Asianet Suvarna News Asianet Suvarna News

ಉದ್ಯಮಿಗಳ ಜೊತೆಗಿನ ಸ್ನೇಹ ಅಪವಿತ್ರವೇ?

ಸರ್ಕಾರ ಉದ್ಯಮಿಗಳ ಪರ ಇರೋದು ತಪ್ಪಾ?

ಉದ್ಯಮಿಸ್ನೇಹಿ ಸರ್ಕಾರ ಇರೋದು ಅಪರಾಧ?

ವಿಪಕ್ಷಗಳ ಆರೋಪ ನ್ಯಾಯಸಮ್ಮತವೇ?

ಉದ್ಯಮಿಗಳ ಜೊತೆ ಸ್ನೇಹ ಹೊಂದುವುದು ತಪ್ಪೇ? 

ಬೆಂಗಳೂರು(ಜು.31): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉದ್ಯಮಿಗಳ ಪರ ಇದ್ದು, ಬಡವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂಬುದು ಪ್ರತಿಪಕ್ಷಗಳ ಆರೋಪ.

ಇದಕ್ಕೆ ಸೂಕ್ತ ತಿರುಗೇಟು ನೀಡಿರುವ ಪ್ರಧಾನಿ ಮೋದಿ, ಉದ್ಯಮಿಗಳ ಪರ ಇರೋದು ದೇಶದ್ರೋಹವೇ ಎಂದು ಪ್ರಶ್ನಿಸಿದ್ದಾರೆ. ದೇಶದ ಅಭಿವೃದ್ಧಿಗಾಗಿ ಕೈಗಾರಿಕಾ ವಲಯದ ಕೊಡುಗೆಯನ್ನು ನಾವು ಮರೆಯಬಾರದು ಎಂಬ ಸಂದೇಶವನ್ನು ಪ್ರಧಾನಿ ಈ ಮೂಲಕ ರವಾನಿಸಿದ್ದರು.

ಅದರಲ್ಲೂ ಮೋದಿ ಸರ್ಕಾರ ರಿಲಯನ್ಸ್ ಸಮೂಹ ಸಂಸ್ಥೆ ಮುಖ್ಯಸ್ಥ ಅನಿಲ್ ಅಂಬಾನಿ ಅವರಂತ ಉದ್ಯಮಿಗಳ ಪರ ನಿಲುವು ಹೊಂದಿದೆ ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಕ್ಕೆ ಮೋದಿ ಮೇಲಿನಂತೆ ತಿರುಗೇಟು ನೀಡಿದ್ದಾರೆ.

ದೇಶ ಕಟ್ಟುವಲ್ಲಿ ಉದ್ಯಮಿಗಳೂ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಕೈಗಾರಿಕಾ ವಲಯದ ಜೊತೆ ಸರ್ಕಾರದ ಉತ್ತಮ ಸಂಬಂಧ ದೇಶದ ಅಭಿವೃದ್ಧಿಗೆ ಪೂರಕ ಎಂದು ಪ್ರಧಾನಿ ಹೇಳಿದ್ದಾರೆ.

ಹಾಗಾದರೆ ವಿಪಕ್ಷಗಳು ಆರೋಪಿಸುತ್ತಿರುವಂತೆ ಮೋದಿ ಕೈಗಾರಿಕೋದ್ಯಮಿಗಳ ಪರ ಇರುವುದು ತಪ್ಪಾ?, ದೇಶದ ಅಭಿವೃದ್ಧಿಗಾಗಿ ಕೈಗಾರಿಕಾ ವಲಯದ ಸಹಾಯ ಅಪೇಕ್ಷಿಸುವುದು ತಪ್ಪಾ?, ವಿಪಕ್ಷಗಳ ಆರೋಪ ಕೇವಲ ರಾಜಕೀಯ ಗಿಮಿಕ್ ಎಂಬುದು ನಿಜವೇ?. 


ಈ ಕುರಿತು ನಿಮ್ಮ ಸುವರ್ಣನ್ಯೂಸ್ ನ ಲೆಫ್ಟ್ ರೈಟ್ ಆ್ಯಂಡ್ ಸೆಂಟರ್ ನಲ್ಲಿ ನಡೆದ ಚರ್ಚೆಯ ಸಂಪೂರ್ಣ ವಿವರ ಇಲ್ಲಿದೆ..