ಬಾಹ್ಯ ಸಾಲ, ಟ್ರೇಡ್‌ ಕ್ರೆಡಿಟ್‌ಗಳಿಗೆ ಅನ್ವಯಿಸುವುದಿಲ್ಲ ಎಂದೂ ಆರ್‌ಬಿಐ ಹೇಳಿದೆ.

ರೆಪೋ ದರ ಸ್ಥಿರ: ಹೂಡಿಕೆ, ಸಾಲ ಮರುಪಾವತಿಗೆ ಇದು ಸೂಕ್ತ ಸಮಯವೇ?

 

Follow Us:
Download App:
  • android
  • ios